ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌, ಬಿಜೆಪಿ ಭಯ ಶುರುವಾಗಿದೆ..!

ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ ಕಾಂಗ್ರೆಸ್‌ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ? ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್ ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

Written by - Krishna N K | Last Updated : Oct 20, 2023, 06:00 PM IST
  • ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌-ಬಿಜೆಪಿ ಫೋಬಿಯಾ ಶುರು
  • ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ
  • ಕಾಂಗ್ರೆಸ್‌ ವಿರುದ್ದ ಟ್ವಿಟ್‌ ಅಸ್ತ್ರ ಪ್ರಯೋಗಿಸಿದ ಜೆಡಿಎಸ್‌
ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌, ಬಿಜೆಪಿ ಭಯ ಶುರುವಾಗಿದೆ..! title=

ಬೆಂಗಳೂರು : ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್‌ - ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ ಎಂದು ರಾಜ್ಯ ಜೆಡಿಎಸ್‌ ಪಕ್ಷ ವ್ಯಂಗ್ಯವಾಡಿದೆ.

ಈ ಕುರಿತು ಟ್ಟೀಟ್‌ ಮಾಡಿರುವ ಜೆಡಿಎಸ್‌, ಜಿನ್ನಾ ಜೀನ್ಸಿನ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜೆಡಿಎಸ್‌ - ಬಿಜೆಪಿ ಫೋಬಿಯಾ ಶುರುವಾಗಿದೆ. ಅದಕ್ಕೆ ಹೊಸ ಟೂಲ್ ಕಿಟ್ ಗಳ ಆವಿಷ್ಕಾರದಲ್ಲಿ ತೊಡಗಿದೆ ತುಷ್ಟೀಕರಣ ಮಾಡುತ್ತಲೇ ಕಾಶ್ಮೀರಕ್ಕೆ ಮರಣಶಾಸನ ಬರೆದಿದ್ದ ಹೇಯ ಪಕ್ಷವು ಈಗ ಆತ್ಮಗೌರವ ಎಂದು ಹಲುಬುತ್ತಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್, ನೇತಾಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ.ನರಂಹರಾವ್ ಸೇರಿ ಅನೇಕ ಮಹಾಪುರುಷರ ಕೀರ್ತಿಗೆ ಗ್ರಹಣ ಹಿಡಿಸಿ ಆತ್ಮರತಿ ಮಾಡಿಕೊಂಡ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಅಂತ್ಯ ಸಂಸ್ಕಾರ ಆಗಲಿದೆ.

ಇದನ್ನೂ ಓದಿ: ನಾಡಿನ ಹಿತರಕ್ಷಣೆಗಾಗಿ ಹೋರಾಡಿದ್ದ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸಿಎಂ ಕ್ರಮ

ಅಂಗಿ ಹರಿದುಕೊಂಡು, ರಾತ್ರಿ ವೇಳೆ ತೂರಾಡಿಕೊಂಡು ಯಾರು ಓಡಾಡುತ್ತಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ತೋರಿಸಿವೆ. ಕೆಲ ದಿನ ಕಾಯಿರಿ, ಅಂಗಿ ಹರಿದುಕೊಳ್ಳುವ ಸ್ಥಿತಿ ಯಾರಿಗೆ ಕಾದಿದೆಯೋ ನೋಡೋಣ. 135 ಶಾಸಕರಿದ್ದಾರೆ ಎಂದು ಬೀಗಿದ್ದೇ ಬಂತು. ಈಗ ಒಂದು ಪಾರ್ಟಿ, ಹತ್ತಾರು ಬಣ ಎನ್ನುವ  ಕಾಂಗ್ರೆಸ್ ನ ಬುಡವೇ ಬಿದ್ದುಹೋಗುವ ಪರಿಸ್ಥಿತಿ ಸೃಷ್ಟಿ ಆಗುತ್ತಿದೆ. ಹತಾಶೆ, ಮತಿಭ್ರಮಣೆ ಯಾರಿಗೆ..? ಅರ್ಥವಾಗದಷ್ಟು ಅಜ್ಞಾನವೇ ನಿಮಗೆ?

