ಕಾಡುಗೋಡಿಯಲ್ಲಿ ಗೋಡೌನ್​ ರ‍್ಯಾಕ್​ ಕುಸಿತ; ಮೂವರು ಸಾವು

ಗೋದಾಮಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.

Last Updated : Dec 13, 2018, 09:11 PM IST
ಕಾಡುಗೋಡಿಯಲ್ಲಿ ಗೋಡೌನ್​ ರ‍್ಯಾಕ್​ ಕುಸಿತ; ಮೂವರು ಸಾವು title=

ಬೆಂಗಳೂರು: ನಗರದ ಹೊರವಲಯದಲ್ಲಿರುವ ಲಾಜಿಸ್ಟಿಕ್ ಕಂಪನಿಯ ಗೋದಾಮಿನಲ್ಲಿ ಬಟ್ಟೆ, ಆಹಾರ ವಸ್ತುಗಳನ್ನು ತುಂಬಿಸಿ ಇಟ್ಟಿದ್ದ ಕಬ್ಬಿಣದ ರ‍್ಯಾಕ್​ ಕುಸಿದ ಬಿದ್ದ ಪರಿಣಾಮ  ಸಾವನ್ನಪ್ಪಿದ ಅ ಘಟನೆ ಆಡುಗೋಡಿಯ ಶೀಗೆಹಳ್ಳಿ ಗೇಟ್ ಬಳಿ ನಡೆದಿದೆ. 

ಗೋದಾಮಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ಸಂಭವಿಸಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಇವರಲ್ಲಿ 6 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದ ಮೂವರು ಕಾರ್ಮಿಕರ ಶವಗಳನ್ನು ಹೊರೆತೆಗೆಯಲಾಗಿದೆ. ಮೃತರನ್ನು ಫಾರೂಕ್, ಸುಭಾಶ್ ಮತ್ತು ಜ್ಞಾನದರ್ಶನ್ ಎಂದು ಗುರುತಿಸಲಾಗಿದೆ. 

ಸುಮಾರು 30 ರಿಂದ 35 ಅಡಿ ಎತ್ತರದ ರ‍್ಯಾಕ್​ಗಳು ಏಕಾಏಕಿ ಕುಸಿದಿದ್ದರಿಂದ ಈ ಅವಘಡ ಸಂಭವಿಸಿದೆ. ಈ ಗೋಡೌನ್​ನಲ್ಲಿ 40-50 ಜನರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ, ಎನ್ ಡಿಆರ್ ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾಜಿಸ್ಟಿಕ್ಸ್ ಸಂಸ್ಥೆಯ ಬ್ಯುನಿಸೆಸ್ ವಿಭಾಗದ ಮುಖ್ಯಸ್ಥ ಅಜಯ್ ಹಾಗೂ ಸೈಟ್ ಉಸ್ತುವಾರಿ ಅಮಾನುಲ್ಲಾ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Trending News