ಬೆಳಗಾವಿ ಅಧಿವೇಶನದ ಖರ್ಚು ಕೇಳಿದರೆ ಬೆಚ್ಚಿ ಬೀಳ್ತಿರ!

ಸ್ಪೀಕರ್ ಕಚೇರಿಯಿಂದ ಮುಖ್ಯಮಂತ್ರಿಗೆ 30 ಕೋಟಿ ರೂ. ಖರ್ಚು-ವೆಚ್ಚದ ಕಡತ ರವಾನೆಯಾಗಿದೆ.

Last Updated : Nov 24, 2017, 05:43 PM IST
ಬೆಳಗಾವಿ ಅಧಿವೇಶನದ ಖರ್ಚು ಕೇಳಿದರೆ ಬೆಚ್ಚಿ ಬೀಳ್ತಿರ! title=

ಬೆಳಗಾವಿ: ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನಕ್ಕಾಗಿ ಒಟ್ಟಾರೆ ಖರ್ಚು-ವೆಚ್ಚದ ಲೆಕ್ಕದ ಕಡತವನ್ನು ವಿಧಾನ ಸೌಧದ ಸಚಿವಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದೆ. ಸಚಿವಾಲಯದ ಒಟ್ಟು ಖರ್ಚಿನ ಲೆಕ್ಕ ನೋಡಿದ ಸಿಎಂ ಹೌಹಾರಿದ್ದಾರೆ. ಅಧಿವೇಶನದ ಖರ್ಚು ಕೇಳಿದರೆ ನೀವು ಬೆಚ್ಚಿ ಬೀಳುತ್ತಿರ! ಹಾಗಾದರೆ ಅಧಿವೇಶನಕ್ಕೆ ತಗುಲಿದ ವೆಚ್ಚ ಎಷ್ಟಿರ ಬಹುದು? ಸ್ಪೀಕರ್ ಕಚೇರಿಯಿಂದ ಮುಖ್ಯಮಂತ್ರಿಗೆ 30 ಕೋಟಿ ರೂ. ಖರ್ಚು-ವೆಚ್ಚದ ಕಡತ ರವಾನೆಯಾಗಿದೆ.
 
ಹೌದು, ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನದ ಖರ್ಚು-ವೆಚ್ಚಕ್ಕಾಗಿ 30 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸುವಂತೆ ವಿಧಾನ ಸೌಧದ ಸಚಿವಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಡತವನ್ನು ರವಾನೆ ಮಾಡಿದೆ. ಸಚಿವಾಲಯ 30 ಕೋಟಿ ಖರ್ಚನ್ನು ನೋಡಿ ದಂಗಾದ ಸಿ.ಎಂ ಸಿದ್ದರಾಮಯ್ಯ ಕಳೆದ ಬಾರಿ ಅಧಿವೇಶನಕ್ಕೆ 18 ಕೋಟಿ 75 ಲಕ್ಷ ಖರ್ಚಾಗಿತ್ತು, ಈ ಬಾರಿ ಅದೇಗೆ ಒಂದಕ್ಕೆರಡು ಖರ್ಚಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ನಂತರ ಊಟಕ್ಕೆಲ್ಲಾ ಎಷ್ಟಾಯಿತು ಎಂಬ ಸಿಎಂ ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು ಒಂದು ಊಟಕ್ಕೆ 475 ರೂ ತಗುಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ 30 ಕೋಟಿಯಲ್ಲಿ 5 ಕೋಟಿ ಜಿ ಎಸ್ ಟಿ ನಮೂದಿಸಲಾಗಿದೆ. ಈ ಬಗ್ಗೆ ಕುಪಿತರಾದ ಸಿಎಂ ನಿರ್ದಿಷ್ಟವಾಗಿ ಇಂತದ್ದಕ್ಕೆ, ಇಂತಿಷ್ಟು ಹಣ, ಇಂತಿಷ್ಟು ಜಿ ಎಸ್ ಟಿ ಎಂದು ಲೆಕ್ಕ ಬೇಕು ಎಂದು ಕೇಳಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕ ತೋರಿಸುವ ಮೊದಲು ಸಹಿ ಹಾಕುವುದಿಲ್ಲ ಎಂದು ನಿರಾಕರಿಸಿದ್ದಾರೆ.

Trending News