ಬೆಂಗಳೂರು ಜನರಿಗೆ ಮತ್ತೊಂದು ಕಹಿ ಸುದ್ದಿ : ಸದ್ಯದಲ್ಲೇ ಏರಿಕೆ ಆಗಲಿದೆ ನೀರಿನ ದರ..!

ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತೊಂದು ಕಹಿ ಸುದ್ದಿ ಎದುರಾಗ್ತಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆಯು ತೈಲಬೆಲೆ ಗಗನಕಕ್ಕೆರಿದೆ, ಅಡುಗೆ ಎಣ್ಣೆ ಬೆಲೆ ಏರಿಕೆಯಲ್ಲಿ ತನ್ನ ನಾಗಲೋಟ ಮುಂದುವರೆಸಿದೆ.

Written by - Manjunath Hosahalli | Edited by - Manjunath N | Last Updated : May 8, 2022, 04:30 PM IST
  • *ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ
    *ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ
    *ಕೈಗಾರಿಕೆಗೆ ಪ್ರತಿ ಸಾವಿರ ಲೀಟರ್ ಗೆ ₹90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ.
ಬೆಂಗಳೂರು ಜನರಿಗೆ ಮತ್ತೊಂದು ಕಹಿ ಸುದ್ದಿ : ಸದ್ಯದಲ್ಲೇ ಏರಿಕೆ ಆಗಲಿದೆ ನೀರಿನ ದರ..! title=
file photo

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತೊಂದು ಕಹಿ ಸುದ್ದಿ ಎದುರಾಗ್ತಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆಯು ತೈಲಬೆಲೆ ಗಗನಕಕ್ಕೆರಿದೆ, ಅಡುಗೆ ಎಣ್ಣೆ ಬೆಲೆ ಏರಿಕೆಯಲ್ಲಿ ತನ್ನ ನಾಗಲೋಟ ಮುಂದುವರೆಸಿದೆ, ಗ್ಯಾಸ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ವಿದ್ಯುತ್ ಬರೆ ಸಹ ಬಿದ್ದಿದೆ. ಇದರ ನಡುವೆ ಬೆಂಗಳೂರು ಮಹಾ ಜನತೆಗೆ BWSSB ಸಹ ತನ್ನ ಬೆಲೆ ಏರಿಕೆ ಮಾಡಿ ಕಾವೇರಿಯ ನೀರಿನ ಬೆಲೆ ಕಾವೇರುವಂತೆ ಮಾಡಲು ಮುಂದಾಗಿದೆ.

ಸಿಲಿಕಾನ್ ಸಿಟಿಯ ಜನರು ಕೋವಿಡ್ ನಲ್ಲಿ ಜೀವನವನ್ನು ನಡೆಸುವುದೇ ಕಷ್ಟವೆಂದು ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ತಮ್ಮ ಹಳ್ಳಿಗಳನ್ನ ಸೇರಿಕೊಂಡಿದ್ದರು. ಕೋವಿಡ್ ಮುಗಿಯಿತು ಜನಜೀವನ ಸಹಜ ಸ್ಥಿತಿಗೆೆ ಬರ್ತಿದೆ ಎನ್ನುವಾಗಲೇ ನಾಲ್ಕನೇ ಅಲೆಯ ಭೀತಿ ಕೂಡ ಶುರುವಾಗಿದೆ.ಇವೆಲ್ಲದರ ನಡುವೆ ಅಗತ್ಯವಾಗಿರುವ ವಸ್ತುಗಳ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಜೀವನಾಡಿಯಾಗಿರುವ ನೀರಿನ ಬೆಲೆಯನ್ನು ಏರಿಸಬೇಕೆಂದು ಬೆಂಗಳೂರು ಜಲಮಂಡಳಿ ಸರ್ಕಾರದ ಮುಂದೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿರೋದು ಬೆಂಗಳೂರು ಜನರಿಗೆ ಶಾಕ್ ನೀಡಿದೆ.

ಇದನ್ನೂ ಓದಿ-Russia-Ukraine Conflict: Nuclear Drill ನಡೆಸಿ ಶಕ್ತಿ ಪ್ರದರ್ಶಿಸಿದ Vladimir Putin, ಕಪ್ಪು ಸಮುದ್ರದಲ್ಲಿನ ಹಲ್-ಚಲ್ ನಿಂದ ಮತ್ತಷ್ಟು ಆಳವಾದ ಉಕ್ರೇನ್ ಬಿಕ್ಕಟ್ಟು

ಗೃಹಬಳಕೆಯ ನೀರಿನ ದರ ಶೇ 5% ಹೆಚ್ಚಳ..!

ಕಮರ್ಷಿಯಲ್ ನೀರಿನ ದರ ಶೇ 8% ಹೆಚ್ಚಳ..!

