ಫಕೀರ ಸಿದ್ದರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ: ಆನೆ ಅಂಬಾರಿ ಸಮೇತ ತುಲಾಭಾರ!

ಸಾಮಾನ್ಯವಾಗಿ ನಾವು ಬಂಗಾರ ಬೆಳ್ಳಿ ತುಲಾಭಾರ ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆ ಆನೆ ಅಂಬಾರಿ ಸಮೇತ ಸ್ವಾಮೀಜಿಗಳ ತುಲಾಭಾರ ಮಾಡಲಾಗಿದೆ.. ಅದು 5555 ಕೆಜಿ ನಾಣ್ಯಗಳ ಮೂಲಕ.. ಭಾವೈಕ್ಯೆತೆಗೆ ಹೆಸರಾದ ಆ ಮಠದ ಸ್ವಾಮೀಜಿಗೆ ಇವತ್ತು ಆನೆ ಅಂಬಾರಿ ಸಮೇತ 10 ರೂಪಾಯಿ  5555 ಕೆಜಿ ನಾಣ್ಯಗಳ ತುಲಾಭಾರ ಮಾಡಲಾಯಿತು...ಅಷ್ಟಕ್ಕೂ ಆ ಸ್ವಾಮೀಜಿ ಯಾರು? ಏನಿದು‌ ನಾಣ್ಯಗಳ ತುಲಾಭಾರ ಅಂತೀರಾ ಈ ಸ್ಟೋರಿ ಓದಿ..  

Written by - Savita M B | Last Updated : Feb 2, 2024, 02:50 PM IST
  • ಒಂದು ಕಡೆ ಆನೆ ಮೇಲೆ ಅಂಬಾರಿ..ಇನ್ನೊಂದು ಕಡೆ ಅಂಬಾರಿ
  • ಮತ್ತೊಂದು ಕಡೆ 5555 ಕೆಜಿ ನಾಣ್ಯಗಳ ತುಲಾಭಾರ.
  • ಮೊದಲ ಬಾರಿಗೆ ಸ್ವಾಮೀಜಿಯೊಬ್ಬರಿಗೆ 5555 ಕೆಜಿ ನಾಣ್ಯಗಳ ತುಲಾಭಾರ ನಡೆದಿದ್ದು ಇದೇ ಮೊದಲು.
ಫಕೀರ ಸಿದ್ದರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ: ಆನೆ ಅಂಬಾರಿ ಸಮೇತ ತುಲಾಭಾರ! title=

Hubli: ಒಂದು ಕಡೆ ಆನೆ ಮೇಲೆ ಅಂಬಾರಿ..ಇನ್ನೊಂದು ಕಡೆ ಅಂಬಾರಿಯೊಳಗೆ ಫಕ್ಕೀರ ಸಿದ್ದರಾಮ ಮಾಹಾಸ್ವಾಮಿಗಳು..ಮತ್ತೊಂದು ಕಡೆ 5555 ಕೆಜಿ ನಾಣ್ಯಗಳ ತುಲಾಭಾರ..ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿ ನೆಹರೂ ಮೈದಾನ ಇವತ್ತು ವಿಶೇಷ ತುಲಾಭಾರ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು. ಬಹುಷಃ ಪ್ರಪಂಚದಲ್ಲಿ ಮೊದಲ ಬಾರಿಗೆ ಸ್ವಾಮೀಜಿಯೊಬ್ಬರಿಗೆ 5555 ಕೆಜಿ ನಾಣ್ಯಗಳ ತುಲಾಭಾರ ನಡೆದಿದ್ದು ಇದೇ ಮೊದಲು.

ಗದಗ ಜಿಲ್ಲೆಯ ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿಗಳ ಅಮೃತ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.ತುಲಭಾರ ಕಾರ್ಯಕ್ರಮಕ್ಕೂ ಮುನ್ನ ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಭವ್ಯವಾದ ಶೋಭಾಯಾತ್ರೆ ಮಾಡಲಾಯಿತು. 

