ಆ್ಯಂಬಿಡೆಂಟ್​ ಪ್ರಕರಣ: ಅಲಿಖಾನ್, ಜನಾರ್ಧನ ರೆಡ್ಡಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಜನಾರ್ಧನ ರೆಡ್ಡಿ ಮತ್ತು ಅಲಿಖಾನ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. 

Updated: Dec 5, 2018 , 07:02 PM IST
ಆ್ಯಂಬಿಡೆಂಟ್​ ಪ್ರಕರಣ: ಅಲಿಖಾನ್, ಜನಾರ್ಧನ ರೆಡ್ಡಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು: ಆ್ಯಂಬಿಡೆಂಟ್​ ವಂಚನೆ ಪ್ರಕರಣದ ಆರೋಪಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಜನಾರ್ಧನ ರೆಡ್ಡಿ ಮತ್ತು ಅಲಿಖಾನ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಸಿಸಿಬಿ ಪೊಲೀಸರ ತನಿಖೆಗೆ ಸಹಕಾರ ನೀಡಬೇಕು, ಯಾವುದೇ ಕಾರಣಕ್ಕೂ ಸಾಕ್ಷಿ ನಾಶ ಮಾಡಬಾರದು, ಅಲ್ಲದೇ ಸಾಕ್ಷಿಯ ಮೇಲೆ ಪರಿಣಾಮ ಬೀರುವ ಕೆಲಸ ಮಾಡಬಾರದು ಹಾಗೂ 1 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 

ಆ್ಯಂಬಿಡೆಂಟ್ ತನ್ನ ಗ್ರಾಹಕರಿಗೆ ವಂಚನೆ ಪ್ರಕರಣದಲ್ಲಿ ರೆಡ್ಡಿ ಗ್ಯಾಂಗ್ ಮಾಲೀಕನ ಜೊತೆ ಡೀಲ್ ಮಾಡಿದ ಆರೋಪ ಅಲಿಖಾನ್​ ಮೇಲಿತ್ತು. ನ್ಯಾಯಂಗ ಬಂಧನಕ್ಕೆ ಒಳಗಾಗಿದ್ದ ಅಲಿಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಈ ಹಿನ್ನೆಲೆಯಲ್ಲಿ ಅಲಿಖಾನ್ ಒಂದನೇ ಎಸಿಎಂಎಂ ಕೋರ್ಟ್​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಪ್ರಕರಣದ ಸಂಪೂರ್ಣ ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಾಲಯ, ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.