Lok Sabha Election 2024 : ಸಂಸತ್ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ, ಜನರ ನೋವುಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಹೇಗಿದೆ..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ..
ದಕ್ಷಿಣ ಕನ್ನಡ ಜಿಲ್ಲೆ ರಣಕಣ. ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಚುನಾವಣೆ ಸ್ಪರ್ಧಾ ಅಖಾಡ. ದೈವಾರಾಧನೆ ನೆಲೆ ಬೀಡಾದ ರಾಜ್ಯದ ಕಡಲನಗರಿ ಅಂತಲೇ ಕರೆಯಲ್ಪಡುವ ಮಂಗಳೂರು ಬಹಳ ವಿಶೇಷತೆಯಿಂದ ಕೂಡಿದೆ. ರಸ್ತೆ ಸಾರಿಗೆ, ವಾಯು ಸಾರಿಗೆ, ಜಲ ಸಾರಿಗೆ, ರೈಲು ಸಾರಿಗೆಯ ರಾಜ್ಯದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಪಾತ್ರವಾಗಿದೆ. ಒಂದು ಕಡೆ ಕಡಲ ತೀರ ಮತ್ತೊಂದು ಕಡೆ ಪಶ್ಚಿಮ ಘಟ್ಟ ನಡುವಿನ ಕ್ಷೇತ್ರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಅತ್ಯಂತ ಸಂಪತ್ತು ಭರಿತ ಮತ್ತು ರಾಜ್ಯಕ್ಕೆ ಎರಡನೇ ಅತಿ ಹೆಚ್ಚು ಆದಾಯವನ್ನು ತಂದು ಕೊಡುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ. 1951 ರಿಂದ 2019 ರವರೆಗೆ ಒಟ್ಟು 16 ಚುನಾವಣೆಗಳು ಈ ಜಿಲ್ಲೆಯಲ್ಲಿ ನಡೆದಿದ್ದು ಎಂಟು ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಒಂಬತ್ತು ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿಯಿಂದ ಈ ಸಲ ಹೊಸ ಮುಖ ಸ್ಪರ್ಧಿಸುತ್ತಿದ್ದು ನಿವೃತ್ತ ಸೈನಿಕ ಕ್ಯಾಪ್ಟನ್ ಬೃಜೇಶ್ ಚೌಟ ಫೀಲ್ಡಿಗಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವ್ರ ಶಿಷ್ಯ, ವಕೀಲ ಪದ್ಮರಾಜ್ ಕಣಕ್ಕಿಳಿದಿದ್ದಾರೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ಸ್ಪರ್ಧಿಗಳು ಹೊಸ ಮುಖವಾಗಿದ್ದು ಜಾತಿ ಆಧಾರದಲ್ಲಿ ಪ್ರಬಲ ಪೈಪೋಟಿ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಲೋಕ ಸಮರ..! 10 ಬಾರಿ ಕಾಂಗ್ರೆಸ್ ಗೆದ್ದರೆ, 1 ಬಾರಿ ಕಮಲಕ್ಕೆ ಜಯ.. ಹೇಗಿದೆ ಸಧ್ಯದ ಬಲಾಬಲ
ಜನಾರ್ದನ ಪೂಜಾರಿ. ಈ ಹೆಸರು ಕರ್ನಾಟಕದಲ್ಲಿ ಕೇಳದವರು ಕಡಿಮೆಯೇ. ವಿವಿಧ ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವರಾಗಿ ವಿಶೇಷ ಛಾಪು ಮೂಡಿಸಿರೋ ರಾಜಕಾರಣಿ. ಅದ್ರಲ್ಲೂ ಕರಾವಳಿಯಲ್ಲಿ ಪೂಜಾರಿ ಮರೆತು ಕಾಂಗ್ರೆಸ್ ಪಕ್ಷ ಊಹಿಸಿಕೊಳ್ಳೋದಿಕೂ ಕಷ್ಟಸಾಧ್ಯ. ಇಂಥ ಮುತ್ಸದ್ಧಿ ನಾಲ್ಕು ಬಾರಿಗೆ ಗೆದ್ದಿದ್ದ ಕ್ಷೇತ್ರ ದಕ್ಷಿಣ ಕನ್ನಡ ಸಂಸತ್ ಕ್ಷೇತ್ರ. ಅದೇ ರೀತಿ ಬಿಜೆಪಿಯಿಂದ ಧನಂಜಯ ಕೂಡ ಸತತ ನಾಲ್ಕು ಬಾರಿ ವಿಜಯದ ಮಾಲೆ ಧರಿಸಿದ್ದರು. ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡು ಇದೀ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಾಡಾಗಿದೆ.
