ನಾಡು-ನುಡಿಗೆ ನಿಮ್ಮ ಸೇವೆ ನಿರಂತರವಾಗಿರಲಿ - ಸಿದ್ದರಾಮಯ್ಯ

    

Last Updated : Jan 26, 2018, 02:34 PM IST
ನಾಡು-ನುಡಿಗೆ ನಿಮ್ಮ ಸೇವೆ ನಿರಂತರವಾಗಿರಲಿ - ಸಿದ್ದರಾಮಯ್ಯ title=

ಬೆಂಗಳೂರು: ಪದ್ಮಭೂಷಣ ಮತ್ತು ಪದ್ಮಶ್ರಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿರುವ ರಾಜ್ಯದ ಒಂಬತ್ತು ಜನರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ನಾಡು-ನುಡಿಗೆ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಹಾರೈಸಿದ್ದಾರೆ.

ರಾಜ್ಯದ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿಗೆ ಪದ್ಮಭೂಷಣ ಪುರಸ್ಕೃತರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ, ಸೂಲಗಿತ್ತಿ ನರಸಮ್ಮ, ಇಬ್ರಾಹಿಂ ಸುತಾರ್, ಸೀತವ್ವ ಜೋಡಟ್ಟಿ, ದೊಡ್ಡರಂಗೇಗೌಡ, ಆರ್.ಸತ್ಯನಾರಾಯಣ, ರುದ್ರಪಟ್ಟಣಂ ತ್ಯಾಗರಾಜನ್ ಮತ್ತು ತಾರಾನಾಥನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಟ್ವೀಟ್ ಮಾಡುವ ಮೂಲಕ ಪುರಸ್ಕೃತರೆಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Trending News