ಕನ್ನಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿಗಳು

                         

Last Updated : Nov 1, 2017, 12:49 PM IST
ಕನ್ನಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿಗಳು title=

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕರ್ನಾಟಕದ 22ನೇ ಮುಖ್ಯಮಂತ್ರಿ. ಅಷ್ಟೇ ಅಲ್ಲ ಅವರು ಅಪ್ಪಟ ಕನ್ನಡ ಅಭಿಮಾನಿ. ರಾಜಕೀಯ ಲಾಭ-ನಷ್ಟ ನೋಡದೆ ಕನ್ನಡ ಪ್ರೇಮಿಯಾಗಿ, ಕನ್ನಡದ ನಾಡು ನುಡಿಯ ರಕ್ಷಣೆಗೆ ಸದಾ ಕಂಕಣಬದ್ಧರಾಗಿರುವ ಧೀಮಂತ ಮುಖ್ಯಮಂತ್ರಿ. ನಾಡಿನ ಜನತೆಗೆ 62ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿರುವ ಅವರು "ಕನ್ನಡ ಎನ್ನುವುದು ನಮಗೆ ಬದುಕು-ಭಾವ ಮಾತ್ರವೇ ಅಲ್ಲ, ಭವ್ಯ ಭವಿಷ್ಯದ ಹೆದ್ದಾರಿ" ಎಂದು ತಿಳಿಸಿದ್ದಾರೆ.

ಕನ್ನಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತಷ್ಟು ನುಡಿಗಳು ನಿಮಗಾಗಿ:

* ನಾನು ಎಷ್ಟು ಕನ್ನಡಿಗನೋ, ಅಷ್ಟೇ ಭಾರತೀಯ. ಕರ್ನಾಟಕದಲ್ಲಿ ಹುಟ್ಟಿದ ಕಾರಣಕ್ಕೆ ನಾನು ಕನ್ನಡಿಗ, ಕನ್ನಡತನ ನನ್ನ ಮೊದಲ ಗುರುತು. ಕನ್ನಡಿಗನಾದ ಕಾರಣಕ್ಕೆ ನಾನು ಭಾರತೀಯ.

* ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕನ್ನಡದ ಜನ, ನೆಲ, ಜಲ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡ ಕನ್ನಡತನ.

* ಕನ್ನಡ ನಮ್ಮ ಅಸ್ಮಿತೆ, ಕನ್ನಡ ನಮ್ಮ ಅನನ್ಯತೆ, ಕನ್ನಡವೇ ನಮ್ಮ ಆದ್ಯತೆ.

* ಪ್ರತಿಯೊಂದು ರಾಜ್ಯಭಾಷೆ ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಅನ್ಯಭಾಷೆಯ ಆಧಿಪತ್ಯ ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು.

* ಸ್ಥಳೀಯ ಭಾಷೆಯ ಸ್ವಾಯತ್ತತೆ ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ. ಇದು ನಮ್ಮ ಸರ್ಕಾರದ ನೀತಿ.

* ಇಂಗ್ಲೀಷ್ ಇಲ್ಲವೆ ಹಿಂದಿ ಭಾಷೆಗೆ ನಮ್ಮ ವಿರೋಧ ಖಂಡಿತ ಇಲ್ಲ. ಆದರೆ ಕನ್ನಡದ ಬೆಲೆ ತೆತ್ತು ಬೇರೆ ಭಾಷೆಗಳ ಹೇರಿಕೆಯನ್ನು ನಾವು ಒಪ್ಪುವುದಿಲ್ಲ.

* ಕನ್ನಡದಲ್ಲಿ ಕಲಿತ ಸಿ.ಎನ್.ಆರ್.ರಾವ್ ವಿಶ್ವ ವಿಖ್ಯಾತ ವಿಜ್ಞಾನಿ. ನಾನು ಈ ರಾಜ್ಯದ ಮುಖ್ಯಮಂತ್ರಿ.          ಕನ್ನಡದಲ್ಲಿ ಕಲಿತರೆ ಭವಿಷ್ಯವಿಲ್ಲ ಎನ್ನುವುದು ನಿಜ ಅಲ್ಲ.

* ಕನ್ನಡಿಗರೆಲ್ಲರೂ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ ಎಂದು ಸಂಕಲ್ಪ ಮಾಡಿದರೆ ಕನ್ನಡದ ಸ್ಥಾನಮಾನ ಅಜರಾಮರವಾಗಿ ಉಳಿಯಲಿದೆ.

* ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು.

* ಆಂಗ್ಲ ಭಾಷಾ ಶಾಲೆಗಳಲ್ಲಿ ಕಲಿತರೆ ಮಾತ್ರ ಬದುಕು-ಭವಿಷ್ಯ ಎಂಬ ಹುಸಿ ನಂಬಿಕೆ ಪೋಷಕರಲ್ಲಿ ಮನೆ ಮಾಡಿರುವುದು ಭಾಷಾ ಮಾಧ್ಯಮದ ಅನುಷ್ಠಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

* ಕನ್ನಡ ನನಗೆ ರಾಜಕೀಯ ಅಲ್ಲ,ನಾನು ಹುಟ್ಟು ಕನ್ನಡಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ನಾಡು-ನುಡಿ ಬಗ್ಗೆ ರಾಜಿಮಾಡಿಕೊಂಡಿಲ್ಲ.

Trending News