ಸಂಸತ್ ಕ್ಷೇತ್ರ ಪರಿಚಯ
1. ಮಂಗಳೂರು ದಕ್ಷಿಣ : ವೇದವ್ಯಾಸ ಕಾಮತ್-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 23,962 ಮತಗಳ ಗೆಲುವು
2. ಮಂಗಳೂರು ಉತ್ತರ : ಭರತ್ ಶೆಟ್ಟಿ-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 32,922 ಮತಗಳ ಗೆಲುವು)
3. ಬಂಟ್ವಾಳ : ರಾಜೇಶ್ ನಾಯಕ್-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 8282 ಮತಗಳ ಗೆಲುವು)
4. ಬೆಳ್ತಂಗಡಿ : ಹರೀಶ್ ಪೂಂಜಾ-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 18,216 ಮತಗಳ ಗೆಲುವು)
5. ಸುಳ್ಯ : ಭಾಗೀರಥಿ ಮುರುಳ್ಯಾ-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 30,874 ಮತಗಳ ಗೆಲುವು)
6. ಪುತ್ತೂರು : ಅಶೋಕ್ ರೈ-ಕಾಂಗ್ರೆಸ್
(ಪಕ್ಷೇತರ ಅಭ್ಯರ್ಥಿ ವಿರುದ್ಧ 4149 ಮತಗಳ ಗೆಲುವು)
7. ಮಂಗಳೂರು : ಯು.ಟಿ. ಖಾದರ್-ಕಾಂಗ್ರೆಸ್
(ಬಿಜೆಪಿ ಅಭ್ಯರ್ಥಿ ವಿರುದ್ಧ 22,790 ಮತಗಳ ಗೆಲುವು
8. ಮೂಡಬಿದಿರೆ : ಉಮಾನಾಥ ಕೋಟ್ಯಾನ್-ಬಿಜೆಪಿ
(ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 22,468 ಮತಗಳ ಗೆಲುವು)
ಕ್ಷೇತ್ರವಾರು ಮತದಾರರ ವಿವರ
- ಒಟ್ಟು 18,97,417 ಮತದಾರರಿದ್ದಾರೆ
- 9,30,567 ಮಂದಿ ಪುರುಷ ಮತದಾರರು
- 9,66,850 ಮಂದಿ ಮಹಿಳಾ ಮತದಾರರು
- 67 ಮಂದಿ ತೃತೀಯ ಲಿಂಗಿಗಳು ಇದ್ದಾರೆ
- ಈ ಬಾರಿ 35,689 ಯುವ ಮತದಾರರು
ಸಂಸತ್ ಕ್ಷೇತ್ರ ಮತಗಟ್ಟೆಗಳು
ಕ್ಷೇತ್ರದಲ್ಲಿ ಒಟ್ಟು 1876 ಮತಗಟ್ಟೆಗಳಿವೆ
- ಬೆಳ್ತಂಗಡಿ 241, ಮೂಡುಬಿದಿರೆ 219
- ಮಂಗಳೂರು ಉತ್ತರ 254, ಮಂಗಳೂರು ದಕ್ಷಿಣ 249
- ಮಂಗಳೂರು 210, ಬಂಟ್ವಾಳ 249
- ಪುತ್ತೂರು 221, ಸುಳ್ಯ 233
ಇದನ್ನೂ ಓದಿ: ಕೋಟೆಯ ನಾಡು ಚಿತ್ರದುರ್ಗದಲ್ಲಿ ‘ಚಂದ್ರೋ’ದಯವೋ.. ʼಗೋವಿಂದʼ ಸ್ತುತಿಯೋ..? ಹೀಗಿದೆ ಬಲಾಬಲ..
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ, ಕಳೆದ ಮೂರು ದಶಕಗಳಿಂದ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಮೂರು ದಶಕಗಳಿಂದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯಗಳಿಸುತ್ತಿದ್ದಾರೆ. 1989ರಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಇಲ್ಲ. 1952 ರಿಂದ 1989ರ ತನಕ ಮಂಗಳೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1952ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆನಗಲ್ ಶಿವರಾವ್, 1957ರಲ್ಲಿ ಕೆ ಆರ್ ಆಚಾರ್, 1962 ರಲ್ಲಿ ಅದೂರು ಶಂಕರ್ ಆಳ್ವ, 1967 ಸಿ ಮುತ್ತಣ್ಣ ಪುಣಚ, 1971ರಲ್ಲಿ ಕೆ ಕೆ ಶೆಟ್ಟಿ, 1977, 1980, 1984, 1989 ರಲ್ಲಿ ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದಿಂದ ಜಯ ಸಾಧಿಸಿದ್ದರು. 1991ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಬಳಿಕ ಬಿಜೆಪಿ ಪ್ರಬಲವಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದು, ಆ ಬಳಿಕ ಯಾವ ಚುನಾವಣೆಯಲ್ಲಿಯೂ ಗೆಲುವು ಕಂಡಿಲ್ಲ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭದ್ರ ಕೋಟೆಯಾಗಿದೆ. ಇಲ್ಲಿ ಮೂರು ಬಾರಿ ನಳಿನ್ ಕುಮಾರ್ ಕಟೀಲು ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುತ್ತಾರೆ ಎನ್ನುವಷ್ಟು ಮಟ್ಟಿಗೆ ಬಿಜೆಪಿಗೆ ಪ್ಲಸ್ ಇರುವ ಕ್ಷೇತ್ರ ಅಂದ್ರೆ ಅದು ದಕ್ಷಿಣ ಕನ್ನಡ.
ಮತದಾರನಿಗೆ ಕನೆಕ್ಟಿಂಗ್ ವಿಷಯ
- ಕೋಮು ದಳ್ಳುರಿಯಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರ
- ಕೋಮು ವಿಚಾರದಲ್ಲಿ ಆಗಾಗ ಸಂಘರ್ಷದ ಕರಿನೆರಳು
- ಅನೈತಿಕ ಪೊಲೀಸ್ ಗಿರಿ ಹಾವಳಿ
- ಬೃಹತ್ ಕೈಗಾರಿಕೆಗಳಿದ್ದರೂ ಸ್ಥಳೀಯರಿಗೆ ಸಿಗದ ಉದ್ಯೋಗ ಅವಕಾಶ