ಇದನ್ನೂ ಓದಿ-ಕರ್ನಾಟಕದ ಹಳ್ಳಿಯೊಂದರಲ್ಲಿ ಗ್ರಾಮಸ್ಥರು ಸಂಸ್ಕೃತವನ್ನೇ ಮಾತನಾಡುತ್ತಾರೆ!ಅದು ಯಾವುದು ಗೊತ್ತೇ?

ಐದು ಆನೆ, ಐದು ಒಂಟೆ, ಐದು ಕುದುರೆಗಳು ಸೇರಿದಂತೆ ವಿವಿಧ ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವು. ಫಕೀರ ಸಿದ್ದರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಮೂರು ಸಾವಿರ ಮಠದ ಮೂಜಗು ಸ್ವಾಮೀಜಿಗಳನ್ನು ತೆರೆದ ವಾಹನದಲ್ಲಿ ಕೂರಿಸಿ ಭವ್ಯ ಮೆರವಣಿಗೆ ಮಾಡಲಾಯಿತು. ಭಾವೈಕ್ಯತಾ ರಥಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು.

 ಆನೆಯ ಮೇಲೆ ಅಂಬಾರಿ ಇರಿಸಿ ಫಕೀರ ಸಿದ್ದರಾಮ ಸ್ವಾಮೀಜಿಯವರನ್ನು ಕೂರಿಸಿ ತುಲಾಭಾರ ಮಾಡಲಾಯಿತು.ಇಂತಹದ್ದೊಂದು ತುಲಭಾರದ ಸಂಕಲ್ಪದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪ ಸಭಾಪತಿ ಬಸವರಾಜ ಹೊರಟ್ಟಿ ಏಕೆಂದರೆ ಕೇಳಿ.

ಇನ್ನು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಶೇಷವಾಗಿ ಸಿದ್ದಪಡಿಸಲಾದ ಬೃಹತ್ ತಕ್ಕಡಿಯಲ್ಲಿ 5555 ಕೆಜಿ ತೂಕದ ಹತ್ತು ರೂಪಾಯಿ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಗಣ್ಯರು ನಗಾರಿ ಬಾರಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಪ್ರಲ್ಹಾದ್ ಜೋಶಿ, ಬಸವರಾಜ ಹೊರಟ್ಟಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿ.ವೈ. ವಿಜಯೇಂದ್ರ, ಎಮ್‌.ಬಿ. ಪಾಟೀಲ್, ಎಚ್‌.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಅರವಿಂದ ಬೆಲ್ಲದ್, ಶ್ರೀನಿವಾಸ ಮಾನೆ, ಸಲೀಮ್ ಅಹ್ಮದ್, ಸಿ.ಎಮ್. ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 

ಇದನ್ನೂ ಓದಿ-ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಹುಬ್ಬಳ್ಳಿಯ ಭಕ್ತರು ಫಕೀರ ಸಿದ್ದರಾಮ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಮೂರು ಕೆಜಿ ಬಂಗಾರವನ್ನು ಕಾಣಿಕೆ ನೀಡಿದ್ರು.‌ಇನ್ನು ಇದೇ ವೇಳೆ ಇಂಗ್ಲಿಷ್ ಹಾಗೂ ‌ಕನ್ನಡ ಜೀವನ‌ ದರ್ಶನ ಗ್ರಂಥ‌ ಬಿಡುಗಡೆ ‌ಮಾಡಲಾಯ್ತು.ಇನ್ನು‌ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ‌ಪಕ್ಷಾತೀತವಾಗಿ ರಾಜಕೀಯ‌ ನಾಯಕರು ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಮಠದ ಸೇವಾ ಕಾರ್ಯವನ್ನು ಕೊಂಡಾಡಿದ್ರು.

ಒಟ್ಟಾರೆ  ನೆಹರು ಮೈದಾನ ವಿಶೇಷ ತುಲಾಭಾರಕ್ಕೆ ಸಾಕ್ಷಿಯಾಯ್ತು.ಇನ್ನು‌ ಶಿರಹಟ್ಟಿ ಮಠದ ಅಮೃತ ಮಹತ್ಸೋವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ  5555 ಕೆಜಿ ನಾಣ್ಯಗಳ ತುಲಾಭಾರ ಕಣ್ತುಂಬಿಕೊಂಡರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News