ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ

ಕರೋನಾವೈರಸ್ ತಡೆಗಟ್ಟಲು ಮುಂಜಾಗ್ರತೆಯ ಕ್ರಮವಾಗಿ ಮತ್ತು ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮೈಸೂರು ನಗರ ಪಾಲಿಕೆ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.  

Yashaswini V Yashaswini V | Updated: Aug 19, 2020 , 11:19 AM IST
ಗೌರಿ-ಗಣೇಶ ಹಬ್ಬ: ಇಂದಿನಿಂದ 4 ದಿನ ಮೈಸೂರಿನ ಹೆಸರಾಂತ ಮಾರುಕಟ್ಟೆ ಬೇರೆಡೆ ಸ್ಥಳಾಂತರ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 (Covid 19) ಸೋಂಕು ಹರಡುವಿಕೆ ತಡೆಗಟ್ಟುವ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಜನಸಂದಣಿ ನಿಯಂತ್ರಿಸಲು ಆ.19ರಿಂದ 22ರವರೆಗೆ 4 ದಿನ ದೇವರಾಜ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

ಪ್ರಪಂಚದಲ್ಲಿ ಅತೀ ವೇಗವಾಗಿ ಓಡುವ ಅಫ್ರಿಕನ್ ಚೀತಾ ಮೈಸೂರಿಗೆ ಆಗಮನ

ಕರೋನಾವೈರಸ್ ತಡೆಗಟ್ಟಲು ಮುಂಜಾಗ್ರತೆಯ ಕ್ರಮವಾಗಿ ಮತ್ತು ಮಾರುಕಟ್ಟೆಯಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಮೈಸೂರು (Mysore) ನಗರ ಪಾಲಿಕೆ ಹೂವಿನ ವ್ಯಾಪಾರದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ.

ದೇವರಾಜ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಈ ನಾಲ್ಕು ದಿನ ಜೀವರಾಯನಕಟ್ಟೆ ಮೈದಾನದಲ್ಲಿ (ಜೆ.ಕೆ. ಗ್ರೌಂಡ್) ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೆ ಮೈಸೂರಿಗೆ ಸ್ವಚ್ಛತಾ ನಗರಿ ಎಂಬ ಗರಿ ಮೂಡುವುದೇ? ನಾಳೆ ಗೊತ್ತಾಗಲಿದೆ

ಆಗಸ್ಟ್ 22 ರಂದು ಮಾಂಸದ ಅಂಗಡಿ ಬಂದ್ 
ಗಣೇಶ ಚತುರ್ಥಿ ಪ್ರಯುಕ್ತ ಆ.22ರ ಶನಿವಾರ ಮೈಸೂರು ಮಹಾನಗರ ಪಾಲಿಕೆಗೆ ಒಳಪಟ್ಟ ಕುರಿ, ಮೇಕೆ, ದನ, ಎಮ್ಮೆ, ಕೋಳಿ ಮಾಂಸ, ಹಂದಿ ಮಾಂಸ ಮತ್ತು ಮೀನು ವ್ಯಾಪಾರವನ್ನು ಕಡ್ಡಾಯವಾಗಿ ನಿಷೇಧಿಸಲು ಆದೇಶಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಪಶುವೈದ್ಯಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.