ರಾಜ್ಯ ಬಜೆಟ್ 2019: ಮೈತ್ರಿ ಸರ್ಕಾರದ ಬಜೆಟ್​ ಹೈಲೈಟ್ಸ್

ನಮ್ಮದು ಮಾತೃ ಹೃದಯದ ಸರ್ಕಾರ. ಬಡವರ ಬಂಧು ಯೋಜನೆಯಡಿ ಬೀದಿಬದಿಯ ಸಣ್ಣ ವ್ಯಾಪಾರಿಗಳಿಗೆ ಸಾಲ ವಿತರಿಸಲಾಗಿದೆ. 

Last Updated : Feb 8, 2019, 03:01 PM IST
ರಾಜ್ಯ ಬಜೆಟ್ 2019: ಮೈತ್ರಿ ಸರ್ಕಾರದ ಬಜೆಟ್​ ಹೈಲೈಟ್ಸ್ title=
File Image

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಸ್ತುತಪಡಿಸಿದರು. ಈ ವೇಳೆ ನಾಡಿನ ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವುದು ನಮ್ಮ ಆಶಯ ಎಂದು ತಿಳಿಸಿದರು. 2019-20 ನೇ ಸಾಲಿನ ಬಜೆಟ್​ನ ಒಟ್ಟು ಗಾತ್ರ 2 ಲಕ್ಷದ 34 ಸಾವಿರ 153 ಕೋಟಿ ರೂ.

ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಜನರ ಸಹಾಯವನ್ನು ನೆನೆಯುವುದಾಗಿ ತಿಳಿಸಿದರು. ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವನ್ನು ಸಜ್ಜುಗೊಳಿಸಿದ್ದೇವೆ ಎಂದು ತಿಳಿಸಿದ ಹೆಚ್‌ಡಿಕೆ, ಬೆಳೆಸಾಲ ಮನ್ನಾವನ್ನು ಯಶಸ್ವಿಯಾಗಿ, ಪಾರದರ್ಶಕವಾಗಿ ಜಾರಿ ಮಾಡಿದ್ದೇವೆ. ಅನ್ನದಾತರಿಗೆ ನಾವು ನೀಡುವ ಗೌರವ ಹೊನ್ನಶೂಲದಂತೆ ಆಗಿದೆ. ನಮ್ಮ ಸರ್ಕಾರದ ನಡೆ ರೈತಪರ. ರೈತರ ನೋವಿಗೆ ಮಿಡಿದು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವ ಸಂಕಲ್ಪ ಮಾಡಿದ್ದೇವೆ ಎಂದರು.

ಇಸ್ರೇಲ್ ಮಾದರಿ, ಸಾವಯವ, ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಪದ್ಧತಿ ಜನಪ್ರಿಯಗೊಳಿಸಲು ಯತ್ನಿಸಿದ್ದೇವೆ. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ರೈತರಿಂದಲೇ ಪರಿಹಾರ ಕಂಡು ಕೊಳ್ಳಲು ರೈತರ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. 

ಆರ್ಥಿಕ ಶಿಸ್ತಿನ ಇತಿಮಿತಿಯ ಒಳಗೆ ಯೋಜನೆಗಳನ್ನು ತಂದಿದ್ದೇವೆ. ಶಾಲಾ ಸಂಪರ್ಕ ಸೇತು ಯೋಜನೆ ಜಾರಿ. ಸರ್ಕಾರಿ ಶಾಲೆಗಳು ಇಂಗ್ಲಿಷ್ ಮೀಡಿಯಂ ಕಡ್ಡಾಯ. ದುಸ್ಥಿತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಯೋಜನೆ, ಮಲೆನಾಡು ಶಾಲಾ ವಿದ್ಯಾರ್ಥಿಗಳಿಗೆ ಛತ್ರಿ, ರೈನ್​ಕೋಟ್​ ಭಾಗ್ಯದ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು. ಕೃಷಿ ಪರಿಕರಗಳಿಗೆ ಹಾಗೂ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಶೇಕಡ 50ರಷ್ಟು ಅನುದಾನ ನೀಡಲಾಗುವುದು. ಇಸ್ರೇಲ್‌ ಮಾದರಿಯಲ್ಲಿ ಕಿರು ನೀರಾವರಿ ಯೋಜನೆಯನ್ನು ಜಾರಿಗೆ ತರಲು ಹೆಚ್ಚುವರಿ ಅನುದಾನ ಮಂಜೂರು ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು. 

