ಪ್ರಧಾನಿ ಮೋದಿ & ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಬಿಎಸ್‍ವೈ ಹೆಸರು ಮರೆತ ಬೊಮ್ಮಾಯಿ

CM Basavaraj Bommai: ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿರುವ ಬಸವರಾಜ್ ಬೊಮ್ಮಾಯಿಯವರು ತಾವು ಸಿಎಂ ಆದ ವಿಚಾರವನ್ನು ಬಿಚ್ಚಿಟ್ಟರು.

Written by - Puttaraj K Alur | Last Updated : Feb 9, 2023, 06:28 PM IST
  • ಸಿಎಂ ಆದ ವಿಚಾರವನ್ನು ಬಿಚ್ಚಿಟ್ಟ ಬಸವರಾಜ್ ಬೊಮ್ಮಾಯಿ
  • ಪ್ರಧಾನಿ ಮೋದಿ ಹಾಗೂ ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ
  • ಬಿ.ಎಸ್.ಯಡಿಯೂರಪ್ಪ ಹೆಸರು ಹೇಳಲು ಮರೆತ ಸಿಎಂ ಬೊಮ್ಮಾಯಿ
ಪ್ರಧಾನಿ ಮೋದಿ & ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ: ಬಿಎಸ್‍ವೈ ಹೆಸರು ಮರೆತ ಬೊಮ್ಮಾಯಿ title=
ಸಿಎಂ ಬಸವರಾಜ್ ಬೊಮ್ಮಾಯಿ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಾವು ಸಿಎಂ ಆದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಯಲ್ಲಿ  ಗುರುವಾರ ಮಾತನಾಡಿದ ಅವರು, ‘ನಾನೇನು ಬಯಸಿ ಬಯಸಿ ಸಿಎಂ ಆದವನಲ್ಲ. ಪ್ರಧಾನಿ ಮೋದಿ ಹಾಗೂ ಜನರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ’ ಎಂದು ಹೇಳಿದರು.

ಸಿಎಂ ಆದ ವಿಚಾರ ಬಿಚ್ಚಿಟ್ಟ ಬೊಮ್ಮಾಯಿಯವರು ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಹೆಸರು ಹೇಳಲು ಮರೆತರು. ‘ನಿಮ್ಮ ಆಶೀರ್ವಾದ ವ್ಯರ್ಥವಾಗಲು ಬಿಡುವುದಿಲ್ಲ. ನನ್ನ ಒಂದೇ ಒಂದು ಗುರಿ ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದು. ಮೀಸಲಾತಿ ನನ್ನ ಅವಧಿಯಲ್ಲಿ ಆಗಿದ್ದು ನನ್ನ ಸೌಭಾಗ್ಯ’ ಎಂದು ಇದೇ ವೇಳೆ ಅವರು ಹೇಳಿದರು.

ಇದನ್ನೂ ಓದಿ: Yadugiri Yathiraj Mutt : ಯದುಗಿರಿ ಯತಿರಾಜ ಮಠದ ಸ್ವಾಮೀಜಿಗಳಿಗೆ 'ವೈ ಕ್ಯಾಟಗಿರಿ' ಭದ್ರತೆ!

ಇದೇ ವೇಳೆ ವಾಲ್ಮೀಕಿ ಸ್ವಾಮೀಜಿಯ ಕ್ಷಮೆ ಕೋರಿದ ಸಿಎಂ ಬೊಮ್ಮಾಯಿ, ಮೀಸಲಾತಿಗಾಗಿ 257 ದಿನ ಪ್ರಸನ್ನಾನಂದ ಶ್ರೀ ಧರಣಿ ಕುಳಿತರು. ಈ ಮೂಲಕ ಅವರಿಗೆ ತೊಂದರೆ ಕೊಟ್ಟಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಮುಂಬರುವ ಎಲ್ಲಾ ನೇಮಕಾತಿ, ಪ್ರಮೋಶನ್ ಹೊಸ ಮೀಸಲಾತಿಯಡಿ ನಡೆಯುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ ಸಿಎಂ ಬೊಮ್ಮಾಯಿ, 9th ಶೆಡ್ಯೂಲ್ಡ್ ಬಗ್ಗೆ ಮಾತಾಡ್ತಿರಾ? ಮೊದಲೇ ನೀವು ಮೀಸಲಾತಿ ಘೋಷಣೆ ಮಾಡಿದ್ರೆ ಇವತ್ತು ನಮಗೆ 9th ಶೆಡ್ಯೂಲ್ಡ್ ಮಾಡಲು ಅನುಕೂಲವಾಗುತ್ತಿತ್ತು. ಈಗಾಗಲೇ ನಾವು ಮೊದಲ ಹೆಜ್ಜೆ ಇಟ್ಟಿದ್ದೆವೆ, 9th ಶೆಡ್ಯೂಲ್ 2ನೇ ಹೆಜ್ಜೆ ಇಡುತ್ತೇವೆ’ ಎಂದು ಹೇಳಿದರು.

ಇದನ್ನೂ ಓದಿ: ಬೈಕ್ ಕಳ್ಳತನದ ದೂರು ದಾಖಲಿಸಿಕೊಳ್ಳು ಪೊಲೀಸರ ಹಿಂದೇಟು : ಕಮಿಷನರ್ ಎಚ್ಚರಿಕೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News