ಬೆಂಗಳೂರು: ಬಿಬಿಎಂಪಿಯ 156 ಶಾಲಾ ಹಾಗೂ ಕಾಲೇಜುಗಳನ್ನು ಆಧುನೀಕರಣಗೊಳಿಸಲು ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಮಂಗಳವಾರ(ಸೆ. 25) ಒಪ್ಪಂದ ಮಾಡಿಕೊಳ್ಳಲಾಯಿತು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಬಿಬಿಎಂಪಿ ಶಾಲೆಗಳ ಗುಣಮಟ್ಟ ಕಡಿಮೆ ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರುಸುತ್ತಿದ್ದಾರೆ. ಅದಕ್ಕಾಗಿ ಬಿಬಿಎಂಪಿಯಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲು ಮೈಕ್ರೋಸಾಫ್ಟ್ ಕಂಪನಿ ರೋಷನಿ ಶೀರ್ಷಿಕೆಯಡಿ ಮುಂದೆ ಬಂದಿದೆ. ಆಧುನಿಕತೆಗೆ ತಕ್ಕಂಥ ಶಿಕ್ಷಣ ನೀಡಲಿದೆ. ಶಿಕ್ಷಕರಿಗೆ ತರಬೇತಿ ನೀಡುವುದು, ಕಂಪ್ಯೂಟರ್ ಶಿಕ್ಷಣ ಸೇರಿ ಆಧುನಿಕ ಶಿಕ್ಷಣ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದರು.
Proud to announce that @Microsoft & Tech Avant Garde's implementation of MASP PRO & Roshini Social Schooling will provide BBMP schools an all-round makeover. Confident that this will boost our goal of imparting world-class education to our well-deserving kids. pic.twitter.com/ZOXH1LesW9
— Dr. G Parameshwara (@DrParameshwara) September 25, 2018
ಮೈಕ್ರೋ ಸಾಫ್ಟ್ ಐದು ವರ್ಷಗಳ ಕಾಲ ಬಿಬಿಎಂಪಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ನಂತರ ಬಿವಿಎಂಪಿಗೆ ಒಪ್ಪಿಸಲಿದೆ. ಇದಕ್ಕಾಗಿ ಬಿಬಿಎಂಪಿ ಆರ್ಥಿಕ ಸಹಕಾರ ನೀಡುವುದಿಲ್ಲ. ಬಿವಿಎಂಪಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಸಂಪೂರ್ಣ ಹೊಣೆಯನ್ನು ಈ ಕಂಪನಿ ಹೊರಲಿದೆ.
ಇದಕ್ಕಾಗಿ ಸುಮಾರು 600 ಕೋಟಿ ರೂ.ಅಷ್ಟು ಹಣವನ್ನು ಈ ಸಂಸ್ಥೆ ವಿನಿಯೋಗಿಸುತ್ತಿದೆ ಎಂದರು. ಐದು ವರ್ಷದಲ್ಲಿ ಬಿಬಿಎಂಪಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ರೀತಿ ಬೆಳೆಯುವ ನಿರೀಕ್ಷೆ ಇದೆ ಎಂದರು.