ಪ್ರೀತಿಸಿದ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪ್ರಿಯಕರ

ಪ್ರೀತಿಸಿದ ಯುವತಿಗೆ ಪ್ರಿಯಕರನೇ ಬೆಂಕಿಯಿಟ್ಟ ಹೀನಾಯ ಘಟನೆ ನಗರದಲ್ಲಿ ನಡೆದಿದೆ. ಯುವತಿಗೆ ಪೆಟ್ರೋಲ್ (Petrol) ಸುರಿದು ಕೊಲೆಗೆ ಯತ್ನಿಸಿದ ಪ್ರಿಯಕರನ ಮೇಲೆ ಪ್ರಕರಣ ದಾಖಲಾಗಿದೆ.

Written by - Zee Kannada News Desk | Edited by - Zee Kannada News Desk | Last Updated : Mar 18, 2022, 11:05 AM IST
  • ಪ್ರೀತಿಸಿದ ಯುವತಿಗೆ ಪ್ರಿಯಕರನೇ ಬೆಂಕಿಯಿಟ್ಟ ಹೀನಾಯ ಘಟನೆ ನಗರದಲ್ಲಿ ನಡೆದಿದೆ
  • ಯುವತಿಗೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪ್ರಿಯಕರನ ಮೇಲೆ ಪ್ರಕರಣ ದಾಖಲಾಗಿದೆ
  • ಪ್ರಿಯಕರ ಶಿವಕುಮಾರ್ ಹಾಗೂ ಯುವತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು
ಪ್ರೀತಿಸಿದ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪ್ರಿಯಕರ  title=
ಬೆಂಕಿಯಿಟ್ಟ ಪ್ರಿಯಕರ

ಬೆಂಗಳೂರು: ಪ್ರೀತಿ.. ಪ್ರೇಮ.. ಇದು ಪ್ರತಿ ವ್ಯಕ್ತಿಯ ಜೀವನದಲ್ಲಿ ಬರುವ ಒಂದು ಸುಮಧುರ ಕ್ಷಣ. ಪ್ರತಿಯೊಬ್ಬರು ಒಂದಲ್ಲೊಂದು ಬಾರಿ ಪ್ರೇಮದೂರಿಗೆ ಎಂಟ್ರಿ ಕೊಟ್ಟೇ ಇರುತ್ತಾರೆ. ಪ್ರೀತಿಸಿದ ಹುಡುಗಿ ಅಥವಾ ಹುಡುಗನನ್ನೇ ಮದುವೆಯಾಗಬೇಕೆಂಬುದು ಪ್ರತಿ ಪ್ರೇಮಿಯ ಹೃದಯಾಳದ ಬಯಕೆ. ಹೀಗೆ ಇದೇ ರೀತಿ ಮದುವೆಯಾಗುವ ವಿಚಾರವಾಗಿಯೇ ಇಬ್ಬರು ಪ್ರೇಮಿಗಳ (Lovers) ನಡುವೆ ಶುರುವಾದ ಮಾತುಕತೆ.. ಜಗಳಕ್ಕೆ ತಿರುಗಿ ಅವಘಡಕ್ಕೆ ಕಾರಣವಾಗಿದೆ. ಐದು ವರ್ಷದ ಪ್ರೀತಿ ಬೆಂಕಿಯ ಬಾಯಿಗೆ ಸಿಲುಕಿ ಹೊತ್ತಿ ಉರಿದಿದೆ. 

ಇದನ್ನೂ ಓದಿ:Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ

ಹೌದು, ಪ್ರೀತಿಸಿದ ಯುವತಿಗೆ ಪ್ರಿಯಕರನೇ ಬೆಂಕಿಯಿಟ್ಟ ಹೀನಾಯ ಘಟನೆ ನಗರದಲ್ಲಿ ನಡೆದಿದೆ. ಯುವತಿಗೆ ಪೆಟ್ರೋಲ್ (Petrol) ಸುರಿದು ಕೊಲೆಗೆ ಯತ್ನಿಸಿದ ಪ್ರಿಯಕರನ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಿಯಕರ ಶಿವಕುಮಾರ್  ಹಾಗೂ ಯುವತಿ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇದ್ದ ಇವರ ನಡುವೆ ಮದುವೆಯ ವಿಚಾರವಾಗಿ ಗಲಾಟೆ ಶುರುವಾಗಿತ್ತು. 

ಇದೇ ಜಗಳ ತಾರಕಕ್ಕೇರಿದ್ದು, ಯುವತಿ ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಗಲಾಟೆ ಮಾಡಿದ್ದಾರೆ. ವೀರಸಂದ್ರದ ಸ್ಟಾನ್ಲಿ ರೀಟೈಲ್ ಲಿಮಿಟೆಡ್‌ ನಲ್ಲಿ‌ಕೆಲಸ ಶಿವಕುಮಾರ್ ಮಾಡುತ್ತಿದ್ದರು. ಮದುವೆಯ (Marriage) ವಿಚಾರದಲ್ಲಿ ಕಂಪನಿ ಮುಂದೆಯೇ ಇಬ್ಬರ ನಡುವೆ ಜಗಳವಾಗಿತ್ತು. 

ಇದನ್ನೂ ಓದಿ:ಕುಕ್ಕುಟೋದ್ಯಮದ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದಾಗಿ ಹೇಳಿದ ಹೆಚ್.ಡಿ.ಕುಮಾರಸ್ವಾಮಿ

ಇದರಿಂದ ಕುಪಿತಗೊಂಡ ಶಿವಕುಮಾರ್ ಬಾಟಲ್ ನಲ್ಲಿ ಪೆಟ್ರೋಲ್ ತಂದು ಯುವತಿಯ ಮೇಲೆ ಸುರಿದು ಬೆಂಕಿ (Fire) ಹಚ್ಚಿದ್ದಾನೆ. ಬಳಿಕ ಯುವತಿಯನ್ನು ತಾನೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ (Electronic City) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎರಡು ದಿನದ ಹಿಂದೆ ಈ ದುರ್ಘಟನೆ ಜರುಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಯುವತಿ ಕೊನೆಯುಸಿರೆಳೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News