2019-20 ನೇ ಸಾಲಿನ ಬಜೆಟ್​ ಹೈಲೈಟ್ಸ್:
* ಬರ ಪರಿಸ್ಥಿತಿ ಪ್ರತಿ ಹೆಕ್ಟೇರ್ ಗೆ 7,500 ರೂಪಾಯಿ ಪ್ರೋತ್ಸಾಹ ಧನ. 
* ಸಿರಿಧಾನ್ಯ ಬೆಳೆಯುವ ಕೃಷಿಕರಿಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ. ಕರಾವಳಿ ಭಾಗದ ರೈತರಿಗೆ ಪ್ರೋತ್ಸಾಹ ಧನ.
* ಕೃಷಿ ತೋಟಗಾರಿಕೆ, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಬೆಳೆಗಾರರಿಗೆ 150 ಕೋಟಿ ರೂಪಾಯಿ. ಸರ್ಕಾರ ಹೊಸ ಬೆಳೆ ವಿಮೆ ಯೋಜನೆಗೆ ನಿರ್ಧರಿಸಿದೆ. ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದನಾ ಘಟಕ. ತೋಟಗಾರಿಕೆಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್. 
* ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ ಸ್ಥಾಪನೆ.
* ಜೇನು ಕೃಷಿ ಉತ್ತೇಜನಕ್ಕೆ 5 ಕೋಟಿ ರೂ. ಘೋಷಣೆ.
* ಕೋಲಾರದಲ್ಲಿ ಟೊಮೇಟೊ ಸಂಸ್ಕರಣಾ ಘಟಕ ಸ್ಥಾಪನೆಗೆ 20 ಕೋಟಿ ರೂ.
* ರೇಷ್ಮೆ ಮಾರುಕಟ್ಟೆ ಬಲವರ್ಧನೆಗೆ 10 ಕೋಟಿ ರೂಪಾಯಿ, ರೇಷ್ಮೆ ಕಾರ್ಮಿಕರ ಹೊಸ ತಾಂತ್ರಿಕತೆಹೆ 2 ಕೋಟಿ ರೂ.
* ಹಾಲಿನ ಪ್ರೋತ್ಸಾಹ ಧನ ಹೆಚ್ಚಳ. ಹಾಲು ಉತ್ಪಾದನಾ ಪ್ರೋತ್ಸಾಹ ಧನ 6 ರೂಪಾಯಿ ಹೆಚ್ಚಳ. ಮಂಗನ ಕಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂಪಾಯಿ ಅನುದಾನ. ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ.
* ರಾಮನಗರದಲ್ಲಿ ತೋಟಗಾರಿಕಾ ಬೆಳೆಗಳ ಸಂಸ್ಕರಣಾ ಘಟಕ ಸ್ಥಾಪನೆ
* ಮೀನುಗಾರಿಕೆ ದೋಣಿಗಳಿಗೆ ಶೇ.50ರಷ್ಟು ಸಹಾಯಧನ. ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ.50ರಷ್ಟು ಅನುದಾನ.
* ಮಲ್ಪೆ ಕಡಲ ತೀರದಲ್ಲಿ ತ್ಯಾಜ್ಯ ಘಟಕ ನಿರ್ವಹಣೆಗೆ 15 ಕೋಟಿ. 
* 12 ಬೆಳೆಗಳಿಗೆ ರೈತ ಕೃಷಿ ಕಣಜ ಯೋಜನೆ.
* ಈರುಳ್ಳಿ, ಆಲೂಗಡ್ಡೆ ಬೆಳೆಗಳಿಗೆ ಪ್ರೋತ್ಸಾಹ ಧನ. 
* ಗದಗದಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ.
* 6 ಪ್ರಮುಖ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ 10 ಕೋಟಿ ರೂಪಾಯಿ ಅನುದಾನ.
* ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿ. ಆಭರಣಗಳ ಮೇಲೆ ಬೆಳೆ ಸಾಲ. ರೈತ ಮಹಿಳೆಯರ ಚಿನ್ನದ ಮೇಲೆ ಶೇ.3ರಷ್ಟು ಬಡ್ಡಿದರದಲ್ಲಿ ಸಾಲ.
* ಕೃಷಿ ಉತ್ತನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ 8 ತಿಂಗಳವರೆಗೆ ಉಚಿತ ಉಗ್ರಾಣ ವ್ಯವಸ್ಥೆ. 