- ಸರ್ಕಾರಿ ಉದ್ಯೋಗಗಳಲ್ಲಿ ಹೊರ ರಾಜ್ಯದ ಮಂದಿಗೆ ಬಹುಪಾಲು
- ಸಮುದ್ರ ಇದ್ದರೂ ಪ್ರತಿವರ್ಷ ನಗರದಲ್ಲಿ ನೀರಿನ ಸಮಸ್ಯೆ
- ನದಿ ನೀರನ್ನೇ ನಗರದ ಜನ ಅವಲಂಬಿಸಬೇಕಾದ ಅನಿವಾರ್ಯತೆ
- ಬೆಳೆ ನಷ್ಟದಿಂದ ಅಡಿಕೆ ಬೆಳೆಗಾರರು ಕಂಗಾಲು
- ರೈತ ಪರ ಯೋಜನೆಗಳ ಜಾರಿಗೆ ಇಚ್ಚಾಶಕ್ತಿಯ ಕೊರತೆ
- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರಿ ಬಸ್ ಸೌಲಭ್ಯ ಕೊರತೆ
- ಲಕ್ಷದ್ವೀಪ ಹತ್ತಿರ ಇದ್ದರೂ ಕೇಂದ್ರ ಸರ್ಕಾರದಿಂದ ಸೂಕ್ತ ಜಲಸಾರಿಗೆ ವ್ಯವಸ್ಥೆ ಇಲ್ಲ
- ಅಭಿವೃದ್ಧಿಗೆ ಹಿನ್ನಡೆ ನೀಡುತ್ತಿರುವ ರಾಜಕೀಯ ಕಲಹ
ಜಾತಿವಾರು ಲೆಕ್ಕಾಚಾರ
ಬಿಲ್ಲವ : 3.60 ಲಕ್ಷ
ಮುಸ್ಲಿಂ :3.50 ಲಕ್ಷ
ದಲಿತರು :2.80 ಲಕ್ಷ
ಗೌಡ : 2 ಲಕ್ಷ
ಬಂಟ್ಸ್ : 1.25 ಲಕ್ಷ
ಕ್ರಿಶ್ಚಿಯನ್ : 1 ಲಕ್ಷ
ಬ್ರಾಹ್ಮಣ : 1 ಲಕ್ಷ
ಕೊಂಕಣಿ : 1 ಲಕ್ಷ
ಇತರ : 3.50 ಲಕ್ಷ
ಮಂಗಳೂರು ಲೋಕಸಭಾ ಕ್ಷೇತ್ರವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿತ್ತು. 2002 ರಲ್ಲಿ ರಚಿತವಾದ ಭಾರತದ ಡಿಲಿಮಿಟೇಶನ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ 2008 ರಲ್ಲಿ ಸಂಸತ್ತಿನ ಕ್ಷೇತ್ರಗಳ ವಿಂಗಡಣೆ ಮಾಡಲಾಗಿತ್ತು. ಡಿಲಿಮಿಟೇಶನ್ ಆದ ನಂತರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಮಂಗಳೂರು ಲೋಕಸಭಾ ಕ್ಷೇತ್ರವನ್ನು ಬದಲಿಸಿತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ 47 ವರ್ಷಗಳ ಬಳಿಕ ಹೊಸಮುಖಗಳ ಹಣಾಹಣಿಗೆ ಅಖಾಡ ಸಿದ್ಧವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಯುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು ಇಲ್ಲಿನ ವಿಶೇಷ. 1977ರ ಚುನಾವಣೆ: ರಾಜಕೀಯಕ್ಕೆ ಹೊಸಮುಖಗಳಾದ ಬಿ.ಜನಾರ್ದನ ಪೂಜಾರಿ ಮತ್ತು ಎ.ಕೆ.ಸುಬ್ಬಯ್ಯ ಅವರು ಜನತಾ ಪಾರ್ಟಿಯಿಂದ ಸ್ಪರ್ಧಾ ಕಣದಲ್ಲಿದ್ದರು. ಇದೇ ಪ್ರಥಮ ಬಾರಿಗೆ ಹೊಸಮುಖಗಳಾದ ಕ್ಯಾ.ಬೃಜೇಶ್ ಚೌಟ ಮತ್ತು ಪದ್ಮರಾಜ್ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಸಂಸತ್ ಕ್ಷೇತ್ರದ ಹಿನ್ನೋಟ
* ಈ ಕ್ಷೇತ್ರದಲ್ಲಿ 1991ರಿಂದ ಕಾಂಗ್ರೆಸ್‌ನ ಅವನತಿ ಆರಂಭ
* 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯ ಧನಂಜಯ ಕುಮಾರ್ ಗೆಲುವು
* ಬಳಿಕ ಸತತ 4 ಬಾರಿ ಧನಂಜಯ ಗೆಲುವು, ಕೇಂದ್ರದಲ್ಲಿ ಸಚಿವರಾದರು
* 2004ರಲ್ಲಿ ಸದಾನಂದ ಗೌಡ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆ
* 2009ರಿಂದ ನಳಿನ್ ಕುಮಾರ್ ಕಟೀಲ್ ಸತತ ಗೆಲುವು ಕಂಡರು
* ಜನಾರ್ದನ ಪೂಜಾರಿ ಮತ್ತು ಧನಂಜಯ ಸತತ 4 ಬಾರಿ ವಿಜಯ
ಸಂಸತ್ ಕ್ಷೇತ್ರದ ಹಿನ್ನೋಟ
2014ರ ಚುನಾವಣೆ
* ನಳಿನ್ ಕುಮಾರ್ ಕಟೀಲ್-ಬಿಜೆಪಿ ಗೆಲುವು
* ಪಡೆದ ಮತ 6,42,739 (ಶೇ.53.23)
* ಜನಾರ್ದನ ಪೂಜಾರಿ-ಕಾಂಗ್ರೆಸ್ ಸೋಲು
* ಪಡೆದ ಮತ 4,99,030 (ಶೇ.41.33)
* ಹನೀಫ್ ಖಾನ್ ಕೊಡಾಜೆ-SDPI ಸೋಲು
* ಪಡೆದ ಮತ 27,254 (ಶೇ.2.26)
ರಾಜಕೀಯ ಚಟುವಟಿಕೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಪ್ಲಸ್ ಪಾಯಿಂಟ್ ನೋಡುವುದಾದರೇ, ಹಿಂದುತ್ವದ ಭದ್ರ ಕೋಟೆ. ಪ್ರಧಾನಿ ಮೋದಿ ಮೇಲಿರುವ ಪರವಾದ ಅಭಿಮಾನ, ಅಯೋಧ್ಯೆಯ ರಾಮ ಮಂದಿರ ನನಸಾಗಿದ್ದು, ಹಿಂದೂ ಮತ ನಿರ್ಣಾಯಕ ಹಾಗೂ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರ ಶ್ರಮ ಎದ್ದು ಕಾಣ್ತಿದೆ. ಹಾಗೆ ಕಾಂಗ್ರೆಸ್ ಪ್ಲಸ್ ಏನಪ್ಪಾ ಅಂತ ಅಂದ್ರೆ.. ನಳಿನ್ ಕುಮಾರ್ ಬಗ್ಗೆ ವಿರೋಧ ಅಲೆ ಮತವಾಗಿ ಮಾರ್ಪಾಟು ನಿರೀಕ್ಷೆ, ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ. ಅಲ್ದೆ ಮುಸ್ಲಿಂ ಮತಗಳ ಕ್ರೋಢಿಕರಣ, ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ ಹಾಗು ಸಾಫ್ಟ್ ಹಿಂದುತ್ವ ಧೋರಣೆ ವರವಾಗೋ ಸಂಭವವಿದೆ ಅಂತ ಹೇಳಲಾಗ್ತಿದೆ.
