Sa Ra Mahesh: ರಾಜಕೀಯ ನಿವೃತ್ತಿಗೆ ಮುಂದಾದ ಸಾರಾ ಮಹೇಶ್..!

ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವಂತ ಶಾಸಕ ಜಿಟಿ ದೇವೇಗೌಡ ಅವರನ್ನು ತನ್ನ ಗುರುಗಳು ಎಂಬುದಾಗೇ ಸಂಬೋಧಿಸಿ, ಕಣ್ಣೀರಿಟ್ಟರು.

Last Updated : Mar 17, 2021, 01:34 PM IST
  • ನನ್ನ ಮೇಲೆ ಯಾಕಿಷ್ಟು ದ್ವೇಷ. ನನ್ನ ಯಾಕೆ ಇಷ್ಟು ವಿರೋಧಿಸ್ತಾ ಇದ್ದೀರಿ? ನೀವು ಪಕ್ಷಕ್ಕೆ ಬರ್ತೀನಿ ಅಂದ್ರೇ, ನಾನು ಪಾರ್ಟಿ ಬಿಡ್ತೀನಿ.
  • ಶಾಸಕ ಜಿಟಿ ದೇವೇಗೌಡರನ್ನು ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವುದಕ್ಕೆ, ಮಾಜಿ ಸಚಿವ ಸಾರಾ ಮಹೇಶ್ ಆಹ್ವಾನಿಸಿದ್ದಾರೆ.
  • ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವಂತ ಶಾಸಕ ಜಿಟಿ ದೇವೇಗೌಡ ಅವರನ್ನು ತನ್ನ ಗುರುಗಳು ಎಂಬುದಾಗೇ ಸಂಬೋಧಿಸಿ, ಕಣ್ಣೀರಿಟ್ಟರು.
Sa Ra Mahesh: ರಾಜಕೀಯ ನಿವೃತ್ತಿಗೆ ಮುಂದಾದ ಸಾರಾ ಮಹೇಶ್..! title=

ಮೈಸೂರು: ನನ್ನ ಮೇಲೆ ಯಾಕಿಷ್ಟು ದ್ವೇಷ. ನನ್ನ ಯಾಕೆ ಇಷ್ಟು ವಿರೋಧಿಸ್ತಾ ಇದ್ದೀರಿ? ನೀವು ಪಕ್ಷಕ್ಕೆ ಬರ್ತೀನಿ ಅಂದ್ರೇ, ನಾನು ಪಾರ್ಟಿ ಬಿಡ್ತೀನಿ. ಅಲ್ಲದೇ ನಾನು ರಾಜಕೀಯ ನಿವೃತ್ತಿಯನ್ನೇ ಪಡೆಯುತ್ತೇನೆ ಎಂಬುದಾಗಿ ಕಣ್ಣೀರಿಡುತ್ತಲೇ, ಶಾಸಕ ಜಿಟಿ ದೇವೇಗೌಡರನ್ನು ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವುದಕ್ಕೆ, ಮಾಜಿ ಸಚಿವ ಸಾರಾ ಮಹೇಶ್ ಆಹ್ವಾನಿಸಿದ್ದಾರೆ.

ನಗರದ್ಲಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಾ ಮಹೇಶ್, ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವಂತ ಶಾಸಕ ಜಿಟಿ ದೇವೇಗೌಡ(GT Devegowd) ಅವರನ್ನು ತನ್ನ ಗುರುಗಳು ಎಂಬುದಾಗೇ ಸಂಬೋಧಿಸಿ, ಕಣ್ಣೀರಿಟ್ಟರು.

'CD ಪ್ರಕರಣ'ಕ್ಕೆ ಬಿಗ್ ಟ್ವಿಸ್ಟ್: ವಿಡಿಯೋದಲ್ಲಿದ್ದ ಯುವತಿ ಕಿಡ್ನಾಪ್..!

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಹುಣಸೂರು ಉಪ ಚುನಾವಣೆ(By Election)ಯಲ್ಲಿ ಯಾಕೆ ಹಾಗೆ ಮಾಡಿದ್ರಿ. ಯಾಕೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ವೇಳೆಯಲ್ಲಿ ಗೈರು ಹಾಜರಾದ್ರಿ. ? ನಮ್ಮ ತಪ್ಪು ಇದ್ದರೇ ತಿಳಿಸಿ, ತಿದ್ದಿಕೊಳ್ಳುತ್ತೇವೆ. ನಿಮ್ಮನ್ನು ನಮ್ಮ ನಾಯಕರು ಎಂಬುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದರು.

By Election Date: ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಗೆ 'ದಿನಾಂಕ ಫಿಕ್ಸ್'..!

ನಾಳೆಯಿಂದ ಬನ್ನಿ ಜವಾಬ್ದಾರಿ ತಗೊಳ್ಳಿ. ನೀವು ಬರುವುದಾದರೇ ನಾನು ಪಾರ್ಟಿಯನ್ನೇ ಬಿಡುತ್ತೇನೆ. ಇನ್ನೆರಡು ವರ್ಷ ಆದ್ಮೇಲೆ ನಾನು ಸಾರ್ವಜನಿಕ ಜೀವನದಿಂದಲೇ ದೂರ ಆಗುತ್ತೇನೆ. ನೀವು ಬಂದು ಕುಮಾರಸ್ವಾಮಿ(HD Kumaraswamy)ಯವರೊಂದಿಗೆ ಮಾತನಾಡಿ, ಪಾರ್ಟಿ ಕಟ್ಟಿ ಎಂಬುದಾಗಿ ಕೋರಿಕೊಂಡರು.

ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‍ಐಟಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News