BMTC : ಬಿಎಂಟಿಸಿ 25 ವರ್ಷ ಪೂರೈಸಿದ ಹಿನ್ನೆಲೆ, ಪ್ರಯಾಣಿಕರಿಗೆ ಉಚಿತ ಪ್ರಯಾಣ! 

ಆ.15ರಂದು ಎಸಿ ಬಸ್ ಸಹಿತ ಎಲ್ಲ ರೀತಿಯ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆ.14ರಂದು ಬೆಳಗ್ಗೆ 10.30ರಿಂದ ಹೊಸ 300 ಎಲೆಕ್ಟ್ರಿಕ್ ಬಸ್ ಕಾರ್ಯಾರಂಭ ಮಾಡಲಿವೆ.

Written by - Channabasava A Kashinakunti | Last Updated : Aug 11, 2022, 01:33 PM IST
  • 25 ವರ್ಷ ಪೂರೈಸಿದ ಬಿಎಂಟಿಸಿ
  • ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್
  • ಎಲ್ಲ ರೀತಿಯ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ
BMTC : ಬಿಎಂಟಿಸಿ 25 ವರ್ಷ ಪೂರೈಸಿದ ಹಿನ್ನೆಲೆ, ಪ್ರಯಾಣಿಕರಿಗೆ ಉಚಿತ ಪ್ರಯಾಣ!  title=

ಬೆಂಗಳೂರು : ಬಿಎಂಟಿಸಿ 25 ವರ್ಷ ಪೂರೈಸಿದ ಹಾಗೂ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ, ಆ.15ರಂದು ಎಸಿ ಬಸ್ ಸಹಿತ ಎಲ್ಲ ರೀತಿಯ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆ.14ರಂದು ಬೆಳಗ್ಗೆ 10.30ರಿಂದ ಹೊಸ 300 ಎಲೆಕ್ಟ್ರಿಕ್ ಬಸ್ ಕಾರ್ಯಾರಂಭ ಮಾಡಲಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. 

ಇದನ್ನೂ ಓದಿ : Basavaraj Bommai : 'ಸಿಎಂ ಬದಲಾವಣೆ ಮಾತುಗಳಿಗೆ ಆಧಾರವಿಲ್ಲ'

ಎಲೆಕ್ಟ್ರಿಕ್ ಬಸ್ ಗಳು ವಾಯು ಮಾಲಿನ್ಯ ವಿಚಾರದಲ್ಲಿ ಸದಾ ಉಪಯುಕ್ತವಾಗಿವೆ.  ಆ.16ರಂದು ಅಪಘಾತ ಆಗದೇ ವಾಹನ ಚಾಲನೆ ಮಾಡಿದ ಚಾಲಕ ಸಿಬ್ಬಂದಿಗೆ ಪದಕ ಸಮರ್ಪಣೆ ಮಾಡಲಾಗುತ್ತದೆ. ಹಾಗೆ, 45  ವರ್ಷಕ್ಕೂ ಮೇಲ್ಪಟ್ಟ ನಮ್ಮ ಕಾರ್ಮಿಕರಿಗೆ ಜಯದೇವ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ತಪಾಸಣೆ ಆಯೋಜನೆ ಮಾಡಲಾಗಿದೆ. ಇದಕ್ಕೆ ಪ್ರತಿ ನಿತ್ಯ ಸ್ವಲ್ಪ ಜನರನ್ನ ಹಂತ ಹಂತವಾಗಿ ಕಳುಹಿಸಿ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1997ರಲ್ಲಿ ವಿಭಾಗಗಳಾಗಿ ಮಾಡಲಾಯಿತು. ಆ ಸಂಧರ್ಭದಲ್ಲಿ ಬೆಂಗಳೂರು ನಗರಕ್ಕೆ ಸಾರಿಗೆ ಸೇವೆ ನೀಡಲು ಪ್ರತ್ಯೆಕ ಸಾರಿಗೆ ಸಂಸ್ಥೆ ಬೆಂಗಳೂರು ಸಾರಿಗೆ ಸೇವೆ (BTS) ರಚಿಸಲಾಯಿತು. ನಂತರ ಬೆಂಗಳೂರು ಸಾರಿಗೆ ಸೇವೆ (BTS) ನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯಿತು. ಮತ್ತು ಬಿಟಿಸ್ ಬಸ್ ಗಳ ಕೆಂಪು ವರ್ಣವನ್ನು ವರ್ಣವನ್ನು ನೀಲಿ ಮತ್ತು ಬಿಳಿಗೆ ಬದಲಾಯಿಸಲಾಯಿತು. ಬಸ್ ಸೇವೆ ಒದಗಿಸುವ ಕರ್ನಾಟಕ ಸರ್ಕಾರ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಇದು ಭಾರತದ ಸಾರ್ವಜನಿಕ ಸಾರಿಗೆಗಳಲ್ಲಿ ಹೆಚ್ಚು ವೋಲ್ವೋ ಬಸ್ ಹೊಂದಿದೆ.

ಇದನ್ನೂ ಓದಿ : ನಟ ಯಶ್ ಜೊತೆ ಮೈಸೂರಿಗೆ ತೆರಳಿದ ಸಿಎಂ ಬೊಮ್ಮಾಯಿ : ನಾಯಕತ್ವ ಬದಲಾವಣೆ ಬಗ್ಗೆ ಹೀಗಂದ್ರು..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News