ಸಂಸತ್ ಕ್ಷೇತ್ರದ ಹಿನ್ನೋಟ
2019ರ ಚುನಾವಣೆ
* ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು
* ಮಿಥುನ್ ರೈ ವಿರುದ್ಧ ಭಾರೀ ಅಂತರದ ಜಯ
* 2,74,621 ಲಕ್ಷ ಅಂತರದ ಭರ್ಜರಿ ಗೆಲುವು
* ನಳಿನ್ ಕುಮಾರ್ ಕಟೀಲ್- 772754 ಮತ
* ಕಾಂಗ್ರೆಸ್ ಪಕ್ಷದ ಮಿಥುನ್ - 499387 ಮತ
ಸಂಸತ್ ಕ್ಷೇತ್ರದ ಮುನ್ನೋಟ
2024ರ ಚುನಾವಣೆ
ಕ್ಯಾ.ಬೃಜೇಶ್ ಚೌಟ-ಬಿಜೆಪಿ
ಆರ್.ಪದ್ಮರಾಜ್ - ಕಾಂಗ್ರೆಸ್
ಆಯ್ಕೆ ಹಿನ್ನೆಲೆ ಪೂರ್ವ ತಯಾರಿ
- ವರ್ಷದ ಹಿಂದೆಯೇ ಪದ್ಮರಾಜ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
- ಕ್ಯಾ.ಬೃಜೇಶ್ ಚೌಟ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು
- ಕಾಂಗ್ರೆಸ್ ಮತ್ತು ಬಿಜೆಪಿ ಹೊಸ ಅಭ್ಯರ್ಥಿಗೆ ಪೂರ್ವ ತಯಾರಿ ನಡೆಸಿದ್ದು ಸ್ಪಷ್ಟ
- ಪದ್ಮರಾಜ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ
- ಪದ್ಮರಾಜ್ ಕೇಂದ್ರದ ಮಾಜಿ ಬಿ.ಜನಾರ್ದನ ಪೂಜಾರಿ ಅವರ ಶಿಷ್ಯ ವಕೀಲರು
- ಡಾ.ಕಲ್ಲಡ್ಕ ಪ್ರಭಾಕರ ಭಟ್ ಆಪ್ತ ಮಾಜಿ ಯೋಧ ಕ್ಯಾ.ಬೃಜೇಶ್ ಚೌಟ
- ಇಬ್ಬರು ಯುವ ನಾಯಕರು ಈವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ
- ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಕಾಂಗ್ರೆಸ್ ನಿಂದ ಮತ್ತು ಬಿಜೆಪಿಯಿಂದ ಧನಂಜಯ ಕುಮಾರ್ ಸತತ ನಾಲ್ಕು ಬಾರಿ ಗೆದ್ದ ಕ್ಷೇತ್ರ.
- ಈ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಇಬ್ಬರು ಅಭ್ಯರ್ಥಿಗಳು ಕೇಂದ್ರದಲ್ಲಿ ಸಚಿವರಾಗಿದ್ದ ದಾಖಲೆಯು ಇದೆ.
- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಎರಡು ಸಿಎಂ ಗಳನ್ನು ಕೊಟ್ಟ ಕ್ಷೇತ್ರವಾಗಿದೆ.
-1951ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ನಡೆದಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಸೌತ್ ಕೆನಾರಾ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.
- ಎರಡನೇ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಜಿಲ್ಲೆ ಜೊತೆ ಕೊಡಗು ಸೇರಿಕೊಂಡು ಈ ಕ್ಷೇತ್ರವನ್ನು ಅಂದು ಮಂಗಳೂರು ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.
- 1957 ರಿಂದ 2009 ರವರಗೆ ಕೊಡಗು ಮತ್ತು ದಕ್ಷಿಣ ಕನ್ನಡ ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು.
- 2009 ರಲ್ಲಿ ಕ್ಷೇತ್ರ ವಿಭಾಜನೆಯಾದ ಬಳಿಕ ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೋಗಿ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಯಿತು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ರಾಜಕೀಯ ಇತಿಹಾಸ
- ಆರಂಭದ ಸಮಯದಲ್ಲಿ ಚುನಾವಣೆ ನಡೆದಾಗ ಅತೀ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸುತ್ತಿತ್ತು.
- ಅದೇ ಸಮಯದಲ್ಲಿ ಎರಡನೇ ಅತೀ ಹೆಚ್ಚು ಮತವನ್ನು ಪಡೆಯುತ್ತಿದ್ದ ಪಕ್ಷ ಸಿಪಿಐ.
- 1977 ರಲ್ಲಿ ಅಂದರೆ ತುರ್ತು ಪರಿಸ್ಥಿತಿಯ ನಂತರ ಇಡೀ ದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದರು
- ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದು ಮಾಜಿ ಸಚಿವ ಜನಾರ್ಧನ ಪೂಜಾರಿ ಎಂಬುವುದು ದಾಖಲೆ.
- ಅದರ ನಂತರ ಸತತ ನಾಲ್ಕು ಬಾರಿ ಜನಾರ್ಧನ ಪೂಜಾರಿ ಈ ಕ್ಷೇತ್ರದಿಂದ ಗೆದ್ದಿದ್ದಾರೆ.
- 1991ರಿಂದ ಕಾಂಗ್ರೆಸ್‌ನ ಅವನತಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಆರಂಭ ಆಯಿತು.
