Covid-19 New Guidelines: ಕೋವಿಡ್ -19 ಮಾರ್ಗಸೂಚಿಯಲ್ಲಿ 'ಯು ಟರ್ನ್' ಹೊಡೆದ ರಾಜ್ಯ ಸರ್ಕಾರ!

ಜಿಮ್‌ ಗಳಿಗೆ ಕೋವಿಡ್ -19 ಮಾರ್ಗಸೂಚಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.

Last Updated : Apr 4, 2021, 07:49 PM IST
  • ಜಿಮ್‌ ಗಳಿಗೆ ಕೋವಿಡ್ -19 ಮಾರ್ಗಸೂಚಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.
  • ಜಿಮ್‌ ಗಳಲ್ಲಿ ಯಾವುದೇ ಕಾರಣಕ್ಕೂ 50% ಸಾಮರ್ಥ್ಯ
  • ಕನ್ನಡ ಚಲನಚಿತ್ರೋದ್ಯಮದ ಕೋರಿಕೆಯ ಮೇರೆಗೆ ಚಿತ್ರಮಂದಿರಗಳಲ್ಲಿ ಆಸನ ಸಾಮರ್ಥ್ಯವನ್ನು 50% ಕ್ಕೆ ನಿಗದಿಪಡಿಸುವುದಾಗಿ ಸರ್ಕಾರ ನಿನ್ನೆ ಆದೇಶ ಪ್ರಕಟಿಸಿದೆ.
Covid-19 New Guidelines: ಕೋವಿಡ್ -19 ಮಾರ್ಗಸೂಚಿಯಲ್ಲಿ 'ಯು ಟರ್ನ್' ಹೊಡೆದ ರಾಜ್ಯ ಸರ್ಕಾರ! title=

ಬೆಂಗಳೂರು: ಜಿಮ್ ಗೆ ಹೋಗುವ ಜನರಿಗೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯ್ದಲ್ಲಿ ಇಂದು 4,553 ಹೊಸ ಕೋವಿಡ್ -19 ಪ್ರಕರಣಗಳು ಕಂಡು ಬಂದಿದ್ದು, 2060 ಜನರನ್ನ ಡಿಸ್ ಚಾರ್ಜ್ ಮಾಡಲಾಗಿದೆ. 15 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ನಗರವು ಅತೀ ಹೆಚ್ಚು ಕೊರೋನಾ ಪೀಡಿತ ಜಿಲ್ಲೆಯಾಗಿದೆ. 

ಜಿಮ್‌ ಗಳಿಗೆ ಕೋವಿಡ್ -19(Covid-19) ಮಾರ್ಗಸೂಚಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಜಿಮ್‌ ಗಳಲ್ಲಿ ಯಾವುದೇ ಕಾರಣಕ್ಕೂ 50% ಸಾಮರ್ಥ್ಯವನ್ನು ಮೀರಬಾರದು, ಕಟ್ಟುನಿಟ್ಟಾದ ಕೋವಿಡ್ ಮಾರ್ಗಸೂಚಿಗಳನ್ನ ಪಾಲಿಸಲೇಬೇಕು. ಪ್ರತಿ ಉಪಕರಣಗಳ ಬಳಕೆಯ ನಂತ್ರ ಅವುಗಳನ್ನ ಸ್ವಚ್ಛಗೊಳಿಸಬೇಕು. ಒಂದು ವೇಳೆ ಯಾವುದೇ ನಿಯಮ ಉಲ್ಲಂಘನೆಯಾದರೆ ಇದ್ದರೆ ,ಕೋವಿಡ್ ಮುಗಿಯುವವರೆಗೆ ಜಿಮ್ ಮುಚ್ಚಬೇಕಾಗುತ್ತದೆ ಎಂದು ತಿಳಿಸಿದೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಲು ಜಿಮ್‌ಗಳೇ ಕರಣ ಎಂದು ಹಿಂದೆ ಸರ್ಕಾರವೆ ಹೇಳಿತ್ತು. 

ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ

ರಾಜ್ಯ ಸರ್ಕಾರ ಜಿಮ್(Gyms) ಅಲ್ಲದೆ  ಸಿನೆಮಾ ಥೇಟರ್ ಗಳಲ್ಲಿ  ಶೇಕಡಾ 50 ರಷ್ಟು ಆಸನ ಸಾಮರ್ಥ್ಯದ ಬಗ್ಗೆ ಕೂಡ ತನ್ನ ಆದೇಶದ ಸೂಚನೆಯನ್ನು ವಿಸ್ತರಿಸಿದೆ. ಈ ನಿಯಮವು  ಏಪ್ರಿಲ್ 7 ವರೆಗೆ ಅನ್ವಯವಾಗಲಿದೆ ಎಂದು ಹೇಳಿದೆ. 

Covid-19: ಚಿಕ್ಕಮಗಳೂರಿನಲ್ಲಿ ಒಂದೇ ಶಾಲೆಯ 26 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

ಕನ್ನಡ ಚಲನಚಿತ್ರೋದ್ಯಮದ ಕೋರಿಕೆಯ ಮೇರೆಗೆ ಚಿತ್ರಮಂದಿರ(Cinema Halls)ಗಳಲ್ಲಿ ಆಸನ ಸಾಮರ್ಥ್ಯವನ್ನು 50% ಕ್ಕೆ ನಿಗದಿಪಡಿಸುವುದಾಗಿ ಸರ್ಕಾರ ನಿನ್ನೆ ಆದೇಶ ಪ್ರಕಟಿಸಿದೆ. 

ಕೊರೊನಾವೈರಸ್(Coronavirus) ಸೋಂಕಿನ ಹೆಚ್ಚಳಕ್ಕೆ ರಾಜ್ಯ ಸಾಕ್ಷಿಯಾಗುತ್ತಿರುವುದರಿಂದ ಸರ್ಕಾರ ಈ ಹಿಂದೆ ಹಲವಾರು ನಿರ್ಧಾರಗಳನ್ನು ಹೊರಡಿಸಿತ್ತು. 

Covid-19 New Guidelines: ರಾಜ್ಯ ಸರ್ಕಾರದಿಂದ ಹೊಸ ಕೊರೊನಾ ಮಾರ್ಗಸೂಚಿ: ಯಾವುದುಕೆಲ್ಲ ನಿರ್ಬಂಧ!

ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಲ್ಲಿ, ಸಿನೆಮಾ ಹಾಲ್‌ನಲ್ಲಿ ಆಸನಗಳನ್ನು ಗರಿಷ್ಠ 50% ರಷ್ಟು ಸೀಮಿತ ಎಂದು ಹೇಳಲಾಗಿತ್ತು. ಈ ಕುರಿತು ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸಿಎಂಗೆ ಸಿನೆಮಾ ಹಾಲ್‌ಗಳನ್ನು ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿತ್ತು. 

ಆನ್‌ಲೈನ್ ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ಈಗ, ಈ ನಿರ್ಬಂಧವನ್ನು ಏಪ್ರಿಲ್ 7 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಆದೇಶದಲ್ಲಿ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News