ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ?: ಎಚ್‌ಡಿಕೆ ಪ್ರಶ್ನೆ

ಹಕ್ಕುಗಳ ಸಾಧನೆಗಾಗಿ ಕನ್ನಡಿಗರೆಲ್ಲಾ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನ ಹೋರಾಟ ಬಿಟ್ಟರೆ ನಮಗೆ ನ್ಯಾಯ ಸಿಗದು’ ಅಂತಾ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.  

Written by - Zee Kannada News Desk | Last Updated : Feb 8, 2022, 07:05 PM IST
  • ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ?
  • ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ಕೇಂದ್ರದ ಮುಂದೆ ದೇಹಿ ಎನ್ನುವಂಥ ದುಸ್ಥಿತಿ
  • ಉದ್ಯೋಗ, ಅನುದಾನ, ತೆರಿಗೆ ಪಾಲು.. ಹೀಗೆ ಎಲ್ಲದರಲ್ಲೂ ಕರ್ನಾಟಕದ ಕಡೆಗಣನೆ ನಿರಂತರವಾಗಿದೆ
ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ?: ಎಚ್‌ಡಿಕೆ ಪ್ರಶ್ನೆ title=
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಎಚ್‌ಡಿಕೆ ಕಿಡಿ

ಬೆಂಗಳೂರು: ನೆಲ, ಜಲ ಮತ್ತು ಭಾಷೆಯ ಹಕ್ಕು ಸಾಧನೆಗಾಗಿ ನಮ್ಮ ಗುಲಾಮಗಿರಿ ಇನ್ನೆಷ್ಟು ದಿನ? ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಪ್ರಶ್ನಿಸಿದ್ದಾರೆ. ಈ ಕುರಿತು ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಒಕ್ಕೂಟ ವ್ಯವಸ್ಥೆಯ ಗಣರಾಜ್ಯಕ್ಕೆ 73 ವರ್ಷ. ನಾಡಿನ ಏಕೀಕರಣಕ್ಕೂ 49ರ ಹೊತ್ತು’ ಅಂತಾ ಟ್ವೀಟ್ ಮಾಡಿದ್ದಾರೆ.

‘ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿ ಅನೇಕ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಕರ್ನಾಟಕ(Karnataka)ವು ಇಂದು  ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ದೇಹಿ ಎನ್ನುವಂಥ ದುಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ, ಆನ್‌ಲೈನ್ ತರಗತಿ ಆರಂಭಿಸಿ: ಸಿದ್ದರಾಮಯ್ಯ

‘ಉದ್ಯೋಗ, ಅನುದಾನ, ತೆರಿಗೆ ಪಾಲು.. ಹೀಗೆ ಎಲ್ಲದರಲ್ಲೂ ಕರ್ನಾಟಕದ ಕಡೆಗಣನೆ ನಿರಂತರವಾಗಿದೆ. ಹಕ್ಕುಗಳ ಸಾಧನೆಗಾಗಿ ಕನ್ನಡಿಗರೆಲ್ಲಾ ಒಟ್ಟಾಗಿ ಹೆಜ್ಜೆ ಇಡಬೇಕಿದೆ. ಒಗ್ಗಟ್ಟಿನ ಹೋರಾಟ ಬಿಟ್ಟರೆ ನಮಗೆ ನ್ಯಾಯ ಸಿಗದು’ ಅಂತಾ ಕುಮಾರಸ್ವಾಮಿ(HD Kumaraswamy) ಎಚ್ಚರಿಕೆ ನೀಡಿದ್ದಾರೆ.  

‘ಈ ನಿಟ್ಟಿನಲ್ಲಿ ರಾಜ್ಯದ ಕನ್ನಡಪರ ಒಕ್ಕೂಟಗಳ ಮುಖಂಡರ ಜೊತೆ ನಾಳೆ (ಫೆ.9) ಮುಕ್ತ ಮಾತುಕತೆ ನಡೆಸುತ್ತಿದ್ದೇನೆ. ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರದ ದಿಕ್ಕಿನಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ’ ಅಂತಾ ಎಚ್‌ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: Hijab Controversy: ಕರ್ನಾಟಕದಲ್ಲಿ ಮೂರು ದಿನಗಳು ಶಾಲೆ ಬಂದ್, ಹೈಕೋರ್ಟ್ ಹೇಳಿದ್ದೇನು?

‘ಕನ್ನಡ ಮನಸುಗಳ ಜೊತೆಗಿನ ನನ್ನ ಚರ್ಚೆ ನಾಡಿನ ಪ್ರಗತಿಗೆ ನವದಿಕ್ಕು ತೊರಲಿದೆ ಎಂಬುದು ನನ್ನ ಅಚಲ ವಿಶ್ವಾಸ. ಕನ್ನಡದ ಮಕ್ಕಳಾದ ನಮ್ಮೆಲ್ಲರ ಕೆಚ್ಚು ಸುವರ್ಣ ಕರ್ನಾಟಕದ ಸಮಗ್ರ ಪ್ರಗತಿಗೆ ನಾಂದಿ ಆಗಲಿ. ಬನ್ನಿ, ನಾವೆಲ್ಲರೂ ಒಂದು ವೇದಿಕೆಯಲ್ಲಿ ಚರ್ಚೆ ಮಾಡೋಣ. #ಕನ್ನಡಿಗರಿಗೇ_ಅಧಿಕಾರ_ಬಲಿಷ್ಠ_ಕರ್ನಾಟಕದ_ಸಾಕಾರ’ ಅಂತಾ ಸಂದೇಶ ರವಾನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News