ಬೆಂಗಳೂರು: ಶುದ್ಧ ಬೀದಿ ಪೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯವೆಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹ ಕೊಳಕು ವಿಷಕಾರಿ ವ್ಯಕ್ತಿಯನ್ನು ಕೂರಿಸಿದ್ದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದೆ.
ಶುದ್ಧ ಬೀದಿ ಪೋಕರಿಯೊಬ್ಬ ಇಡೀ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುತ್ತಿರುವುದು ಕರ್ನಾಟಕದ ದೌರ್ಭಾಗ್ಯ.
ಶಿಕ್ಷಣ ತಜ್ಞರು ಇರಬೇಕಾದ ಜಾಗದಲ್ಲಿ ಕೊಳಕು ಮಂಡಲ ಹಾವಿನಂತಹಾ ಕೊಳಕು ವಿಷಕಾರಿ ವ್ಯಕ್ತಿಯನ್ನು ಕೂರಿಸಿದ್ದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. pic.twitter.com/0PvGwcL9RM
— Karnataka Congress (@INCKarnataka) May 23, 2022
‘ಶಿಕ್ಷಣ ಸಚಿವರೇ ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ? ಸ್ಪಷ್ಟಪಡಿಸಿ! ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ’ ಎಂದು ಸಚಿವ ಬಿ.ಸಿ.ನಾಗೇಶ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಶಿಕ್ಷಣ ಸಚಿವರೇ, ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ.
ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ?
ಸ್ಪಷ್ಟಪಡಿಸಿ!ಇಲ್ಲದಲ್ಲಿ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ
— Karnataka Congress (@INCKarnataka) May 23, 2022
‘ರಾಷ್ಟ್ರಕವಿ ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು. ಲೇಖಕರ ಪರಿಚಯದಲ್ಲಿ ಸಂಘ ಸಿದ್ದಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ. RSSನ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು’ ಎಂದು ಕಾಂಗ್ರೆಸ್ ಟೀಕಿಸಿದೆ.
ಕುವೆಂಪು ಈ ನಾಡಿಗೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾದವರು.
ಲೇಖಕರ ಪರಿಚಯದಲ್ಲಿ
ಸಂಘ ಸಿದ್ದಾಂತ ಪ್ರತಿಪಾದಕರನ್ನು ವಿಜೃಂಭಿಸಿ, ರಾಷ್ಟ್ರಕವಿಯನ್ನು ಕೇವಲವಾಗಿ ಬಿಂಬಿಸಿದ ಬಿಜೆಪಿ ತನ್ನ ಆಂತರ್ಯದಲ್ಲಿನ ಕುವೆಂಪು ದ್ವೇಷವನ್ನು ಅನಾವರಣಗೊಳಿಸಿದೆ.RSSನ ಮುಖವಾಣಿ ಪತ್ರಿಕೆಗಳಂತವನ್ನು ಪಠ್ಯಪುಸ್ತಕವೆಂದು ಒಪ್ಪಲಾಗದು. pic.twitter.com/jGBnmzsvtZ
— Karnataka Congress (@INCKarnataka) May 23, 2022
‘ಸುಳ್ಳು ತಜ್ಞ, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಬರಹವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ ಸರ್ಕಾರಕ್ಕೆ ಕನಿಷ್ಠ ಮರ್ಯಾದೆಯೂ ಇಲ್ಲದಾಗಿದೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರಿಂದ "ದೇಶದ್ರೋಹಿ" ಬಿರುದು ಪಡೆದಿದ್ದ ಆತ. ದೇಶದ್ರೋಹಿಯೊಬ್ಬನ ಬರಹವನ್ನು ಪಠ್ಯದಲ್ಲಿ ಅಳವಡಿಸುವುದೂ ದೇಶದ್ರೋಹವಲ್ಲವೇ? ಇದಕ್ಕೆ ಬಿಜೆಪಿ ಸರ್ಕಾರ ಉತ್ತರಿಸುವುದೇ?’ ಎಂದು ಪ್ರಶ್ನಿಸಿದೆ.
ಸುಳ್ಳು ತಜ್ಞ, ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬನ ಬರಹವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ ಸರ್ಕಾರಕ್ಕೆ ಕನಿಷ್ಠ ಮರ್ಯಾದೆಯೂ ಇಲ್ಲದಾಗಿದೆ.
ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರಿಂದ "ದೇಶದ್ರೋಹಿ" ಬಿರುದು ಪಡೆದಿದ್ದ ಆತ.
ದೇಶದ್ರೋಹಿಯೊಬ್ಬನ ಬರಹವನ್ನು ಪಠ್ಯದಲ್ಲಿ ಅಳವಡಿಸುವುದೂ ದೇಶದ್ರೋಹವಲ್ಲವೇ?@BJP4Karnataka ಉತ್ತರಿಸುವುದೇ?
— Karnataka Congress (@INCKarnataka) May 23, 2022
ಇದನ್ನೂ ಓದಿ: 'ಬಿ.ಸಿ.ನಾಗೇಶ್ ಅವರೇ ನಾನು ನಿಮ್ಮ ಹಾಗೆ ವಾಟ್ಸಪ್ ಯುನಿವರ್ಸಿಟಿಯ ವಿದ್ಯಾರ್ಥಿ ಅಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.