Niranthara Ranga Utsava: ಮಾರ್ಚ್ 23ರಿಂದ 27ರವರೆಗೆ ‘ನಿರಂತರ ರಂಗ ಉತ್ಸವ’

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ನಿರಂತರ ಫೌಂಡೇಶನ್ ‘ನಿರಂತರ ರಂಗ ಉತ್ಸವ’ವನ್ನು ಆಯೋಜಿಸಿದೆ.

Written by - Zee Kannada News Desk | Last Updated : Mar 12, 2022, 01:38 PM IST
  • ಮಾರ್ಚ್ 23ರಿಂದ 27ರವರೆಗೆ ನಡೆಯಲಿದೆ ‘ನಿರಂತರ ರಂಗ ಉತ್ಸವ’
  • ಮೈಸೂರಿನ ರಮಾಗೋವಿಂದ ರಂಗ ಮಂದಿರದಲ್ಲಿ ರಂಗೋತ್ಸವ ಆಯೋಜನೆ
  • 5 ದಿನಗಳ ಕಾಲ ರಾಜ್ಯದ ಪ್ರಸಿದ್ಧ ರಂಗತಂಡಗಳಿಂದ ನಾಟಕ ಪ್ರದರ್ಶನ
Niranthara Ranga Utsava: ಮಾರ್ಚ್ 23ರಿಂದ 27ರವರೆಗೆ ‘ನಿರಂತರ ರಂಗ ಉತ್ಸವ’ title=
ಮಾರ್ಚ್ 23ರಿಂದ ‘ನಿರಂತರ ರಂಗ ಉತ್ಸವ’

ಮೈಸೂರು: ಮೈಸೂರಿನ ನಿರಂತರ ಫೌಂಡೇಶನ್(Niranthara Foundation)ವತಿಯಿಂದ ಮಾರ್ಚ್ 23ರಿಂದ 27ರವರೆಗೆ 'ನಿರಂತರ ರಂಗ ಉತ್ಸವ’ವನ್ನು ಆಯೋಜಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗ ಮಂದಿರ(Ramagovinda Rangamandira)ದಲ್ಲಿ 5 ದಿನಗಳ ಕಾಲ ‘ರಂಗ ಉತ್ಸವ’ ನಡೆಯಲಿದೆ.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ನಿರಂತರ ಫೌಂಡೇಶನ್ ‘ನಿರಂತರ ರಂಗ ಉತ್ಸವ’(Niranthara Ranga Utsava)ವನ್ನು ಆಯೋಜಿಸಿದೆ. 5 ದಿನಗಳ ಕಾಲ ರಾಜ್ಯದ ಪ್ರಸಿದ್ಧ ರಂಗತಂಡಗಳು ಪ್ರಖ್ಯಾತ ನಾಟಕಗಳನ್ನು ಪ್ರದರ್ಶಿಸಲಿವೆ. 5 ದಿನವೂ ವಿಭಿನ್ನ ನಾಟಕಗಳನ್ನು ನೋಡುವ ಅವಕಾಶ ರಂಗಾಸಕ್ತರಿಗೆ ದೊರೆಯಲಿದೆ.  

ಮಾರ್ಚ್ 23ರಂದು ‘ನಿರಂತರ ರಂಗ ಉತ್ಸವ’ದ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಸಂಜೆ 7 ಗಂಟೆಗೆ ನಿರಂತರ ರಂಗ ತಂಡ(Niranthara Foundation)ದಿಂದ ಜಯರಾಮ ರಾಯಪುರ ರಚನೆಯ ಪ್ರಸಾದ್ ಕುಂದೂರು ನಿರ್ದೇಶನದ ‘ವಾರಸುದಾರಾ’ ನಾಟಕ ಪ್ರದರ್ಶಿತಗೊಳ್ಳಲಿದೆ.  

ಇದನ್ನೂ ಓದಿ: Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ

ಮಾರ್ಚ್ 24ರಂದು ಸಂಜೆ 7 ಗಂಟೆಗೆ ಬೆಂಗಳೂರು ದೃಶ್ಯಕಾವ್ಯ ರಂಗತಂಡದಿಂದ ಕೆ.ವೈ.ನಾರಾಯಣಸ್ವಾಮಿ(KY Narayanaswamy) ರಚನೆಯ ನಂಜುಂಡೇಗೌಡ ಸಿ ನಿರ್ದೇಶನದ ‘ಮಾಯಾ ಬೇಟೆ’ ನಾಟಕ ಪ್ರದರ್ಶನವಿರುತ್ತದೆ.

ಮಾರ್ಚ್ 25ರಂದು ಸಂಜೆ 7 ಗಂಟೆಗೆ ನಿರಂತರ ರಂಗ ತಂಡದಿಂದ ದ.ರಾ.ಬೇಂದ್ರೆ ರಚನೆಯ ಕಿರಣ್ ಬಿ.ಕೆ ಮತ್ತು ಗುರುಪ್ರಸಾದ್ ಕೆ.ವೈ ನಿರ್ದೇಶನದ ‘ಸಾಯೋ ಆಟ’ ನಾಟಕ ಪ್ರದರ್ಶನ(Drama Play)ಗೊಳ್ಳಲಿದೆ.

ಮಾರ್ಚ್ 26ರಂದು ಸಂಜೆ 7 ಗಂಟೆಗೆ ಶಿವಮೊಗ್ಗದ ರಂಗಾಯಣ(Rangayana Shimoga) ರಂಗತಂಡದಿಂದ ರಾಜಪ್ಪ ದಳವಾಯಿ ರಚಿತ ಲಕ್ಷ್ಮಣ್ ಕೆ.ಪಿ ನಿರ್ದೇಶನದ ‘ವೀ ದಿ ಪೀಪರ್ ಆಫ್ ಇಂಡಿಯಾ’ ನಾಟಕ ಪ್ರದರ್ಶಿತವಾಗಲಿದೆ.

ಮಾರ್ಚ್ 27ರಂದು ಸಾಯಂಕಾಲ ‘ನಿರಂತರ ರಂಗ ಉತ್ಸವ’(Ranga Utsava)ದ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 7 ಗಂಟೆಗೆ ಉಡುಪಿ ರಂಗಭೂಮಿ ತಂಡದಿಂದ ಮೌನೇಶ್ ಬಡಿಗೇರ ರಚಿತ ಮಂಜುನಾಥ್ ಎಲ್.ಬಡಿಗೇರ ನಿರ್ದೇಶನದ ‘ವಿ.ಶಾಂ.ಕೇ’ ನಾಟಕ  ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ : ತಡೆಯಾಜ್ಞೆ ವದಂತಿ ನಂಬಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News