- 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಧನಂಜಯ ಕುಮಾರ್ ಗೆಲುವು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು
- ಅದರ ಬಳಿಕ ಸತತ ನಾಲ್ಕು ಬಾರಿ ಧನಂಜಯ ಕುಮಾರ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
- 2004ರಲ್ಲಿ ಡಿ.ವಿ ಸದಾನಂದ ಗೌಡ ಮೊದಲ ಬಾರಿಗೆ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆ ಆಗಿದ್ದರು.
- 2009 ರಿಂದ ನಳಿನ್ ಕುಮಾರ್ ಕಟೀಲ್ ಈ ಕ್ಷೇತ್ರದಿಂದ ಸತತ ಗೆಲುವನ್ನು ಸಾಧಿಸುತ್ತ ಬಂದಿದ್ದರು
- 2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವನ್ನು ಈ ಕ್ಷೇತ್ರ ದಿಂದ ಗಳಿಸಿದ್ದರು.
ಬಿಜೆಪಿಯ ಮೈನಸ್ ಪಾಯಿಂಟ್ ನೋಡುವುದಾದರೇ, ಸಂಸದ ನಳಿನ್ ಅಧಿಕಾರ ಅವಧಿಯಲ್ಲಿ ವರ್ಷದಲ್ಲಿ ಗಮನಾರ್ಹ ಯೋಜನೆ ಆಗದ್ದೇ ಇದ್ದದ್ದು, ತಳಮಟ್ಟದ ಕಾರ್ಯಕರ್ತರಲ್ಲಿ ನಳಿನ್ ವಿರುದ್ಧ ಅಸಮಾಧಾನ, ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಮುಖಂಡ ಸತ್ಯಜೀತ್ ಸುರತ್ಕಲ್ ಬಣದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬಹಿರಂಗ ಬೆಂಬಲ.
ಕಾಂಗ್ರೆಸ್ ಪಕ್ಷದ ಪ್ಲಸ್ ಪಾಯಿಂಟ್ ನೋಡುವುದಾದರೇ : ಕಾಂಗ್ರೆಸ್ ಮೈನಸ್ ಪಾಯಿಂಟ್ ಹೇಳುವುದಾದರೇ, ಮೋದಿ ಹೆಸರಲ್ಲಿ ಲೋಕಸಭಾ ಚುನಾವಣೆ, ಪ್ರಬಲ ಹಿಂದುತ್ವದ ಅಲೆ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಗೆಲುವು ಹಾಗು ಮೋದಿ ಅಲೆಯ ಎದುರು ಗೆಲ್ಲೋದು ಅಸಾಧ್ಯ ಎಂಬ ಭಾವನೆ ಇರುವುದು.
2008 ರ ಡಿಲಿಮಿಟೇಶನ್ ಮೊದಲು : ಡಿಲಿಮಿಟೇಶನ್ ಮೊದಲು (2008), ಮಂಗಳೂರು ಲೋಕಸಭಾ ಕ್ಷೇತ್ರವು ಈ ಕೆಳಗಿನ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು.
ವಿರಾಜಪೇಟೆ
ಮಡಿಕೇರಿ
ಸೋಮವಾರಪೇಟೆ
ಸುಳ್ಯ
ಪುತ್ತೂರು
ವಿಟ್ಲ
ಮಂಗಳೂರು ( ಮಂಗಳೂರು ನಗರ ದಕ್ಷಿಣ )
ಉಳ್ಳಾಲ (ಮಂಗಳೂರು)
ಸಂಸತ್ತಿನ ಸದಸ್ಯರು
1957 ಕೆ ಆರ್ ಆಚಾರ್- ಕಾಂಗ್ರೆಸ್
1962 ಎ. ಶಂಕರ್ ಆಳ್ವ - ಕಾಂಗ್ರೆಸ್
1967 ಸಿಎಂ ಪೂಣಚ್ಚ - ಕಾಂಗ್ರೆಸ್
1971 ಕೆ.ಕೆ ಶೆಟ್ಟಿ - ಕಾಂಗ್ರೆಸ್
1977 ಕೆ.ಕೆ ಶೆಟ್ಟಿ - ಕಾಂಗ್ರೆಸ್
1980 ಕೆ.ಕೆ ಶೆಟ್ಟಿ - ಕಾಂಗ್ರೆಸ್
1984 - ಜನಾರ್ದನ ಪೂಜಾರಿ- ಕಾಂಗ್ರೆಸ್
1989 -ಜನಾರ್ದನ ಪೂಜಾರಿ- ಕಾಂಗ್ರೆಸ್
1991 - ಜನಾರ್ದನ ಪೂಜಾರಿ- ಕಾಂಗ್ರೆಸ್
1996 ವಿ.ಧನಂಜಯ್ ಕುಮಾರ್ - ಬಿಜೆಪಿ
1998 ವಿ.ಧನಂಜಯ್ ಕುಮಾರ್ - ಬಿಜೆಪಿ
1999 ವಿ.ಧನಂಜಯ್ ಕುಮಾರ್ - ಬಿಜೆಪಿ
2004 ಸದಾನಂದ ಗೌಡ
2009 :
ಅಧಿಕಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಶತಾಗತಯ ಬಿಜೆಪಿಯ ಭದ್ರಕೋಟೆ ಮೇಲೆ ಹಸ್ತದ ಬಾವುಟ ಹಾರಿಸಲು ಸಿದ್ಧತೆ ನಡೆಸುತ್ತಿದೆ. ಇನ್ನು ಜೆಡಿಎಸ್ ಇಲ್ಲಿ ಯಾವುದೇ ಪ್ರಾಬಲ್ಯ ಹೊಂದಿರದ ಕಾರಣ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.
