Transgender Teachers: ರಾಯಚೂರು: ಸರ್ಕಾರ ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ಶೇ.1ರಷ್ಟು ಮೀಸಲಾತಿ ನೀಡಿದ್ದು, ಈ ಮೂಲಕ ಮೂವರು ತೃತೀಯ ಲಿಂಗಿಗಳು ಶಿಕ್ಷಕಿಯರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಜೆಸಿಬಿಗಳ ಘರ್ಜನೆ : 30 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ
ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ, ಅಶ್ವಥಮ, ಪೂಜಾ, ಎಂಬ ತೃತೀಯ ಲಿಂಗಿಗಳು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಈ ಸ್ಥಾನಕ್ಕೆ ಇದೀಗ ತಲುಪಿದ್ದಾರೆ.
ಮೇ ತಿಂಗಳಲ್ಲಿ ನಡೆದ ಪ್ರಾಥಮಿಕ ಶಿಕ್ಷಕರ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸದ್ಯ ಪೂಜಾ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ನೇಮಕಗೊಳ್ಳಲಿದ್ದಾರೆ.
ಈ ಬಗ್ಗೆ ಪೂಜಾ ಮಾತನಾಡಿದ್ದು, “ನಮಗೆ ಸರ್ಕಾರ ಶೇ.1ರಷ್ಟು ಮೀಸಲಾತಿ ನೀಡಿದ್ದಾರೆ . ಇದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಸರ್ಕಾರ ಈಗಾಗಲೇ ನಮ್ಮನ್ನು ಗುರುತಿಸಿ ಸೌಲಭ್ಯ ಕೊಟ್ಟಿದೆ. ಅಂತೆಯೇ ಇತರ ತೃತೀಯ ಲಿಂಗಿಗಳಿಗೂ ಸೌಲಭ್ಯ ಕೊಟ್ಟರೆ, ಯಾರು ಭಿಕ್ಷಾಟನೆ ಮಾಡುವುದಿಲ್ಲ” ಎಂದರು.
ಇದನ್ನೂ ಓದಿ: Healthy Diet: ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನಿವಾರಿಸುತ್ತೆ ಈ ಬೇಳೆಕಾಳು!
“ನಮ್ಮನ್ನು ಮನೆಯಿಂದ ಹೊರಗೆ ತಳ್ಳಿ ಹಾಕಿದ್ದಾರೆ. ನಮಗೆ ಬೇರೆ ದಾರಿ ಇಲ್ಲ. ಆದ್ದರಿಂದ ಭಿಕ್ಷಾಟನೆ ಮಾಡುತ್ತೇವೆ. ಆಪ್ತಮಿತ್ರ ಸಮುದಾಯ ಹಾಗೂ ಕುಟುಂಬ ಸಪೋರ್ಟ್ ನಿಂದ ನಾನು ಉದ್ಯೋಗಕ್ಕೆ ಆಯ್ಕೆ ಆಗಿದ್ದೇನೆ. ಸಮಾಜ ನನ್ನನ್ನು ಬಹಳಷ್ಟು ಕೇವಲವಾಗಿ ನೋಡಿಕೊಂಡಿದೆ. ಆದರೆ ಅವರೆ ನನ್ನನ್ನು ನೋಡಿ ಚಪ್ಪಾಳೆ ಹೊಡಿಬೇಕು ಎಂದು ನಾನು ಈ ಸಾಧನೆ ಮಾಡಿದ್ದೇನೆ” ಎಂದರು.\
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.