ಕೇಂದ್ರ-ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ & ಗುತ್ತಿಗೆದಾರರಿಂದ ಸಾವಿರಾರು ಕೋಟಿ ವಂಚನೆ !?

ಜುಲೈ 1, 2017ರಲ್ಲಿ ಕೇಂದ್ರ ಸರ್ಕಾರ ಒನ್‌ನೇಷನ್ ಒನ್ ಟ್ಯಾಕ್ಸ್ ನಿಯಮ ಜಾರಿ ಮಾಡಿತ್ತು. ನೇರವಾಗಿ ಕೇಂದ್ರವೇ ತೆರಿಗೆ ಸಂಗ್ರಹಿಸಿ ರಾಜ್ಯದ ಪಾಲು ನೀಡುವ ನಿಯಮವಿದು. ಆದರೆ ಅಂಥಾ ಯೋಜನೆಗೂ ಬಿಬಿಎಂಪಿ ಟಕ್ಕರ್ ಕೊಟ್ಟು ಸಾವಿರಾರು ಕೋಟಿ ಉಂಡೇನಾಮೆ ಹಾಕಿರುವ ಆರೋಪ ಕೇಳಿ ಬಂದಿದೆ.

Written by - Manjunath Hosahalli | Edited by - Manjunath N | Last Updated : Jul 6, 2022, 06:54 PM IST
  • ಸದ್ಯ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಧಾನಿ ಕಚೇರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ.
  • ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳು ಹಾಗೂ ದೋಖಾ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು‌ ಕೇಂದ್ರ ಆಗ್ರಹಿಸಿದೆ.
ಕೇಂದ್ರ-ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ & ಗುತ್ತಿಗೆದಾರರಿಂದ ಸಾವಿರಾರು ಕೋಟಿ ವಂಚನೆ !? title=

ಬೆಂಗಳೂರು: ಜುಲೈ 1, 2017ರಲ್ಲಿ ಕೇಂದ್ರ ಸರ್ಕಾರ ಒನ್‌ನೇಷನ್ ಒನ್ ಟ್ಯಾಕ್ಸ್ ನಿಯಮ ಜಾರಿ ಮಾಡಿತ್ತು. ನೇರವಾಗಿ ಕೇಂದ್ರವೇ ತೆರಿಗೆ ಸಂಗ್ರಹಿಸಿ ರಾಜ್ಯದ ಪಾಲು ನೀಡುವ ನಿಯಮವಿದು. ಆದರೆ ಅಂಥಾ ಯೋಜನೆಗೂ ಬಿಬಿಎಂಪಿ ಟಕ್ಕರ್ ಕೊಟ್ಟು ಸಾವಿರಾರು ಕೋಟಿ ಉಂಡೇನಾಮೆ ಹಾಕಿರುವ ಆರೋಪ ಕೇಳಿ ಬಂದಿದೆ.

ಬಿಬಿಎಂಪಿಯಲ್ಲಿ ಹಳೇ ಕಲ್ಲಿಗೆ ಹೊಸ ಬಿಲ್ಲು ಎನ್ನುವುದು ಬಹಳ ಹಿಂದಿನಿಂದಲೂ ಇರುವ ಕುಖ್ಯಾತಿ. ಈಗ ಆ ಸಾಲಿಗೆ ಹೊಸ ಆರೋಪವೊಂದು ಕೇಳಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಯಾವ ಕಾಮಗಾರಿಗೂ GST ಮೊತ್ತ ಪಾವತಿಯಾಗುತ್ತಿಲ್ಲ ಎಂದು ಬೆಂಗಳೂರು ಮಾಹಿತಿ ಹಕ್ಕು ಕೇಂದ್ರ ಗಂಭೀರವಾಗಿ ಆರೋಪಿಸಿದೆ. ಬಿಬಿಎಂಪಿಯಲ್ಲಿ ನೀಡಲಾಗುತ್ತಿರುವ ಯಾವ ಟೆಂಡರ್ ಗೂ GST ಕಟ್ಟಲಾಗುತ್ತಿಲ್ಲ ಎಂಬ ಆರೋಪ ಎದುರಾಗಿದೆ. ಕೇಂದ್ರದ One Nationa - One Tax ಅಡಿಯಲ್ಲಿ ಕಡ್ಡಾಯವಾಗಿ GST ಕಟ್ಟಬೇಕು ಎಂಬ ನಿಯಮವಿದೆ. ಆದರೆ ಬಿಬಿಎಂಪಿಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾಮಗಾರಿಯ ಬಿಲ್ ಗಳಿಗೆ GST Invoice ಮಾಡಲಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕೇಂದ್ರದ ಪದಾಧಿಕಾರಿಗಳು ದೂರಿದ್ದಾರೆ.

