Bagalkote: ಒಂದೇ ಬಾರಿಗೆ 4 ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿದ ಹಸು!

Bagalkote Cow: ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ರವೀಂದ್ರ ಬಾಳಪ್ಪ ಶಿರಹಟ್ಟಿ ಎಂಬುವರಿಗೆ ಸೇರಿದ ಈ ಆಕಳು 4 ಕರುಗಳಿಗೆ ಜನ್ಮ ನೀಡಿದೆ.

Written by - Puttaraj K Alur | Last Updated : Jan 15, 2023, 07:15 AM IST
  • ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ
  • ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿರುವ ಘಟನೆ
  • ಚೊಚ್ಚಲ ಹೆರಿಗೆಯಲ್ಲಿಯೇ 2 ಹೋರಿ ಮತ್ತು 2 ಹೆಣ್ಣು ಕರುಗಳಿಗೆ ಜನ್ಮ ನೀಡಿರುವ ಹಸು
Bagalkote: ಒಂದೇ ಬಾರಿಗೆ 4 ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿದ ಹಸು! title=
4 ಕರುಗಳಿಗೆ ಜನ್ಮನೀಡಿದ ಹಸು!

ಬಾಗಲಕೋಟೆ: ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ವಿಷಯಗಳನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. 2 ಮುಖ, 5 ಕಾಲಿನ ಕರುಗಳು ಮತ್ತು ಪ್ರಾಣಿಗಳನ್ನು ನೀವು ನೋಡೇ ಇರುತ್ತೀರಿ. ಒಂದೇ ಬಾರಿಗೆ 2 ಕರುಗಳಿಗೆ ಜನ್ಮನೀಡಿದ ಹಸುಗಳನ್ನೂ ನೀವು ಕಂಡಿರುತ್ತೀರಿ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ.

ಹೌದು, ಅಚ್ಚರಿಯಾದರೂ ಇದು ನಿಜ. ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದೆ. ಈ ಘಟನೆ ಸ್ಥಳೀಯರಲ್ಲಿ ದೊಡ್ಡ ಅಚ್ಚರಿಯನ್ನುಂಟುಮಾಡಿದೆ. ಜನಿಸಿದ 4 ಕರುಗಳು ಸಹ ಆರೋಗ್ಯವಾಗಿದ್ದು, ಹಸುವಿನ ಮಾಲೀಕರ ಮೊಗದಲ್ಲಿ ಸಂತಸ ಮೂಡಿದೆ.

ಇದನ್ನೂ ಓದಿ: GS Basavaraj : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಂಸದ ಜಿಎಸ್ ಬಸವರಾಜ!

ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ರವೀಂದ್ರ ಬಾಳಪ್ಪ ಶಿರಹಟ್ಟಿ ಎಂಬುವರಿಗೆ ಸೇರಿದ ಈ ಆಕಳು 4 ಕರುಗಳಿಗೆ ಜನ್ಮ ನೀಡಿದೆ. ಇದರಲ್ಲಿ 2 ಹೆಣ್ಣು ಕರುಗಳಾದರೆ, 2 ಹೋರಿ ಕರುಗಳಿವೆ. ಹೈನುಗಾರಿಕೆ ಮಾಡುತ್ತಿದ್ದ ರವೀಂದ್ರರ ಹಸು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿರುವುದು ಮನೆಮಂದಿಯ ಖುಷಿಯನ್ನು ಹೆಚ್ಚಿಸಿದೆ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಅಚ್ಚರಿಯ ಜೊತೆಗೆ ಬಹಳಷ್ಟು ಸಂತೋಷವಾಗಿದೆ ಎಂದು ರೈತ ರವೀಂದ್ರ ಅವರು ಖುಷಿ ಹಂಚಿಕೊಂಡಿದ್ದಾರೆ.   

ನಮ್ಮ ಕುಟುಂಬ ಹಲವು ತಲೆಮಾರುಗಳಿಂದ ಒಕ್ಕಲುತನದ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬರುತ್ತಿದೆ. ತಾಯಿ ಸೇರಿದಂತೆ ಕರುಗಳು ಆರೋಗ್ಯದಿಂದ ಇವೆ. 4 ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಹಸುವಿಗೆ ಇದೇ ಮೊದಲ ಹೆರಿಗೆ. ಈ ರೀತಿಯ ವಿಶೇಷ ಹೆರಿಗೆ ಒಮ್ಮೆಯೂ ಆಗಿಲ್ಲವೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: OMG: ಪ್ರೀತಿ ಒಪ್ಪದಿದ್ದಕ್ಕೆ ಯುವತಿ ಕೊಂದು ಸೂಸೈಡ್ ಮಾಡಿಕೊಂಡ ಪಾಗಲ್ ಪ್ರೇಮಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News