ದಕ್ಷಿಣ ಕನ್ನಡ ಹಿಂದೆ ಮಂಗಳೂರು ಲೋಕಸಭಾ ಕ್ಷೇತ್ರವಾಗಿತ್ತು. 2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಇದಕ್ಕೂ ಮುನ್ನ ಇದ್ದ ಮಂಗಳೂರು ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಎಲ್ಲಾ ಭಾಗಗಳು ಒಳಗೊಂಡಿರಲಿಲ್ಲ. ಕೆಲವು ಪ್ರದೇಶಗಳು ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಇನ್ನು ಕೆಲವು ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಇದೀಗ ದಕ್ಷಿಣ ಕನ್ನಡದ ಎಲ್ಲಾ ಭೂಭಾಗಗಳನ್ನು ಇದು ಒಳಗೊಂಡಿದ್ದು, ಪೂರ್ಣ ಜಿಲ್ಲೆಗೆ ಒಂದು ಕ್ಷೇತ್ರವಾಗಿದೆ.
2008ಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರ ಚಿಕ್ಕಮಗಳೂರು ಜೊತೆಗೂ, ಬಂಟ್ವಾಳ, ಮೂಡಬಿದಿರೆ ಹಾಗೂ ಹಿಂದಿನ ಸುರತ್ಕಲ್ ಕ್ಷೇತ್ರ ಉಡುಪಿ ಕ್ಷೇತ್ರದ ಜೊತೆಗಿತ್ತು. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಪೂರ್ತಿ ಕೊಡಗು ಮಂಗಳೂರು ಎಂದು ಹೆಸರಾಗಿದ್ದ ಈ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.
ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಇದೀಗ ಪೂರ್ತಿ ದಕ್ಷಿಣ ಕನ್ನಡ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಬೆಳ್ತಂಗಡಿ, ಮೂಡಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಇದರಲ್ಲಿ ಮಂಗಳೂರು (ಯುಟಿ ಖಾದರ್) ಮತ್ತು ಪುತ್ತೂರಿನಲ್ಲಿ (ಅಶೋಕ್ ರೈ) ಮಾತ್ರ ಕಾಂಗ್ರೆಸ್ ಶಾಸಕರಿದ್ದು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೊಸ ಮುಖವಾಗಿ ಯುವ ನಾಯಕ ಮಿಥುನ್ ರೈಗೆ ಮಣೆ ಹಾಕಿತ್ತು. ಆದರೆ ಅವರಿಂದಲೂ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಲು ಸಾಧ್ಯವಾಗಿರಲಿಲ್ಲ.
ಈ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 7,74,285 ಮತ ಗಳಿಸಿದರೆ, ಮಿಥುನ್ ರೈ 4,99,664 ಮತಗಳಿಸಿದ್ದರು. ಶೇ. 57.57ರಷ್ಟು ಭಾರೀ ಮತ ಗಳಿಸಿದ್ದ ನಳಿನ್ ಕುಮಾರ್ ಕಟೀಲ್ 2,74,621 ಮತಗಳ ಭರ್ಜರಿ ಅಂತರದಿಂದ ಮಿಥುನ್ ರೈಯನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ (ಹಿಂದಿನ ಮಂಗಳೂರು ಕ್ಷೇತ್ರ)ದಲ್ಲಿ 47 ವರ್ಷಗಳ ಬಳಿಕ ಹೊಸಮುಖಗಳ ಹಣಾಹಣಿಗೆ ಅಖಾಡ ಸಿದ್ಧವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಯುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು ಇಲ್ಲಿನ ವಿಶೇಷ.
1977ರ ಚುನಾವಣೆ: ರಾಜಕೀಯಕ್ಕೆ ಹೊಸಮುಖಗಳಾದ ಬಿ.ಜನಾರ್ದನ ಪೂಜಾರಿ ಮತ್ತು ಎ.ಕೆ.ಸುಬ್ಬಯ್ಯ (ಜನತಾ ಪಾರ್ಟಿ) ಸ್ಪರ್ಧಾ ಕಣದಲ್ಲಿದ್ದರು.
ಇದೇ ಪ್ರಥಮ ಬಾರಿಗೆ ಹೊಸಮುಖಗಳಾದ ಕ್ಯಾ.ಬೃಜೇಶ್ ಚೌಟ (ಬಿಜೆಪಿ) ಮತ್ತು ಪದ್ಮರಾಜ್.ಆರ್.( ಕಾಂಗ್ರೆಸ್) ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಹೊಸಮುಖ ಪ್ರಯೋಗ:
- 1977ರಿಂದ 2014ರವರೆಗೆ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕೇವಲ ಇಬ್ಬರು ನಾಯಕರು ಮಾತ್ರ.
- ಬಿ.ಜನಾರ್ದನ ಪೂಜಾರಿ ಅವರು ಒಟ್ಟು 9 ಬಾರಿ ಸ್ಪರ್ಧಿಸಿದ್ದರು
- ಎಂ.ವೀರಪ್ಪ ಮೊಯ್ಲಿ ಅವರು 2 ಬಾರಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
- 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಹೊಸ ಮುಖ ಪ್ರಯೋಗ ಮಾಡಲು ಮುಂದಾಯಿತು.
- ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಆದರೆ ಗೆಲುವು ಸಾಧ್ಯವಾಗಲಿಲ್ಲ.
- ಈ ಬಾರಿ ಸ್ಪರ್ಧೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರಬಲ ಆಕಾಂಕ್ಷಿಯಾಗಿದ್ದರು.
- ಕಾಂಗ್ರೆಸ್ ಹೈಕಮಾಂಡ್ ಹೊಸಮುಖ ಕಣಕ್ಕಿಳಿಸಲು ನಿರ್ಧರಿಸಿದ ಕಾರಣ ವಕೀಲ ಪದ್ಮರಾಜ್.ಆರ್. ಟಿಕೆಟ್ ಪಡೆಯಲು ಯಶಸ್ವಿ
ಬದಲಾವಣೆ ತಂತ್ರ
- ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ತಂತ್ರ ಆಗಾಗ ನಡೆದಿದೆ. - ಬಿಜೆಪಿ ರಚನೆಯಾದ ಬಳಿಕ ನಡೆದ 1984ರ ಚುನಾವಣೆಯಲ್ಲಿ ಕೆ.ರಾಮ ಭಟ್ ಅಭ್ಯರ್ಥಿಯಾಗಿದ್ದರು.
