Karnataka Assembly Elections 2023 : ಶಿಗ್ಗಾಂವಿ ಬಿಟ್ಟು 5 ಕ್ಷೇತ್ರದ 'ಕೈ' ಟಿಕೆಟ್ ಫೈನಲ್‌ : ಹಾಗಿದ್ರೆ, ಸಿಎಂ ವಿರುದ್ಧ ಯಾರು?

ಸಿಎಂ ಬಸವರಾಜ ಬೊಮ್ಮಾಯಿ‌ ವಿರುದ್ಧ 'ಕೈ' ಅಭ್ಯರ್ಥಿ ಹುಡುಕಾಟದ ನಡುವೆ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ರೀಲಿಸ್ ಮಾಡಿದೆ. 

Written by - Channabasava A Kashinakunti | Last Updated : Mar 25, 2023, 01:41 PM IST
  • ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರ ಸವಣೂರು ಶಿಗ್ಗಾಂವಿ
  • ಐದು ಕ್ಷೇತ್ರದ 'ಕಾಂಗ್ರೆಸ್' ಟಿಕೆಟ್ ಘೋಷಣೆ ಮಾಡಲಾಗಿದೆ
  • ಬಸವರಾಜ ಬೊಮ್ಮಾಯಿ‌ ವಿರುದ್ಧ 'ಕೈ' ಅಭ್ಯರ್ಥಿ ಹುಡುಕಾಟ
Karnataka Assembly Elections 2023 : ಶಿಗ್ಗಾಂವಿ ಬಿಟ್ಟು 5 ಕ್ಷೇತ್ರದ 'ಕೈ' ಟಿಕೆಟ್ ಫೈನಲ್‌ : ಹಾಗಿದ್ರೆ, ಸಿಎಂ ವಿರುದ್ಧ ಯಾರು? title=

ಹಾವೇರಿ : ಜಿಲ್ಲೆಯ ಹೈ ವೋಲ್ಟೇಜ್ ಕ್ಷೇತ್ರ ಸವಣೂರು - ಶಿಗ್ಗಾಂವಿ ಬಿಟ್ಟು ಐದು ಕ್ಷೇತ್ರದ 'ಕಾಂಗ್ರೆಸ್' ಟಿಕೆಟ್ ಘೋಷಣೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ‌ ವಿರುದ್ಧ 'ಕೈ' ಅಭ್ಯರ್ಥಿ ಹುಡುಕಾಟದ ನಡುವೆ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ರೀಲಿಸ್ ಮಾಡಿದೆ. 

ಎಸಿ ಮೀಸಲು ವಿಧಾನಸಭೆ ಕ್ಷೇತ್ರ ಹಾವೇರಿ ರುದ್ರಪ್ಪ ಲಮಾಣಿಗೆ, ಬ್ಯಾಡಗಿ ವಿಧಾನಸಭೆ ಕ್ಷೇತ್ರಕ್ಕೆ ಬಸವರಾಜ ಎನ್ ಶಿವಣ್ಣನವರ. ಹಾನಗಲ್ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಶ್ರೀನಿವಾಸ್ ಮಾನೆಗೆ, ರಾಣೇಬೆನ್ನೂರು ವಿಧಾನಸಭೆ ಕ್ಷೇತ್ರಕ್ಕೆ ಪ್ರಕಾಶ್ ಕೊಳಿವಾಡ ಅವರಿಗೆ, ಹಿರೇಕೆರೂರು ವಿಧಾನಸಭೆ ಕ್ಷೇತ್ರ ಯುಬಿ ಬಣಕಾರ್ ಗೆ ಟಿಕೆಟ್ ಘೋಷಣೆ ಮಾಡಿದೆ.

ಇದನ್ನೂ ಓದಿ : Karnataka assembly elections 2023 : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ : ವರುಣಾದಿಂದ ಸಿದ್ದರಾಮಯ್ಯ ಕಣಕ್ಕೆ

ಆದ್ರೆ, 'ಕೈ' ಹೈಕಮಾಂಡ್ ಗೆ ಸವಣೂರು ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ತಲೆನೋವಾಗಿದೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸವಣೂರು ಶಿಗ್ಗಾಂವಿ ಟಿಕೆಟ್ ಪೈಟ್ ಹಿನ್ನಲೆ, 'ಕೈ' ನಾಯಕರು‌ ಸವಣೂರು ಶಿಗ್ಗಾಂವಿಗೆ ಟಿಕೆಟ್ ಪೈನಲ್ ಮಾಡಿಲ್ಲ. 

ಮೂರು ಬಾರಿ ಸೋತ ಖಾದ್ರಿಗೆ 'ಕೈ' ಹೈಕಮಾಂಡ್ ಟಿಕೆಟ್ ನೀಡೋ ಸಾಧ್ಯತೆ ಕಡಮೆ ಎನ್ನಲಾಗಿದೆ. ಶಿಗ್ಗಾಂವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತ ಬಂದ 'ಕೈ' ಈಗ ಜಾತಿ ಲೆಕ್ಕಾಚಾರ ರಾಜಕೀಯಕ್ಕೆ ಮುಂದಾಗಿದೆ. ಈ ಹಿನ್ನಲೆ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ವಿನಯ್ ಕುಲಕರ್ಣಿಗೆ ಕೈ ಟಿಕೆಟ್ ನೀಡೋ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Karnataka Covid Cases: ಕರ್ನಾಟಕದಲ್ಲಿ ಏರುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ, ಆತಂಕದಲ್ಲಿ ಆರೋಗ್ಯ ಇಲಾಖೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News