* ಉತ್ತರ ಮತ್ತು ದಕ್ಷಿಣ ಕರ್ನಾಟಕಗಳಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭ. ಮಂಡ್ಯದ ವಿಸಿ ಫಾರಂ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೇಂದ್ರಗಳ ಸ್ಥಾಪನೆ.
* ನಂದಿನ ಪಾರ್ಲರ್ ಗಳಲ್ಲಿ ಸಿರಿಧಾನ್ಯಗಳ ಮಾರಾಟಕ್ಕೆ ಅವಕಾಶ.
* ಕೃಷಿ ಉತ್ತನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ ಸಂಗಹಕ್ಕೆ ಉಗ್ರಾಣ ನಿಗಮದಲ್ಲಿ 
* ಕೊಪ್ಪಳ ಏತ ನೀರಾವರಿಗೆ 200 ಕೋಟಿ ರೂ. ಮೀಸಲು.
* ಪ್ರತಿ ಸಂತೆಯ ಮೂಲಭೂತ ಸೌಕರ್ಯಕ್ಕೆ ಒಂದು ಕೋಟಿ ರೂ.
* ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ
* ಕೆರೆಗಳ ಪುನಶ್ಚೇತನಕ್ಕಾಗಿ 1,600 ಕೋಟಿ ರೂ. ಅನುದಾನ ಮೀಸಲು
* ಮಂಗನ ಖಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂ. ಅನುದಾನ
* 100 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಸಮಗ್ರ ಅಭಿವೃದ್ಧಿ
* ನೀರಾವರಿ ಯೋಜನ್ತೆಗಳಿಗೆ ಒಟ್ಟು 1,563 ಕೋಟಿ ರೂ. ಮೀಸಲು
* ಮಂಡ್ಯದ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗೆ 400 ಕೋಟಿ ರೂ.
* 200 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ ತಾಲೂಕಿನ ಕೆರೆಗಳ ತುಂಬಿಸಲು ಯೋಜನೆ
* ಮಳವಳ್ಳಿ ತಾಲೂಕು ಅಚ್ಚುಕಟ್ಟ ನೀರಾವರಿ ಯೋಜನೆಗೆ 200 ಕೋಟಿ ರೂ.
* ಬಳ್ಳಾರಿ ಗ್ರಾಮಾಂತರಕ್ಕೆ 60 ಕೋಟಿ ರೂ.
* ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ.
* ಆಟೋ, ಟ್ಯಾಕ್ಸಿ ಚಾಲಕರಿಗೆ ವಿಮೆ ಸೌಲಭ್ಯ
* ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ
* ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ- ಈ ನಾಲ್ಕು ಜಿಲ್ಲೆಗಳಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
* 195 ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್​ಗಳ ಅಭಿವೃದ್ಧಿ
* ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 50 ಕೋಟಿ ರೂ.
* ವಿಜಯಪುರದಲ್ಲಿ ಆಸ್ಪತ್ರೆಗೆ 40 ಕೋಟಿ ರೂ.
* ಬಸವನ ಬಾಗೇವಾಡಿ ಮೂಲ ಸೌಕರ್ಯ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ
* ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂಪಾಯಿ ಅನುದಾನ. 
* ವೃಕ್ಷೋದ್ಯಾನ ಯೋಜನೆಗಳಿಗೆ 15 ಕೋಟಿ ರೂಪಾಯಿ. 
* ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 2,500 ರೂಪಾಯಿ ಸಹಾಯಧನ