ಜಾತ್ಯತೀತ ಎನ್ನುತ್ತ ಒಕ್ಕಲಿಗರನ್ನು ಎತ್ತಿಕಟ್ಟುವ ನೀಚ ಪ್ರಯತ್ನಕ್ಕೂ ಕೈ ಹಾಕಿದೆ ಕಾಂಗ್ರೆಸ್. ಒಕ್ಕಲಿಗರು ಹೀನ ಸಂಸ್ಕೃತಿಯುಳ್ಳವರು, ಸಂಸ್ಕೃತಿಹೀನರು ಎನ್ನುವ ಕೊಳಕು ಹೇಳಿಕೆ ಹಿಂದೆ ಇದೇ ಕಾಂಗ್ರೆಸ್ಸಿನ ಟೂಲ್ ಕಿಟ್  ಷಡ್ಯಂತ್ರ ಅಡಗಿದೆ. ಆ ಭಾಗವಾಗಿ ಒಕ್ಕಲಿಗರ ಕುಲದೈವ ಶ್ರೀ ಭೈರವೇಶ್ವರ ದೇವರನ್ನು, ಪರಮಪೂಜ್ಯ ಶ್ರೀಗಳನ್ನು ಎಳೆದು ತಂದಿರುವುದು ಅಕ್ಷಮ್ಯ ಹಾಗೂ ಒಕ್ಕಲಿಗರನ್ನು ಕೆಣಕುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ.

ಇದನ್ನೂ ಓದಿ: ಕೈ ಪಕ್ಷವನ್ನು ಕೊಳಕುಗ್ರೆಸ್ ಹಾಗೂ ಸ್ಕ್ಯಾಂಗ್ರೆಸ್ ಎಂದು ಜರೆದ ಜೆಡಿಎಸ್

ಅಲ್ಪಸಂಖ್ಯಾತರನ್ನು ತನ್ನ ರಾಜಕೀಯ ಲಾಭಕ್ಕಾಗಿ ಎತ್ತಿಕಟ್ಟುತ್ತಾ ಬಹುಸಂಖ್ಯಾತರ ವಿರುದ್ಧ ಛೂ ಬಿಡುತ್ತಿರುವುದು ಕೂಡ ಕಾಂಗ್ರೆಸ್ ಕಿಡಿಗೇಡಿ ಟೂಲ್ ಕಿಟ್ ನ ಒಳಸಂಚು. ಅವರನ್ನು ತನ್ನ ಸ್ವಾರ್ಥಕ್ಕಾಗಿ ಸಮಾಜದಿಂದಲೇ ಪ್ರತ್ಯೇಕಿಸುವ ಕೀಳು ರಾಜಕೀಯ ಮಾಡುತ್ತಿದೆ. ಆರೋಗ್ಯಕರ ಸಮಾಜಕ್ಕೆ ಕೊಳಕುಮಂಡಲದಂತೆ ತನ್ನ ಕೆನ್ನಾಲಿಗೆ ಮೂಲಕ ವಿಷಪ್ರಾಶನ ಮಾಡುತ್ತಿದೆ.

ಕುಮಾರಸ್ವಾಮಿ ಅವರು ಟೋಪಿ ಧರಿಸಿದರು, ಮಸೀದಿಗೆ ಹೋದರು, ಬಿರಿಯಾನಿ ತಿಂದರು. ಇದೇನೋ ಸರಿ. ಆದರೆ, ತುರ್ತು ಪರಿಸ್ಥಿತಿ ವೇಳೆ ಸಂಜಯಗಾಂಧಿ ಮಾಡಿದ್ದನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆಯೇ? ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂ ಲೀಗ್ ಅನ್ನು ಎತ್ತಿಕಟ್ಟಿ ದೇಶ ಒಡೆದ ದೇಶದ್ರೋಹವನ್ನು ಅವರು ಎಸಗಿದ್ದಾರೆಯೇ?  ಹಾಗಾದರೆ, ನಿಮ್ಮ ಅರ್ಥದಲ್ಲಿ ಶಿರದ ಮೇಲೆ ಮುಸ್ಲಿಮರು ಧರಿಸುವ ಟೋಪಿ ಮಕ್ಮಲ್ ಟೋಪಿಯೇ? ಮುಸ್ಲಿಮರ ಟೋಪಿಗೂ ಅಪಮಾನ ಮಾಡಿದೆ ಕಾಂಗ್ರೆಸ್!!