- 89ರ ಚುನಾವಣೆಯಲ್ಲಿ ಯುವ ವಕೀಲ ವಿ.ಧನಂಜಯ ಕುಮಾರ್ ಅವಕಾಶ ಪಡೆದಿದ್ದರು.
- ಮೊದಲ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಿಜೆಪಿ 1991ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿತು. - ವಿ.ಧನಂಜಯ ಕುಮಾರ್ ನಿರಂತರ 4 ಬಾರಿ ಸಂಸದರಾದರೂ, 2004ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು.
- ಡಿ.ವಿ.ಸದಾನಂದ ಗೌಡ ಅವಕಾಶ ಪಡೆದು ರಾಷ್ಟ್ರ ರಾಜಕೀಯ ಪ್ರವೇಶಿಸಿದರು.
- ಒಂದೇ ಅವಧಿಯಲ್ಲಿ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಶಿಫ್ಟ್ ಮಾಡಿ, ಹೊಸಮುಖ ನಳಿನ್‌ಕುಮಾರ್ ಕಟೀಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
- ಹ್ಯಾಟ್ರಿಕ್ ಜಯ ಸಾಧಿಸಿದ ಕಟೀಲ್ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ.
- ಕ್ಯಾ.ಚೌಟ ಎಂಟ್ರಿ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಇತಿಹಾಸವನ್ನು ಪೂರ್ವಾಲೋಕನ ಮಾಡುವುದಾದರೆ, ಅಂದಿನ ಮದ್ರಾಸ್, ಮೈಸೂರು ಪ್ರಾಂತ್ಯದಿಂದ ಇಂದಿನ ಕರ್ನಾಟಕದವರೆಗೆ ಹದಿನೆಂಟು ಚುನಾವಣೆಗಳಿಗೆ ಈ ಜಿಲ್ಲೆ ಸಾಕ್ಷಿಯಾಗಿದೆ. ರಾಜ್ಯ ಮತ್ತು ಕ್ಷೇತ್ರ ವಿಂಗಡಣೆಯ ಸಮಯದಲ್ಲಿ, ಸೌತ್ ಕೆನರಾ ಲೋಕಸಭಾ ಕ್ಷೇತ್ರ ಇಬ್ಬಾಗವಾಗಿ, ಮಂಗಳೂರು ಲೋಕಸಭಾ ಕ್ಷೇತ್ರವಾಗಿ, ಅದೂ ಇಬ್ಬಾಗವಾಗಿ ಈಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿದೆ.
2029ರ ವೇಳೆ ಮತ್ತೆ ಕ್ಷೇತ್ರ ವಿಂಗಡಣೆಯ ಮಾತು ಕೇಳಿ ಬರುತ್ತಿರುವ ವೇಳೆ, ಮುಂದಿನ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಿದೆ. ಅಂದಿನಿಂದ ಇಂದಿನವರೆಗೆ ಇಲ್ಲಿ ಏನಿದ್ದರೂ ನೇರಾನೇರಾ ಫೈಟ್. ಬಿಜೆಪಿಯು ತಮ್ಮ ಅಭ್ಯರ್ಥಿಯನ್ನಾಗಿ ಬಂಟ್ಸ್ ಸಮುದಾಯದ ಕ್ಯಾ. ಬೃಜೇಶ್ ಚೌಟಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಬಿಲ್ಲವ ಸಮುದಾಯದ ಪದ್ಮರಾಜ್ ಅವರಿಗೆ ಟಿಕೆಟ್ ನೀಡಿದೆ. ಇಬ್ಬರೂ, ಕ್ಷೇತ್ರದ ವ್ಯಾಪ್ತಿಯಲ್ಲಿನ ಸಕ್ರಿಯ ಮುಖಂಡರು ಎನ್ನುವುದು ಗಮನಿಸಬೇಕಾದ ವಿಚಾರ.
- ಬಿಜೆಪಿ, ನರೇಂದ್ರ ಮೋದಿ, ಸಂಘ ಪರಿವಾರದ ಬಲಾಢ್ಯ ಹಿನ್ನಲೆ ಒಂದು ಕಡೆ.
- ತನ್ನದೇ ಆದ ಸಾಮಾಜಿಕ ಮತ್ತು ಸಮುದಾಯದ ಕೆಲಸಗಳ ಮೂಲಕ ಹೆಸರು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಇನ್ನೊಂದು ಕಡೆ.
- ಕ್ಷೇತ್ರದ ಒಂದೊಂದು ಬೂತ್ ಗಳಲ್ಲಿ ಎಷ್ಟು ಮತಗಳಿವೆ, ಅದರಲ್ಲಿ ಬಿಜೆಪಿಗೆ ಬರುವ ಮತಗಳೆಷ್ಟು, ಅದರಲ್ಲಿ ಮತದಾನಕ್ಕೆ ಬಾಕಿ ಉಳಿದಿರುವ ಮತಗಳೆಷ್ಟು ಎನ್ನುವಷ್ಟರ ಮಟ್ಟಿಗಿನ ಇನ್ ಡೆಪ್ತ್ ಲೆಕ್ಕಾಚಾರವನ್ನು ಬಿಜೆಪಿಯ ಮಾತೃಸಂಘಟನೆಗಳು ಹೊಂದಿದೆ.
- ನಾಲ್ಕು ಚುನಾವಣೆ ಸತತವಾಗಿ ಗೆದ್ದಿದ್ದ ಪೂಜಾರಿಯವರು ಕೇಂದ್ರ ಸಚಿವರಾಗಿದ್ದಾಗಿನ ’ಸಾಲಮೇಳ’ ಕಾರ್ಯಕ್ರಮ ಕರಾವಳಿ ಭಾಗದಲ್ಲಿ ಮನೆಮಾತಾಗಿತ್ತು.