* ಆರೋಗ್ಯಭಾಗ್ಯ ಯೋಜನೆಯಡಿ 1 ಲಕ್ಷದವರೆಗೆ ಕಾರ್ಮಿಕರಿಗೆ ಚಿಕಿತ್ಸಾ ವೆಚ್ಚ, ಕೆಲಸದ ವೇಳೆ ಮೃತಪಟ್ಟರೆ 2 ಲಕ್ಷ ರೂಪಾಯಿ
* ಶಿಕ್ಷಕರ ಸಾಮರ್ಥ್ಯ ವರ್ಧನೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆ
* ಕೇಂದ್ರೀಯ ವಿದ್ಯಾಲಯ ಶಾಲೆಗಳ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ 1,000 ಕರ್ನಾಟಕ ಮಾದರಿ ಪಬ್ಲಿಕ್ ಶಾಲೆಗಳ ನಿರ್ಮಾಣ
* ಹವಾಮಾನ ಬದಲಾವಣೆ ಅಧ್ಯಯನಕ್ಕೆ 2 ಕೋಟಿ ರೂ. ಅನುದಾನ
* ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ
*ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ., ಸಹಾಯಕರಿಗೆ 200ರೂ. ಗೌರವಧನ ಹೆಚ್ಚಳ.
* ಅನ್ನ ಭಾಗ್ಯ ಯೋಜನೆಗೆ 3700 ಕೋಟಿ ರೂ. ಯೋಜನೆ ಸೋರಿಕೆ ಪತ್ತೆಗೆ ವಿಚಕ್ಷಣ ದಳ ಘೋಷಣೆ.
* 4 ಹೊಸ ತಾಲೂಕು ಘೋಷಣೆ : ಹಾರೋಹಳ್ಳಿ, ಕಳಸ, ಚೇಳೂರು ಮತ್ತು ತೇರದಾಳ.
* ಹಾಸನದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ.
* 20 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ
* ಜೂನ್ ಒಳಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ.
* ಅಂಕಪಟ್ಟಿಗಳ ಡಿಜಿಟಲೀಕರಣಕ್ಕೆ 1 ಕೋಟಿ ರೂ. ಅನುದಾನ
* ರೈತರ ಪಂಪ್ ಸೆಟ್ ಗಳಿಗೆ ಹಗಲಿನಲ್ಲೂ ವಿದ್ಯುತ್ ಪೂರೈಕೆ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ- ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಮುಂದುವರಿಸಲು 900 ಕೋಟಿ ರೂ.
* 5000 ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ, 1,500 ಹೊಸ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ
* ಸಾರಥಿ ಸೂರು ವಸತಿ ಯೋಜನೆಗೆ 50 ಕೋಟಿ ರೂ ಅನುದಾನ: ಬೆಂಗಳೂರಿನ ಆಟೋ, ಟ್ಯಾಕ್ಸಿ ಚಾಲಕರಿಗೆ ಈ ಯೋಜನೆ ಲಭ್ಯ
* ಮಂಗಳೂರು, ತುಮಕೂರು, ಚಿತ್ರದುರ್ಗ, ಹಾವೇರಿ,. ಕೋಲಾರ ಸೇರಿದಂತೆ 10 ಜಿಲ್ಲೆಗಳಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕಗಳ ನಿರ್ಮಾಣ
* ಬಿಪಿಎಲ್ ಕಾರ್ಡ್ ದಾರರಾದ ಗರ್ಭಿಣಿಯರಿಗೆ 6 ತಿಂಗಳ ಮಾಸಿಕ ಸಹಾಯ ಧನ 1000 ರೂ. ನಿಂದ 2000 ರೂ.ಗೆ ಏರಿಕೆ.
* ರಕ್ತ ಸಂಗ್ರಹಣೆ, ವಿತರಣೆಗಾಗಿ ವಿಭಾಗೀಯ ರಕ್ತನಿಧಿ ಸ್ಥಾಪನೆ
* ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಲಕಿಯರಿಗೆ ಹೊಸ ಬಾಲ ಮಂದಿರ ಮಂಜೂರು
* ಮಹಾನಗರ ಪಾಲಿಕೆಗಳ ಅಭಿವೃದ್ಧಿಗೆ 1,325 ಕೋಟಿ ರೂ ಅನುದಾನ
