Railway Department: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೊಬೈಲ್ ಆಪ್ ಸೇವೆ ಈಗ ಕನ್ನಡದಲ್ಲೂ ಲಭ್ಯ

Railway Department: ಆರ್-ವ್ಯಾಲೆಟ್ ರಿಚಾರ್ಜ್ ಮೇಲೆ 100ಕ್ಕೆ ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯೂ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನೀತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.

Written by - Bhavishya Shetty | Last Updated : Jan 19, 2023, 05:35 PM IST
    • ರಾಜ್ಯದ ಜನರಿಗೆ ನೈರುತ್ಯ ರೈಲ್ವೇ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ
    • ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ UTS ಆಪ್ ನಲ್ಲಿ ಪ್ರಾದೇಶಿಕ ಭಾಷೆ ಕನ್ನಡಕ್ಕೂ ಆದ್ಯತೆ
    • ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 6.5 ಲಕ್ಷ ಜನರು UTS ಆಪ್ ಬಳಕೆ ಮಾಡುತ್ತಿದ್ದಾರೆ
Railway Department: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೊಬೈಲ್ ಆಪ್ ಸೇವೆ ಈಗ ಕನ್ನಡದಲ್ಲೂ ಲಭ್ಯ title=
South Western Railway Department

Railway Department: ಬೆಂಗಳೂರು: ರಾಜ್ಯದ ಜನರಿಗೆ ನೈರುತ್ಯ ರೈಲ್ವೇ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಈ ಮೊದಲು ಪ್ರಯಾಣಿಕರು ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಲು ರೈಲ್ವೆ ಇಲಾಖೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ UTS ಆಪ್ ನ ಬಳಕೆಗೆ ಸಿಗುತ್ತಿತ್ತು. ಈ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವಲ್ಲಿ ಕನ್ನಡ ಭಾಷೆಗೆ ಅವಕಾಶ ಇರಲಿಲ್ಲ. ಇದೀಗ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ UTS ಆಪ್ ಪ್ರಾದೇಶಿಕ ಭಾಷೆಯಾದ ಕನ್ನಡಕ್ಕೂ ಇದೀಗ ಆದ್ಯತೆ ನೀಡಿದ್ದು, ಪ್ರಯಾಣಿಕರ ಬಳಕೆಗೆ ಅವಕಾಶ ನೀಡಿದೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ-2023ರ ಪೂರ್ವ ಸಿದ್ಧತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಮಿಷನರ್ ಪರಿಶೀಲನೆ

ಜೊತೆಗೆ ಪ್ರಯಾಣಿಕರು ತಾವು ಇರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯ ಯಾವುದೇ ನಿಲ್ದಾಣದಿಂದ ಪ್ರಯಾಣಿಸಲು ಈ UTS ಆಪ್ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಪ್ ಬಳಕೆ ಹೇಗೆ ಮಾಡಬೇಕು:

ಪ್ರಯಾಣಿಕರು ಈ UTS ಆಪ್ ನ್ನು ತಮ್ಮ ಮೊಬೈಲ್ ಗೆ ಗೂಗಲ್ ಪ್ಲೇ-ಸ್ಟೋರ್, ವಿಂಡೋಸ್ ಸ್ಟೋರ್ ಹಾಗೂ ಐಪೋನ್ ಪೋನ್ ಬಳಕೆದಾರರು ಆಪಲ್ ಸ್ಟೋರ್ ಮೂಲಕ ಡೌನಲೋಡ್ ಮಾಡಿಕೊಳ್ಳಬಹುದು. ಲಿಂಕ್: https://play.google.com/store/apps/details?id=com.cris.utsmobile

ಆರ್-ವ್ಯಾಲೆಟ್ ರಿಚಾರ್ಜ್ ಮೇಲೆ 100ಕ್ಕೆ ಶೇ. 3 ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಸೀಜನ್ ಟಿಕೆಟ್ ಬುಕ್ಕಿಂಗ್, ಕ್ಯೂ-ಆರ್ ಬುಕ್ಕಿಂಗ್ ಜೊತೆಗೆ ಟಿಕೆಟ್ ರದ್ದು ಗೊಳಿಸುವುದು, ಟಿಕೆಟ್ ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನೀತರ ಮಾಹಿತಿಯನ್ನು ಈ UTS ಆಪ್ ಒಳಗೊಂಡಿರುತ್ತದೆ.

ಇದನ್ನೂ ಓದಿ:  ಆರು ವರ್ಷದ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರಿಯತಮ ಆತ್ಮಹತ್ಯೆ

ಸದ್ಯ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇಲ್ಲಿಯವರಿಗೆ 6.5 ಲಕ್ಷ ಜನರು UTS ಆಪ್ ಬಳಕೆ ಮಾಡುತ್ತಿದ್ದಾರೆ. ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಲು ರೈಲ್ವೇ ಇಲಾಖೆ ವಿನಂತಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News