ಇದನ್ನೂ ಓದಿ: ಅರ್ಹ ನಾಗರಿಕರಿಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗಬೇಕು: ಸಚಿವ ಕೆ.ಎಚ್ ಮುನಿಯಪ್ಪ

ತಿಹಾರ್ ಜೈಲುಹಕ್ಕಿಯನ್ನೇ ಅಧ್ಯಕ್ಷ ಎಂದು ಒಪ್ಪಿಕೊಂಡಿರುವ ಗತಿಗೆಟ್ಟ, ನೀತಿಗೆಟ್ಟ ಕಾಂಗ್ರೆಸ್, ಮೈತ್ರಿ ಬಗ್ಗೆ ಭಸ್ಮಾಸುರ ಕಥೆ ಹೇಳುತ್ತಿದೆ. ಇವತ್ತು ಅಕ್ಕಪಕ್ಕ ಕೂರಿಸಿಕೊಂಡಿರುವ ಮೈತ್ರಿಪಕ್ಷಗಳ ನಾಯಕರಿಗೆ ಕೊಟ್ಟಿದ್ದ ಕಿರುಕುಳ ಜಗದ್ವಿಖ್ಯಾತಿ. ಕರುಣಾನಿಧಿ ಅವರ ಸರಕಾರವನ್ನೇ ವಜಾ ಮಾಡಿ, ಈಗ ಅವರ ಮಗ ಸ್ಟಾಲಿನ್ ಜತೆಯೂ ಲಜ್ಜೆ ಇಲ್ಲದೆ ಅಡ್ಜಸ್ಟ್ ಮಾಡಿಕೊಂಡು, ಅವರಿಗೆ ಕಾವೇರಿ ಹಿತವನ್ನು ಅಡವಿಟ್ಟ ಕಾಂಗ್ರೆಸ್ ಬಗ್ಗೆ ಬೀದಿ ಬೀದಿಯಲ್ಲಿ ಜನ ಮಾತನಾಡುತ್ತಿದ್ದಾರೆ.

ನಿಯತ್ತಿನ ಬಗ್ಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಇರುವ ವಿರುದ್ಧ ಪದಗಳಲ್ಲಿ ನಿಯತ್ತು ಕೂಡ ಒಂದು. ನೀತಿ, ನಿಯತ್ತು ಎಂದರೆ ಅದಕ್ಕೆ ಗಾವುದ ದೂರ. ಚರಿತ್ರೆ ಬಿಚ್ಚಿಟ್ಟರೆ ಕಾಂಗ್ರೆಸ್ ಮುಖವೇ ಕೊಳಕುಮಂಡಲದಂತೆ ಮುದುಡಿಕೊಳ್ಳುತ್ತಿದೆ. ಎಷ್ಟೋ ಪ್ರಾದೇಶಿಕ ಪಕ್ಷಗಳನ್ನು ಹಸ್ತಪಕ್ಷ ಆಪೋಶನ ತೆಗುಕೊಂಡಿದ್ದೇ ಒಂದು ಅಮರಚಿತ್ರ ಕಥೆ. ಪರಕೀಯ ವಿಚಾರಧಾರೆ ಮೂಲಕ ಈಗಲೂ ಬ್ರಿಟಿಷ್ ಗುಲಾಮಿ ಮನಃಸ್ಥಿತಿಯಲ್ಲಿದೆ ಕಾಂಗ್ರೆಸ್. ದುರಂತಕ್ಕೆ ಈಗ ಇನ್ನೊಬ್ಬರ ಆತ್ಮಸಾಕ್ಷಿ ಬಗ್ಗೆ ಅಲವತ್ತುಕೊಳ್ಳುತ್ತಿದೆ. ಕಾಲಕ್ಕೆ_ಕಾಂಗ್ರೆಸ್ ಎಂದು ವ್ಯಂಗ್ಯವಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News