* ಬೆಂಗಳೂರು ಏರ್ ಪೋರ್ಟ್ ಗೆ ಹೊಸ ಟರ್ಮಿನಲ್. ಹೊಸ ಟರ್ಮಿನಲ್ ಕಟ್ಟಡದ ಅಭಿವೃದ್ಧಿಗೆ 32 ಕೋಟಿ ರೂಪಾಯಿ ಅನುದಾನ.
* ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1000 ಕೋಟಿ ರೂಪಾಯಿ
* ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಿರ್ಧಾರ
*  ಮೆಟ್ರೋ ಹಾಗೂ ಬಸ್‌ ಪ್ರಯಾಣಕ್ಕೆ ಏಕರೂಪದ ಪಾಸ್‌ ವ್ಯವಸ್ಥೆ. ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ
* ಮುಸ್ಲಿಂ ಖಬ್ರಸ್ಥಾನಗಳ ಅಭಿವೃದ್ಧಿಗೆ 10 ಕೋಟಿ ರೂ ಅನುದಾನ
* ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮೀಸಲು.
* ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ 30 ಸಾವಿರ ರೂಪಾಯಿಗಳಿಗೆ ಏರಿಕೆ. 
* ಪೆಟ್ರೋಲ್ ಚಾಲಿತ ಆಟೋಗಳನ್ನು ವಿದ್ಯುತ್ ಚಾಲಿತ ಆಟೋಗಳಾಗಿ ಪರಿವರ್ತಿಸಲು ಸಹಾಯ ಧನ
* 4 ಸಾರಿಗೆ ಸಂಸ್ಥೆಗಳಿಗೆ 3544 ವಿವಿಧ ಮಾದರಿಯ ಹೊಸ ಬಸ್ ಗಳು.
* ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ
* ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 2 ಕೋಟಿ ರೂ. ಅನುದಾನ
* ಮೈಸೂರಿನಲ್ಲಿ ಡಬಲ್​ ಡೆಕ್ಕರ್​ ಬಸ್​ ಸಂಚಾರ 
* 7 ಕೋಟಿ ರೂ ವೆಚ್ಚದಲ್ಲಿ 'ಕೆ-ಟೆಕ್'ನಾವೀನ್ಯತೆ ಕೇಂದ್ರ ಸ್ಥಾಪನೆ
* ಪದವಿಪೂರ್ವ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಚಟುವಟಿಕೆಗೆ 2 ಕೋಟಿ ರೂ
ಅನುದಾನ.
* ಕಾಂಪಿಟ್ ವಿತ್ ಚೀನಾ ಯೋಜನೆಗೆ 110 ಕೋಟಿ ರೂಪಾಯಿ ಮೀಸಲು.
* ಬೆಂಗಳೂರಿನ ಬೀದಿ ದೀಪಗಳನ್ನು ಮುಂದಿನ 3 ವರ್ಷಗಳಲ್ಲಿ ಹಂತಹಂತವಾಗಿ LED ದೀಪಗಳಿಗೆ ಮಾರ್ಪಾಡು ಮಾಡಲು ಕ್ರಮ.
* ಜಿಲ್ಲೆಗಳಲ್ಲಿ ಇ-ಆಡಳಿತ ತರಬೇತಿಗೆ ಕೋಶ ಸ್ಥಾಪನೆ
* ಗಾಂಧೀಜಿ 150ನೇ ಜನ್ಮದಿನಾಚರಣೆಗೆ 5 ಕೋಟಿ ರೂ ಅನುದಾನ
* ಮಂಗಳೂರು, ಮೈಸೂರು ನಗರಗಳಲ್ಲಿ ಮೆಟ್ರೋ ಯೋಜನೆಗಳಿಗೆ ಬೇಡಿಕೆ ಬಂದಿದೆ. ಸಾಧಕ-ಬಾಧಕಗಳ ಅಧ್ಯಯನಕ್ಕೆ ಕ್ರಮ
* ವಿದ್ಯುತ್ ಪೂರೈಕೆ ಸುಧಾರಣೆಗೆ 40 ಸಾವಿರ ಹೊಸ ಟ್ರಾನ್ಸ್‌ಫಾರ್ಮರ್‌ಗಳ ಅಳವಡಿಕೆ
* ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ 7 ಕೋಟಿ ರೂ
* 82 ಕೋಟಿ ರೂ ವೆಚ್ಚದಲ್ಲಿ ಗಣಿ ಗುತ್ತಿಗೆಗಳ ಸಮೀಕ್ಷೆ; ಡ್ರೋಣ್‌, ಜಿಪಿಎಸ್‌ ತಂತ್ರಜ್ಞಾನ ಬಳಸಿ ಸಮೀಕ್ಷೆ
* ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ ಕೇಂದ್ರ ಕಾರಾಗೃಹ ಸ್ಥಾಪನೆ.

 

 

Trending News