Punjab Elections 2022: 'ನಾನು ನನ್ನ ಸಹೋದರನಿಗಾಗಿ ಪ್ರಾಣ ಕೂಡ ಕೊಡಬಲ್ಲೆ' Priyanka Vadra ಹೀಗೆ ಹೇಳಿದ್ದಾದರೂ ಏಕೆ?

Punjab Assembly Elections 2022: 'ನನ್ನ ಸಹೋದರನಿಗಾಗಿ ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಬಲ್ಲೆ ಮತ್ತು ನನಗಾಗಿ ಅವನು ಕೂಡ ಮಾಡಬಹುದು' ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಹೇಳಿದ್ದಾರೆ. ಹೋರಾಟ ಇರುವುದು ಬಿಜೆಪಿಯಲ್ಲಿಯೇ ಹೊರತು ಕಾಂಗ್ರೆಸ್‌ನಲ್ಲಿಲ್ಲ. ಯೋಗಿ-ಮೋದಿ ಮತ್ತು ಅಮಿತ್ ಶಾ ನಡುವೆ ಹಿತಾಸಕ್ತಿ ಸಂಘರ್ಷ ಇರಬಹುದು ಎಂದು ಪ್ರಿಯಾಂಕಾ ಹೇಳಿದ್ದಾರೆ.

Written by - Nitin Tabib | Last Updated : Feb 13, 2022, 07:02 PM IST
  • ತನ್ನ ಭಾಷಣದಲ್ಲಿ ಬಿಜೆಪಿಯನ್ನು ಗುರಿಯಾಗಿಸಿದ ಪ್ರಿಯಾಂಕಾ ವಾದ್ರಾ.
  • ರಾಹುಲ್-ಪ್ರಿಯಾಂಕಾ ವಿರುದ್ಧ ಸಿಎಂ ಯೋಗಿ ವಾಗ್ದಾಳಿ ನಡೆಸಿದ್ದರು.
  • ಪ್ರಿಯಾಂಕಾ ಪಂಜಾಬ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು
Punjab Elections 2022: 'ನಾನು ನನ್ನ ಸಹೋದರನಿಗಾಗಿ ಪ್ರಾಣ ಕೂಡ ಕೊಡಬಲ್ಲೆ' Priyanka Vadra ಹೀಗೆ ಹೇಳಿದ್ದಾದರೂ ಏಕೆ? title=
Five State Assembly Elections 2022 (File Photo)

ನವದೆಹಲಿ: Five State Assembly Elections 2022 - ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ಮುಂದುವರೆದಿದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಪ್ರಿಯಾಂಕಾ ಗಾಂಧಿ (Priyanka Gandhi) ಕೂಡ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ ಗೆಲುವಿಗಾಗಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಭಾನುವಾರ ಪಂಜಾಬ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಿಯಾಂಕಾ ಬಿಜೆಪಿಯನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ

ಸುದ್ದಿ ಸಂಸ್ಥೆ ANI ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಪ್ರಿಯಾಂಕಾ ಭಾನುವಾರ, 'ನಾನು ನನ್ನ ಸಹೋದರ (Rahul Gandhi) ಗಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡಬಹುದು ಮತ್ತು ಅವನು ನನಗಾಗಿ ಮಾಡಬಹುದು. ಹೋರಾಟ ಇರುವುದು ಬಿಜೆಪಿಯಲ್ಲಿಯೇ ಹೊರತು ಕಾಂಗ್ರೆಸ್‌ನಲ್ಲಿಲ್ಲ. ಯೋಗಿ (Yogi Adityanath) - ಮೋದಿ (Narendra Modi) ಮತ್ತು ಅಮಿತ್ ಶಾ (Amit Shah) ನಡುವೆ ಹಿತಾಸಕ್ತಿ ಸಂಘರ್ಷ ಇರಬಹುದು' ಎಂದು ಹೇಳಿದ್ದಾರೆ. 

ಇದನ್ನ ಓದಿ-ಆನ್ಲೈನ್ ಡೇಟಿಂಗ್ ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ರೆ ಭಾರಿ ಹಾನಿ ಎದುರಿಸಬೇಕಾಗಬಹುದು?

ಪ್ರಿಯಾಂಕಾ ಗಾಂಧಿ ನೀಡಿರುವ ಈ ಹೇಳಿಕೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತೀಕಾರ ಎಂದು ಪರಿಗಣಿಸಲಾಗುತ್ತಿದೆ. ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, 'ಇಡೀ ದೇಶದೊಳಗೆ ಕಾಂಗ್ರೆಸ್ (Congress) ಮುಳುಗುತ್ತಿದೆ. ಅಲ್ಲಿಲ್ಲಿ ಅದರ ಸ್ವಲ್ಪ ಇದ್ದರೋ ಕೂಡ ಅದನ್ನು ಮುಳುಗಿಸಲು ಸಹೋದರ-ಸಹೋದರಿಯರಿಬ್ಬರು ಸಾಕು' ಎಂದಿದ್ದರು.

ಇದನ್ನೂ ಓದಿ-ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಲವ್‌ ಸ್ಟೋರಿ: 'ಬೈ ಟು ಲವ್' ಟ್ರೇಲರ್‌ ರಿಲೀಸ್‌ಗೆ ಕೌಂಟ್‌ಡೌನ್.

ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ
ಪಂಜಾಬ್‌ನ ಎಲ್ಲಾ 117 ಸ್ಥಾನಗಳಿಗೆ ಫೆಬ್ರವರಿ 14 ರಂದು ಮೊದಲು ಚುನಾವಣೆ ನಡೆಯಬೇಕಿತ್ತು. ಆದರೆ ರವಿದಾಸ್ ಜಯಂತಿ ಫೆಬ್ರವರಿ 16 ರಂದು ಇರುವುದರಿಂದ ಪಂಜಾಬ್‌ನಲ್ಲಿ ಚುನಾವಣೆಯ ದಿನಾಂಕವನ್ನು ಫೆಬ್ರವರಿ 20 ಕ್ಕೆ ಮುಂದೂಡಲಾಗಿದೆ.  ಎಲ್ಲಾ ಪಕ್ಷಗಳೊಂದಿಗೆ ಸಭೆ ನಡೆಸಿದ ನಂತರ ಚುನಾವಣಾ ಆಯೋಗವು ಮತದಾನದ ದಿನಾಂಕವನ್ನು ಬದಲಾಯಿಸಲು ನಿರ್ಧರಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಮಾರ್ಚ್ 20 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ-ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಸರ್ಕಾರದಿಂದ ಸಿಗಲಿದೆ ಶೇ.50 ರಷ್ಟು ಸಬ್ಸಿಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News