ಗೃಹ ಬಳಕೆ ನೀರಿನ ದರವನ್ನು ಶೇ 3 ರಿಂದ 8ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ Bwssb  ತನ್ನ ಪ್ರಸ್ತಾವನೆಯನ್ನು ಸಲ್ಲಿಸಿದೆ.ಹಾಗೆಯೇ ಕಮರ್ಷಿಯಲ್ ಕಾರಣಕ್ಕೆ ಬಳಸುವ ನೀರಿನ ಬೆಲೆಯನ್ನು 5 ರಿಂದ 8 ರಷ್ಟು ಏರಿಕೆ ಮಾಡಲು ಸರ್ಕಾರದ ಮುಂದೆ ಮನವಿ ಇಟ್ಟಿದೆ.ಇದರಿಂದಾಗಿ ಪ್ರತಿ ಯೂನಿಟ್ ಗೂ ಬೆಲೆ ಹೆಚ್ಚಾಗಲಿದೆ. ಬಿಡ್ಲ್ಯೂ ಎಸ್ ಎಸ್ ಬಿ ತನ್ನ ಸ್ಲ್ಯಾಬ್ ಗೆ ಅನುಗುಣವಾಗಿ ಬೆಲೆಯನ್ನು ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನನ್ನು ಸಲ್ಲಿಸಿದೆ.ಇದರೊಂದಿದೆ ಕೈಗಾರಿಕಾ ಬಳಕೆ ಹಾಗೂ ಈಜುಕೊಳಗಳ ಬಳಕೆಗಳ ದರದಲ್ಲಿ ಹೆಚ್ಚುವರಿ ದರ ನಿಗದಿಪಡಿಸುವ ಸಾಧ್ಯತೆಯೂ ಇದೆ.

BWSSB ಯಾವ ಮಾನದಂಡದಲ್ಲಿ ಬಲ್ ನೀಡುತ್ತಿದೆ..?

ಈಗಿರುವ ಗೃಹ ಬಳಕೆಯ ನೀರಿನ ದರ ಎಷ್ಟು..?

* 1,000 Ltr : ₹7 (0 to 8,000 Ltr ವರೆಗೆ)
* 1,000 Ltr : ₹11 (8,001 to 25,000 Ltr ವರೆಗೆ)
*1,000 Ltr : ₹26 (25,001 to 50,000 Ltr ವರೆಗೆ)
*1,000 Ltr : ₹45 (50,000 ಮೇಲ್ಪಟ್ಟಂತೆ Ltrಗೆ)

Bwssb ಯಾವ ಆಧಾರದಲ್ಲಿ ಕಮರ್ಷಿಯಲ್ ಬಿಲ್ ನೀಡುತ್ತೆ..?

ಈಗಿರುವ ವಾಣಿಜ್ಯ ಬಳಕೆಯ ನೀರಿನದ ದರ ಎಷ್ಟು..?

*1,000 Ltr : ₹50 (0 to 10,000 Ltr ವರೆಗೆ)
*1,000 Ltr : ₹57 (10,001 to 25,000 Ltr ವರೆಗೆ)
*1,000 Ltr : ₹65 (25,001 to 50,000 Ltr ವರೆಗೆ)
*1,000 Ltr : ₹76 (50,001 to 75,000 Ltr ವರೆಗೆ)
*1,000 Ltr : ₹86 (75,000 ಮೇಲ್ಪಟ್ಟಂತೆ Ltrಗೆ)

ಇದರ ಜೊತಗೆ ಕೈಗಾರಿಕಾ ಬಳಕೆಯ ನೀರಿನದ ದರ : 1,000 Ltrಗೆ 90 ರೂಪಾಯಿಗಿದ್ದು, ಈಜುಕೊಳಕ್ಕೆ ಬಳಕೆಯ ನೀರಿನ ದರ : 1,000 Ltrಗೆ 90ರೂಪಾಯಿ ಇದೆ. 

ಗೃಹ ಬಳಕೆ ನೀರಿನ ಬಿಲ್ ನಲ್ಲಿ 5% ಏರಿಕೆಯಾದ್ರೆ ಎಷ್ಟು ಹಣ ಹೆಚ್ಚಳವಾಗುತ್ತೆ..?

ಕೈಗಾರಿಕಾ ಬಳಕೆ‌ ಮೇಲೆ 8% ವಾಟರ್ ಬಿಲ್ ಏರಿಕೆಯಾದ್ರೆ..?

*ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ
*ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ
*ಕೈಗಾರಿಕೆಗೆ ಪ್ರತಿ ಸಾವಿರ ಲೀಟರ್ ಗೆ ₹90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ.

ಇದನ್ನೂ ಓದಿ-Universal Vaccine: ಶೀಘ್ರದಲ್ಲಿಯೇ ಬರಲಿದೆ ಕೊರೊನಾ ವಿರುದ್ಧ ಹೋರಾಡುವ ಸೂಪರ್ ವ್ಯಾಕ್ಸಿನ್, ಯಾವುದೇ ರೂಪಾಂತರಿ ಬಂದ್ರು ಖತಂ!

ಜಲಮಂಡಳಿ ಇಂಜಿನಿಯರ್ ಇನ್ ಚೀಫ್ ಸುರೇಶ್ ವಾದವೇನು..?

ಬೆಂಗಳೂರು ಜಲಮಂಡಲಿ 2013ರಲ್ಲಿ ಕೊನೆಯ ಬಾರಿಗೆ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು, ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ.ಪ್ರತಿ ಸಾವಿರ ಲೀಟರ್ ಗೆ 5% ಹಾಗೂ ಕೈಗಾರಿಕಾ ಬಳಕೆಗೆ 8% ದರ ಏರಿಕೆಗೆ ಪ್ರಸ್ತಾವನೆ ಮಾಡಿದ್ದೇವೆ.ಮುಂದಿನ ವಾರ ಸರ್ಕಾರ ಈ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News