ದೇಶದಲ್ಲಿ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಉದ್ದೇಶ ಕಾಂಗ್ರೆಸ್'ನದ್ದು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ ಐವಾನ್ ಡಿಸೋಜ ಅವರ ಹೇಳಿಕೆ ಅರಾಜಕತೆ ಸೃಷ್ಟಿಯನ್ನು ಪುಷ್ಟೀಕರಿಸುತ್ತಿದೆ ಎಂದು ವ್ಯಾಖ್ಯಾನಿಸಿ ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ.

Written by - Prashobh Devanahalli | Last Updated : Aug 19, 2024, 08:43 PM IST
    • ಭಾರತದಲ್ಲೂ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಮನಸ್ಥಿತಿ, ಸ್ಪಷ್ಟ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ
    • ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ ಐವಾನ್ ಡಿಸೋಜ ಅವರ ಹೇಳಿಕೆ
    • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ
ದೇಶದಲ್ಲಿ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಉದ್ದೇಶ ಕಾಂಗ್ರೆಸ್'ನದ್ದು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ title=
File Photo

ನವದೆಹಲಿ: ಭಾರತದಲ್ಲೂ ಬಾಂಗ್ಲಾದಂತೆ ಅರಾಜಕತೆ ಸೃಷ್ಟಿಸುವ ಮನಸ್ಥಿತಿ, ಸ್ಪಷ್ಟ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 'ವೆಟ್ಟೈಯನ್' ಎಂಟ್ರಿಗೆ ಡೇಟ್ ಫಿಕ್ಸ್: ಅಕ್ಟೋಬರ್ 10ಕ್ಕೆ ತೆರೆಗೆ ಬರ್ತಿದೆ ರಜನಿ ಸಿನಿಮಾ

ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮುಖಂಡ ಐವಾನ್ ಡಿಸೋಜ ಅವರ ಹೇಳಿಕೆ ಅರಾಜಕತೆ ಸೃಷ್ಟಿಯನ್ನು ಪುಷ್ಟೀಕರಿಸುತ್ತಿದೆ ಎಂದು ವ್ಯಾಖ್ಯಾನಿಸಿ ಸಚಿವ ಜೋಶಿ ಟ್ವೀಟ್ ಮಾಡಿದ್ದಾರೆ.

ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ ಈ ರೀತಿ ಅರಾಜಕತೆಯ ಮಾತುಗಳನ್ನಾಡುವುದು ಅಕ್ಷಮ್ಯ ಮತ್ತು ಅತ್ಯಂತ ಖಂಡನೀಯ ಎಂದು ಸಚಿವರು ಆಕ್ಷೇಪಿಸಿದ್ದಾರೆ.

ಕಾಂಗ್ರೆಸ್ ನ ನಡೆ ನೋಡಿದರೆ ಬಾಂಗ್ಲಾ ದೇಶದಂತಹ ಅರಾಜಕತೆ ಸೃಷ್ಟಿಸುವ ರೀತಿ ವರ್ತಿಸುತ್ತಿರುವಂತಿದೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ದತ್ತವಾಗಿರುವ ರಾಜ್ಯಪಾಲರ ಸ್ಥಾನಕ್ಕೆ ಘನತೆ-ಗೌರವ ತೋರುವ ಬದಲು ಅದಕ್ಕೆ ಧಕ್ಕೆ ತರುವ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ರಾಜಭವನ ಮತ್ತು ರಾಜ್ಯಪಾಲರ ಗೃಹಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕುತ್ತಿರುವುದು ನಿಜಕ್ಕೂ  ಆಡಳಿತಾರೂಢ ಸರ್ಕಾರದ ಸರ್ವಾಧಿಕಾರಿ ಧೋರಣೆ ಎನ್ನುವಂತಿದೆ ಎಂದು ಜೋಶಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Side Effects of Mobiles: ಮಲಗುವಾಗ ಫೋನ್‌ ಬಳಸ್ತೀರಾ? ಇದರಿಂದಾಗುವ ಸಮಸ್ಯೆಗಳೇನು ಗೊತ್ತಾ?

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಪಾಲರ ಹುದ್ದೆ ಘನತೆಯ ಅರಿವೆ ಇಲ್ಲ. ಸಂವಿಧಾನದ ಹತ್ಯೆ ಮಾಡಿ ದೇಶದಲ್ಲಿ ಎಮರ್ಜೆನ್ಸಿ ಹೇರಿ ಜನಜೀವನ ಅಸ್ತವ್ಯಸ್ಥಗೊಳಿಸಿದ್ದ ಕಾಂಗ್ರೆಸ್ ಪಕ್ಷ ಇನ್ನೂ ಅದೇ ವರ್ತನೆ, ಮನಸ್ಥಿತಿಯಲ್ಲಿದೆ. ಅದನ್ನಿನ್ನೂ ತಿದ್ದಿಕೊಂಡಿಲ್ಲ ಎಂದು ಆರೋಪಿಸಿರುವ ಸಚಿವ ಪ್ರಲ್ಹಾದ ಜೋಶಿ, ಇದಕ್ಕೆ ಜನರೇ ತಕ್ಕ ಪಾಠವ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News