ಕೊಪ್ಪಳ : ನನ್ನ ರಾಜಕೀಯ ಜೀವನದ ಬಗ್ಗೆ ಡಿ.25 ರಂದು ಗೊತ್ತಾಗುತ್ತೆ. ಈಗಾಗಲೇ ನಾನು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದೆನೆ. ಅಂದೇ ಎಲ್ಲವನ್ನ ಹೇಳುತ್ತೇನೆ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಇಂದು ಈ ಬಗ್ಗೆ ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ಧನ ರೆಡ್ಡಿ, ಯಾರೇ ಏನೇ ಅಂದ್ರು ಅಂದೆ ಗೊತ್ತಾಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ ತಡೆಯಲು ಬಿಜೆಪಿ ಕೋವಿಡ್ ಕಾರಣ ಹೇಳುತ್ತಿದೆ: ಡಿ ಕೆ ಶಿವಕುಮಾರ್
ಬಿಎಸ್ ಯಡಿಯೂರಪ್ಪ ಅವರು ರೆಡ್ಡಿ ಪಕ್ಷದಲ್ಲೆ ಇರ್ತಾರೆ ಎನ್ನುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರು ಏನೇ ಹೇಳಿದ್ರು ನನ್ನ ಉತ್ತರ ಡಿ.25 ರಂದು. ಆವತ್ತೆ ನನ್ನ ಜೊತೆ ಯಾರು ಬರ್ತಾರೆ ಬರಲ್ವೋ ಎನ್ನುವುದು ಗೊತ್ತಾಗುತ್ತೆ. ಇನ್ನೇರೆಡೂ ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತೆ. 25 ರಂದು ಮಹನೀಯರ ದಿನ. ವಾಜಪೇಯಿ ಸೇರಿದಂತೆ ಮಹನೀಯರ ದಿನ ಇದೆ. ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಮನೆಗೆ ಜೆಡಿಎಸ್ ಶಾಸಕ ಭೇಟಿ
ಜಿಲ್ಲೆಯ ಗಂಗಾವತಿಯ ಜನಾರ್ದನ ರೆಡ್ಡಿಯ ಹೊಸ ಮನೆಗೆ ಇಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿಯ ಶಾಸಕ ವೆಂಕಟಪ್ಪ ನಾಯಕ ರೆಡ್ಡಿ ಮನೆಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಜನಾರ್ಧನ ರೆಡ್ಡಿ ಜೊತೆ ರಾಜಾ ವೆಂಕಟಪ್ಪ ನಾಯಕ ಗೌಪ್ಯ ಸಭೆ ನಡೆಸಿದ್ದಾರೆ. ರೆಡ್ಡಿಯನ್ನು ಜೆಡಿಎಸ್ ಪಕ್ಷಕ್ಕೆ ಕರೆತರಲು ಯತ್ನಿಸಿದ್ರಾ ರಾಜಾವೆಂಕಟಪ್ಪ ನಾಯಕ? ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ : Siddaramaiah : ಸದನದಲ್ಲಿ ಸಚಿವ ಪ್ರಭು ಚೌಹಾನ್ ಬೆವರಿಳಿಸಿದ ಸಿದ್ದರಾಮಯ್ಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.