- ಅಂದಿನ ಅಟಲ್ ಅಲೆ ಮತ್ತು ಈಗಿನ ಮೋದಿ ಅಲೆಯ ಮುಂದೆ, ಪೂಜಾರಿ 1989ರ ಚುನಾವಣೆಯ ನಂತರ ಅಭ್ಯರ್ಥಿಯಾಗಿದ್ದರೂ ದಡ ಸೇರಲು ಸಾಧ್ಯವಾಗಿಲ್ಲ.
ಆಭ್ಯರ್ಥಿ ಘೋಷಿಸದ ಎಸ್‌ಡಿಪಿಐ..!
- ಈ ಲೋಕಸಭಾ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಕೂಡಾ ಕಾಂಗ್ರೆಸ್ ಪಾಲಿಗೆ ಪ್ರಮುಖ ಅಂಶ.
- ಕಳೆದ ಚುನಾವಣೆಯಲ್ಲಿ ಇಲಿಯಾಸ್ ತುಂಬೆ 46,839 ಮತಗಳನ್ನು ಪಡೆದಿದ್ದರು.
- ಎಸ್‌ಡಿಪಿಐಗೆ ಬೀಳುವ ಮತ, ಕಾಂಗ್ರೆಸ್ ಬುಟ್ಟಿಯದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ.
- ಬಿಜೆಪಿಯೂ ಸತತ ನಾಲ್ಕು ಚುನಾವಣೆಯಲ್ಲಿ ಬಂಟ್ಸ್ ಸಮುದಾಯದವರಿಗೇ ಟಿಕೆಟ್ ನೀಡುತ್ತಿದೆ.
- ನಾಮಪತ್ರ ಸಲ್ಲಿಕೆಗೆ ದಿನಾಂಕ ಘೋಷಣೆ ಆದರೂ ಅಭ್ಯರ್ಥಿ ಹೆಸರು ಘೋಷಿಸದ ಎಸ್ ಡಿಪಿಐ
- ಕುತೂಹಲ ಮೂಡಿಸಿದ ಎಸ್ ಡಿಪಿಐ ಪಕ್ಷದ ನಡೆ
ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್: ಕ್ಯಾ.ಬೃಜೇಶ್ ಚೌಟ, ನಳಿನ್ ಕುಮಾರ್ ಕಟೀಲ್, ಅರುಣಾ ಶ್ಯಾಮ್, ಅರುಣ್ ಕುಮಾರ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
- ಬಿಜೆಪಿಯ ವರಿಷ್ಠರು ಎನ್ನುವುದಕ್ಕಿಂತ ಸಂಘ ಪರಿವಾರದ ಆಯ್ಕೆ ಚೌಟ ಅವರಾಗಿತ್ತು.
- ಎಲ್ಲರನ್ನೂ ಒಗ್ಗೂಡಿಸಿಕೊಂಡು ಚುನಾವಣೆಯನ್ನು ಬಿಜೆಪಿ ಎದುರಿಸಬೇಕಾಗಿದೆ.
- ನಳಿನ್ ಕಟೀಲ್‌ಗೆ ಟಿಕೆಟ್ ನೀಡಬಾರದೆಂದು ಬಿಜೆಪಿ ಪರಿವಾರದಲ್ಲೇ ತೀವ್ರ ಒತ್ತಡ ಎದುರಾಗಿತ್ತು.
- ಕ್ಯಾ.ಚೌಟ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳಬೇಕಿದೆ.
ಕಾಂಗ್ರೆಸ್ ಗೆ ವರ ನೀಡುತ್ತಾರ ಮಹಿಳೆಯರು..?
- ಮಹಿಳೆಯರನ್ನು ಟಾರ್ಗೆಟ್ ಮಾಡಿ ನೀಡಲಾಗುತ್ತಿರುವ ರಾಜ್ಯದ ಗ್ಯಾರಂಟಿ ಸ್ಕೀಂಗಳು ಕಾಂಗ್ರೆಸ್ಸಿಗೆ ವರ್ಕೌಟ್ ಸಾಧ್ಯತೆ
- ಮೋದಿಯ ಚರಿಸ್ಮಾ ಕೆಲಸ ಮಾಡುತ್ತಾ ಎನ್ನುವುದು ಕುತೂಹಲ
- ಸ್ಥಳೀಯ ಬಿಜೆಪಿ ನಾಯಕರ ಜೊತೆ ಪರಿವಾರದವರಿಗೆ ಅಸಮಾಧಾನವಿದ್ದರೂ, ಮೋದಿಯೇ ನಮ್ಮ ನಾಯಕ ನಿಲುವು ಹೊಂದಿರುವ ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರಿದ್ದಾರೆ.
ಚಿತ್ರಣವನ್ನೇ ಬದಲಾಯಿಸುವಷ್ಟು ಬಿಲ್ಲವ ಸಮುದಾಯದ ಮತ:
- ಸಂಘ ಪರಿವಾರದ ಹೆಚ್ಚಿನ ಯುವಕರಲ್ಲಿ ಬಿಲ್ಲವ ಸಮುದಾಯದವರೂ ಮಂಚೂಣಿಯಲ್ಲಿದ್ದಾರೆ.
- ಚುನಾವಣೆ ಬಂದಾಗ ಬಿಲ್ಲವ ಸಮುದಾಯದವರು ಪಕ್ಷವನ್ನು ನೋಡುತ್ತಿದ್ದಾರೆಯೇ ವಿನಃ, ಸಮುದಾಯದ ಅಭ್ಯರ್ಥಿಯನ್ನಲ್ಲ ಎನ್ನುವುದು ಹಲವು ಚುನಾವಣೆಯ ಫಲಿತಾಂಶದಲ್ಲಿ ಸಾಬೀತು
- ಈ ಬಾರಿ ಕಾಂಗ್ರೆಸ್, ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ.
- ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸುವಷ್ಟು ಸಮುದಾಯದ ಮತಗಳಿವೆ
- ಅತಿ ಹೆಚ್ಚು ಜನಸಂಖ್ಯೆ ಹೊಂದಿರೋ ಬಿಲ್ಲವರ ನಡೆ ಯಾವ ಪಕ್ಷದತ್ತ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.