BIAL ನಿಲ್ದಾಣದಲ್ಲಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭ

ವಿಮಾನ ನಿಲ್ದಾಣದಲ್ಲಿ ಡಿಜಿಟಲ್ ಆವಿಷ್ಕಾರವನ್ನು ಮುನ್ನಡೆಸಲು ಆದ್ಯತೆ ನೀಡಿದ್ದು, ಪ್ರಯಾಣಿಕರ ಅನುಭವ ಉನ್ನತೀಕರಣ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಕೆಲಸ ಮಾಡುತ್ತದೆ.

Written by - Zee Kannada News Desk | Last Updated : Apr 9, 2022, 04:15 PM IST
  • ಬಿಐಎಎಲ್‌ನಲ್ಲಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭ
  • ಡಿಜಿಟಲ್ ಆವಿಷ್ಕಾರವನ್ನು ಮುನ್ನಡೆಸಲು ಆದ್ಯತೆ
  • ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುವ ಉತ್ತೇಜನ ನೀಡುವುದು ಪ್ರಮುಖ ಉದ್ದೇಶ
BIAL ನಿಲ್ದಾಣದಲ್ಲಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭ title=
BIAL

ಬೆಂಗಳೂರು : ವೈಮಾನಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಅಭಿವೃದ್ದಿಪಡಿಸಲು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಹಾಗೂ ಅಮೆಜಾನ್ ವೆಬ್ ಸರ್ವೀಸ್ ಜಂಟಿಯಾಗಿ ಜೈಂಟ್ ಇನ್ನೋವೇಷನ್ ಸೆಂಟರ್ ಆರಂಭಿಸಲಿದೆ ಎಂದು ವಿಮಾನ ನಿಲ್ದಾಣದ ಸಿಇಒ ‌ಹಾಗೂ ಎಂಡಿ ಹರಿ ಮಾರರ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಡಿಜಿಟಲ್ ಆವಿಷ್ಕಾರವನ್ನು ಮುನ್ನಡೆಸಲು ಆದ್ಯತೆ ನೀಡಿದ್ದು, ಪ್ರಯಾಣಿಕರ ಅನುಭವ ಉನ್ನತೀಕರಣ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುವ ಕೆಲಸ ಮಾಡುತ್ತದೆ.

ಇದನ್ನು ಓದಿ: ಸಿಲಿಕಾನ್ ಸಿಟಿಯಲ್ಲಿ ಹೊತ್ತಿ ಉರಿದ ಬಿಎಂಟಿಸಿ ಬಸ್​: ಬೆಂಕಿ ನಂದಿಸಿದ ಅಗ್ನಿಶಾಮಕ ದಳ

ಸ್ಟಾರ್ಟ್‌ ಅಪ್​ಗಳಿಗೆ ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರ ಮಾಡುವ ಉತ್ತೇಜನ ನೀಡುವುದು, ಸ್ಮಾರ್ಟ್ ಮೂಲಸೌಕರ್ಯ, ಯುಟಿಲಿಟೀಸ್ ಮತ್ತು ಗ್ರಾಹಕರು ತ್ವರಿತವಾಗಿ ಅಮೆಜಾನ್ ವೆಬ್ ಸರ್ವೀಸಸ್ ತಂತ್ರಜ್ಞಾನಗಳ ಕೊಡುಗೆಗಳ ಮೂಲಕ ಮೊಬಿಲಿಟಿ (ಸಂಚಾರ) ಹಾಗೂ ತ್ವರಿತ ಆವಿಷ್ಕರಣೆಗೆ ತಾಂತ್ರಿಕ ಪ್ಲಾಟ್ ಫಾರಂ ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ಕಸ್ಟಮ್ಸ್ ಪರಿಹಾರಗಳನ್ನು ನೀಡುವಂತಹ ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್‌ಚೈನ್, ಇಂಟರ್‌ನೆಟ್ ಆಫ್ ಥಿಂಗ್ಸ್(ಐಒಟಿ), ಅನಾಲಿಟಿಕ್ಸ್, ಮೆಷಿನ್ ಲರ್ನಿಂಗ್(ಎಂಎಲ್), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಐ), ರೊಬೊಟಿಕ್ಸ್ ಮತ್ತು ಆಗ್ಮೆಂಟೆಡ್ ಮತ್ತು ವರ್ಚುಯಲ್ ರಿಯಾಲಿಟಿ(ಎಆರ್/ವಿಆರ್) ತಂತ್ರಜ್ಞಾನ ಸಂಯೋಜನೆಯಲ್ಲಿದೆ.

ಇದನ್ನು ಓದಿ: ಗುಜರಾತ್‌ನಲ್ಲಿ ಓಮಿಕ್ರಾನ್‌ನ ಹೊಸ ತಳಿ XE ಯ ಮೊದಲ ಪ್ರಕರಣ ಪತ್ತೆ

ಇದು ಚೀನಾದ ಹೊರಗೆ ಅಮೆಜಾನ್ ವೆಬ್ ಸರ್ವೀಸಸ್ ಅನ್ನು ಸ್ಥಾಪಿಸುತ್ತಿರುವ ಮೊದಲ ಆವಿಷ್ಕಾರ ಕೇಂದ್ರ. ಜೊತೆಗೆ ವೈಮಾನಿಕ ಅಭಿವೃದ್ಧಿಗೆಂದೇ ಮೀಸಲಾದ ಮೊದಲ ಜೆಐಸಿ. ಪ್ರಸಕ್ತ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News