ಗೋ ಬ್ಯಾಕ್ ಎಂದು ಕೂಗುವುದನ್ನು ಬಿಟ್ಟು ಧೈರ್ಯವಿದ್ದರೆ ಅವಿಶ್ವಾಸ ಮಂಡಿಸಲಿ: ಹೆಚ್‌ಡಿಕೆ ಸವಾಲು

ರಾಜ್ಯಪಾಲರು ಭಾಷಣ ಮಾಡುವ ವೇಳೆ ಧರಣಿ ನಡೆಸುವುದು, ಬಜೆಟ್ ಮಂಡನೆ ಮಾಡುವಾಗ ಪ್ರತಿಭಟನೆ ನಡೆಸುವುದು ಪ್ರಜಾತಂತ್ರ ವಿರೋಧಿ ಕ್ರಮ.

Last Updated : Feb 8, 2019, 08:30 AM IST
ಗೋ ಬ್ಯಾಕ್ ಎಂದು ಕೂಗುವುದನ್ನು ಬಿಟ್ಟು ಧೈರ್ಯವಿದ್ದರೆ ಅವಿಶ್ವಾಸ ಮಂಡಿಸಲಿ: ಹೆಚ್‌ಡಿಕೆ ಸವಾಲು title=
File Image

ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಜನರ ಮನಗೆಲ್ಲಲು ಮೈತ್ರಿ ಸರಕಾರಕ್ಕೆ ಈ ಆಯವ್ಯಯ ಮುಖ್ಯವೆನ್ನಿಸಿಕೊಂಡಿದೆ. ಮುಖ್ಯವಾಗಿ ಕೃಷಿಕರಿಗೆ ಈ ಬಜೆಟ್‌ನಲ್ಲಿ ವಿಶೇಷ ಕೊಡುಗೆ ನಿರೀಕ್ಷಿಸಲಾಗಿದೆ. ಆದರೆ ಬಜೆಟ್‌ ಮಂಡನೆಯ ಈ ಸಂದರ್ಭ ರಾಜಕೀಯವಾಗಿ ಮೈತ್ರಿ ಸರಕಾರಕ್ಕೆ ಆಯವೋ ವ್ಯಯವೋ ಎಂಬ ಬಗ್ಗೆ ಕುತೂಹಲ ಮೂಡಿದೆ. 

ಬಜೆಟ್ ಅಧಿವೇಶನದ ಮೊದಲ ದಿನ ಗದ್ದಲ ಸೃಷ್ಟಿಸಿದ್ದ ವಿರೋಧ ಪಕ್ಷದ ಶಾಸಕರು ಗುರುವಾರ ಕೂಡ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಗದ್ದಲ ಸೃಷ್ಟಿಸಿದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು ಸರ್ಕಾರಕ್ಕೆ ಬಹುಮತವಿಲ್ಲ, ಧಿಕ್ಕಾರ ಧಿಕ್ಕಾರ; ಸಿ ಎಂ ಗೋ ಬ್ಯಾಕ್‍  ಎಂದು ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. 

ಕಲಾಪ ಮುಂದೂಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿಯವರು ಗೋಬ್ಯಾಕ್ ಎಂದು ಕೂಗುವುದನ್ನು ಬಿಟ್ಟು, ಧೈರ್ಯವಿದ್ದರೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ' ಎಂದು ಬಿಜೆಪಿಗೆ ಸವಾಲು ಎಸೆದಿದ್ದಾರೆ.

ನಮ್ಮ ಸರ್ಕಾರ ಬಹುಮತ ಕಲೆದುಕೊನ್ದಿಎ ಎಂದು ಬಿಜೆಪಿ ಟೀಕಿಸುತ್ತಿದ್ದಾರೆ. ಅವರ ಜೊತೆ ಬಹುಮತ ಸಾಬೀತು ಪಡಿಸುವಷ್ಟು ಶಾಸಕರಿದ್ದಾರೆ ಅವಿಶ್ವಾಸ ಮಂಡಿಸಲಿ/ವಿಶ್ವಾಸ ಮತ ಸಾಬೀತು ಪಡಿಸಿ ಎಂದು ನನಗಾದರೂ ಹೇಳಲಿ. ನಾನು ವಿಶ್ವಾಸ ಮತ ಸಾಬೀತು ಪಡಿಸಲು ಸಿದ್ಧನಿದ್ದೇನೆ ಎಂದು ಪಂಥಾಹ್ವಾನ ನೀಡಿದರು.
 

Trending News