ಮೈಸೂರು: ಕಾಂಗ್ರೆಸ್ ಜನರಿಗೆ ಮರೆವಿದೆ ಎಂದು ತಿಳಿದಂತಿದೆ. ಆದರೆ ಕಾಂಗ್ರೆಸ್ ನ ಪರಿಚಯ ಜನರಿಗಿದೆ. ಮಹದಾಯಿ ಸಮಸ್ಯೆ ಉಂಟಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಒಟ್ಟಾಗಿ ಹೋಗುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಒಟ್ಟಾಗಿ ಹೋಗುವುದು ಅವರಿಗೆ ಸಂಬಂಧಿಸಿದ ಆಂತರಿಕ ವಿಚಾರ. ನಾವು ಹೇಳುವುದೇನೂ ಇಲ್ಲ. ಮಹದಾಯಿ, ಕೃಷ್ಣಾ ಹಾಗೂ ಎಸ್.ಸಿ/ ಎಸ್.ಟಿ ವಿಚಾರಗಳಿಗೆ ಸಂಬಂಧಿಸಿದಂತೆ ಎರಡು ಸಮಾವೇಶಗಳನ್ನು ಮಾಡುವುದಾಗಿ ಹೇಳಿದರು. ಮಹದಾಯಿ ಯೋಜನೆ ಸಮಸ್ಯೆಯಾಗಲು ಕಾಂಗ್ರೆಸ್ ಕಾರಣ. ಅವರ ಅಧಿನಾಯಕಿ ಸೋನಿಯಾ ಗಾಂಧಿ ಗೋವಾಕ್ಕೆ ಚುನಾವಣೆಗೆ ಹೋಗಿ ಮಹದಾಯಿಯ ಒಂದು ಹನಿ ನೀರನ್ನೂ ಬೇರೆಡೆಗೆ ತಿರುಗಿಸಲು ಬಿಡುವುದಿಲ್ಲ ಎಂದು ಹೇಳಿದರು. ಅವರಿಗೆ ಯಾವ ನೈತಿಕ ಹಕ್ಕಿದೆ. 5 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಏನೂ ಮಾಡಲಾಗಲಿಲ್ಲ. ಎಸ್.ಸಿ., ಎಸ್.ಟಿ ಗಳ 40 ವರ್ಷಗಳ ಬೇಡಿಕೆಯನ್ನು ತಿರುಗಿ ನೋಡಿರಲಿಲ್ಲ ಎಂದರು.
ಇದನ್ನೂ ಓದಿ- ಬಿಎಂಟಿಸಿಯ ಎಂಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್
ಧೈರ್ಯ ಮಾಡಲಿಲ್ಲ:
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಒಳಮೀಸಲಾತಿಯನ್ನು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ವರದಿಯನ್ನು ಮಂಡಿಸುವ ಸಮಾವೇಶವೊಂದರಲ್ಲಿ ಕೇವಲ ದೀಪ ಹಚ್ಚಿ ಬಂದರು, ಈ ವಿಷಯವನ್ನು ಮಾತನಾಡಲೂ ಕೂಡ ಧೈರ್ಯ ಮಾಡಲಿಲ್ಲ. ಎಲ್ಲಾ ನಡೆನುಡಿಗಳು ಜನರ ಮನದಾಳದಲ್ಲಿದೆ. ಅದನ್ನು ಮುಚ್ಚಿಹಾಕಲು ಸಮಾವೇಶ ಮಾಡಿದರು. ಜನರನ್ನು ಪದೇ ಪದೇ ಮರಳು ಮಾಡಲು ಸಾಧ್ಯವಿಲ್ಲ. ಹಿಂದೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಮ್ಮೆಯಾದರೂ ಈ ಬಗ್ಗೆ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ- ಮೌಢ್ಯಕ್ಕೆ ಸಡ್ಡು ಹೊಡೆದ ಎರಡನೇ ಸಿಎಂ ಬಸವರಾಜ ಬೊಮ್ಮಾಯಿ!!
ಗೊಂದಲ ಇಲ್ಲ:
ಇದೇ ಸಂದರ್ಭದಲ್ಲಿ ಎಸ್.ಸಿ/ ಎಸ್.ಟಿ ಮೀಸಲಾತಿ ಗೊಂದಲದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಗೊಂದಲಗಳೇನೂ ಇಲ್ಲ. ಪ್ರಶ್ನೆಗೆ ಉತ್ತರ ನೀಡಲಾಗುತ್ತಿದೆ. ಈಗ ಪ್ರಸ್ತಾವನೆ ಮುಂದಿದೆಯೇ ಎಂದು ಕೇಳಿದ್ದಾರೆ. ಸದ್ಯಕ್ಕಿಲ್ಲ, ನಾಳೆ ಪ್ರಸ್ತಾವನೆ ಹೋಗಲಿದೆ. ಇದನ್ನು ಕಾಂಗ್ರೆಸ್ ಹುಟ್ಟುಹಾಕುತ್ತಿದೆ. ಅವರಿಗೆ ಎಸ್.ಸಿ/ ಎಸ್.ಟಿ ಮತಗಳು ತಪ್ಪಿಹೋಗುತ್ತಿವೆ ಎನ್ನುವ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.