ಇದನ್ನೂ ಓದಿ: Chandrashekhar Guruji Murder: ಗುರೂಜಿ ಹಂತಕರು ಯಾರು? ಕೊಲೆಗೆ ಕಾರಣವೇನು..?

ಬಿಬಿಎಂಪಿ & ಗುತ್ತಿಗೆದಾರರಿಂದ ಕೇಂದ್ರ ಸರ್ಕಾರಕ್ಕೇ GST ದೋಖಾ.!?

ಈ ಮೂಲಕ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿ ಸರ್ಕಾರಕ್ಕೆ GST ಕಟ್ಟದೆ ಮೋಸ ಮಾಡುತ್ತಿದ್ದಾರಂತೆ. ಬಿಬಿಎಂಪಿಯ ದಾಸರಹಳ್ಳಿ ವಲಯದಲ್ಲಿ ಮಾಡಲಾದ ರಸ್ತೆ ಕಾಮಗಾರಿಯ ಬಿಲ್ ನಲ್ಲಿ ಈ‌ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕೇಂದ್ರದಿಂದ ಪ್ರಧಾನಿ ಮೋದಿ ಕಚೇರಿಗೆ ಈ ಮೇಲ್ ಮೂಲಕ ದೂರು ನೀಡಲಾಗಿದೆ. 2017ರಿಂದ ಈಚೆಗೆ ಒಂದು ಸಾವಿರ ಕೋಟಿಗೂ ಅಧಿಕ ಮೊತ್ತದ GST ಮೊತ್ತವನ್ನ ಕೇಂದ್ರಕ್ಕೆ ಕಟ್ಟದೆ ಯಾಮಾರಿಸಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ವೀರೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸದ ಸರ್ಕಾರ: ಸಿದ್ದರಾಮಯ್ಯ ಆಕ್ರೋಶ

ಗುತ್ತಿಗೆದಾರರ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು;

ಪಾಲಿಕೆಯಿಂದ ಟೆಂಡರ್ ಪಡೆದುಕೊಳ್ಳುವ ಗುತ್ತಿಗೆದಾರರು, ಬಿಲ್ ಪಾವತಿಗಾಗಿ ಕೇಳಿಕೊಳ್ಳುವಾಗ ಕಾಮಗಾರಿಗೆ ಬಳಿಸಿದ ಮೆಟೀರಿಯಲ್‌ಗಳ ಬಗ್ಗೆ ಯಾವ ಮಾಹಿತಿಯನ್ನೂ ನೀಡಲಾಗುತ್ತಿಲ್ಲ. ಕೇಂದ್ರದ ಪ್ರಕಾರ ಒಟ್ಟು 18% GST ಪಾವತಿಸಬೇಕು. ಆದರೆ ಮೆಟೀರಿಯಲ್ ಇನ್ವಾಯಿಸ್ ನೀಡದೆ ಕೇವಲ 1% ನಷ್ಟು ಮಾತ್ರ ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ. ಮೆಟೀರಿಯಲ್ ಇನ್ವಾಯಿಸ್ ಕೇಳಿ ಪಡೆದುಕೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಕೂಡ ಗುತ್ತಿಗೆದಾರರ ಜೊತೆಗೂಡಿ ಇನ್ವಾಯಿಸ್ ಇಲ್ಲದೆ ಬಿಲ್ ನೀಡಿ, ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬುವುದು ಒಟ್ಟಾರೆ ಆರೋಪದ ಒಳ ಹುರುಳು.

ಸದ್ಯ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಧಾನಿ ಕಚೇರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳು ಹಾಗೂ ದೋಖಾ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಹಿತಿ ಹಕ್ಕು‌ ಕೇಂದ್ರ ಆಗ್ರಹಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

 

Trending News