ಕನ್ನಡ ರಾಜ್ಯೋತ್ಸವ: ನಾಗರಿಕರ ಮನೆ ಬಾಗಿಲಿಗೇ ಸರ್ಕಾರದ ಸೇವೆಗಳು; `ಜನಸೇವಕ' ಯೋಜನೆಗೆ ಇಂದು ಸಿಎಂ ಚಾಲನೆ

ಕನ್ನಡ ರಾಜ್ಯೋತ್ಸವ: ಇಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಹತ್ವಾಕಾಂಕ್ಷೆಯ  ಮನೆ ಬಾಗಿಲಿಗೆ ಸರ್ಕಾರದ ಸೇವೆಗಳ `ಜನಸೇವಕ' ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.  ಕರ್ನಾಟಕದ ನಾಗರಿಕರ ಜೀವನವನ್ನು ಸುಲಭಗೊಳಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.  

Written by - Yashaswini V | Last Updated : Nov 1, 2021, 08:07 AM IST
  • ಜನಸೇವಕ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವಾಗಿದೆ
  • ಈ ಯೋಜನೆಯು 11 ಇಲಾಖೆಗಳನ್ನು ಒಳಗೊಂಡ 53 ಸೇವೆಗಳಿಗೆ ಸಂಬಂಧಿಸಿದೆ
  • ಜನಸೇವಕ ಯೋಜನೆಯಡಿ ನಾಗರೀಕರು ತಮ್ಮ ಕುಂದುಕೊರತೆಗಳನ್ನು ನಿವಾರಿಸಲು ಪದೇ ಪದೇ ಸರ್ಕಾರಿ ಕಚೇರಿಗಳನ್ನು ಸುತ್ತುವ ಅಗತ್ಯವಿಲ್ಲ
ಕನ್ನಡ ರಾಜ್ಯೋತ್ಸವ: ನಾಗರಿಕರ ಮನೆ ಬಾಗಿಲಿಗೇ ಸರ್ಕಾರದ ಸೇವೆಗಳು; `ಜನಸೇವಕ' ಯೋಜನೆಗೆ ಇಂದು ಸಿಎಂ ಚಾಲನೆ title=
Janasevaka Yojana will launch today

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರವು ಕನ್ನಡ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.  ಇಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಹತ್ವಾಕಾಂಕ್ಷೆಯ  ಮನೆ ಬಾಗಿಲಿಗೆ ಸರ್ಕಾರದ ಸೇವೆಗಳ `ಜನಸೇವಕ' ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. 

ಇಂದು ಬೆಳಿಗ್ಗೆ 11 ಗಂಟೆಗೆ ರಾಜ್ಯ ರಾಜಧಾನಿ ಬೆಂಗಳೂರು ನಗರದ 27 ವಿಧಾನಸಭಾ ಕ್ಷೇತ್ರಗಳ 198 ವಾರ್ಡ್ ಗಳಲ್ಲಿ ಜನಸೇವಕ (Janasevaka) ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕರ್ನಾಟಕದ ನಾಗರಿಕರ ಜೀವನವನ್ನು ಸುಲಭಗೊಳಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. 

ಇದನ್ನೂ ಓದಿ- ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ

ಏನಿದು ಜನಸೇವಕ ಯೋಜನೆ?
ಸಕಾಲ ಯೋಜನೆಯಡಿ ಜನಸೇವಕ ಎಂಬುದು ಸರಕಾರದ ಯೋಜನೆಗಳ ಸದುಪಯೋಗವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮವಾಗಿದೆ. ಈ ಯೋಜನೆಯು 11 ಇಲಾಖೆಗಳನ್ನು ಒಳಗೊಂಡ 53 ಸೇವೆಗಳಿಗೆ ಸಂಬಂಧಿಸಿದೆ. ಪಡಿತರ ಚೀಟಿಗಳು, ಹಿರಿಯ ನಾಗರಿಕರ ಗುರುತಿನ ಮತ್ತು ಆರೋಗ್ಯ ಕಾರ್ಡ್ ಹಲವಾರು ಸೇವೆಗಳ ಮನೆ ವಿತರಣೆ ಖಚಿತಪಡಿಸಿಕೊಳ್ಳಲು ಕೆಲವು ಪುರಸಭೆ ವಾರ್ಡ್ಗಳಲ್ಲಿ ಜನಸೇವಕ (Janasevaka) ಯೋಜನೆಯನ್ನು ಪ್ರಾರಂಭಿಸಲಿದೆ.

ಈ ಯೋಜನೆಯನ್ನು ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದ್ದು ಈ ಯೋಜನೆಯು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಬೆಂಗಳೂರಿನ ಪ್ರಯೋಗದ ಆಧಾರದ ಮೇಲೆ ಇದನ್ನು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಕ್ಕೆ ವಿಸ್ತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ- ಜವಾಹರ ನವೋದಯ ವಿದ್ಯಾಲಯದ 6 ಹಾಗೂ 9 ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಜನಸೇವಕ (Janasevaka) ಯೋಜನೆಯಲ್ಲಿ ಲಭ್ಯವಿರುವ ಸೇವೆಗಳು:
ಜನಸೇವಕ ಯೋಜನೆಯಡಿ ನಾಗರೀಕರು ತಮ್ಮ ಕುಂದುಕೊರತೆಗಳನ್ನು ನಿವಾರಿಸಲು ಪದೇ ಪದೇ ಸರ್ಕಾರಿ ಕಚೇರಿಗಳನ್ನು ಸುತ್ತುವ ಅಗತ್ಯವಿಲ್ಲ. ಬದಲಿಗೆ ಸರ್ಕಾರ ಒದಗಿಸಿರುವ ಸಹಾಯವಾಗಿ ಸಂಖ್ಯೆ 1902 ಗೆ ಕರೆ ಮಾಡುವ ಮೂಲಕ ಸರ್ಕಾರಿ ಯೋಜನೆಗೆ ಸಂಬಂಧಿಸಿದ ತಮ್ಮ ಯಾವುದೇ ಕುಂದು ಕೊರತೆಗಳ ಬಗ್ಗೆ ದೂರು ದಾಖಲಿಸಬಹುದು. 

ಜನಸೇವಕ ಯೋಜನೆಯಲ್ಲಿ ನಾಗರೀಕರಿಗೆ ಪಡಿತರ ಚೀಟಿ, ಆರೋಗ್ಯ ಕಾರ್ಡ್, ಆಧಾರ್ ಕಾರ್ಡ್,  ಹಿರಿಯ ನಾಗರಿಕರ ಕಾರ್ಡ್, ಬಿಬಿಎಂಪಿ ಖಾತಾ ಸೇವೆಗಳು, ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ, ಕಾರ್ಮಿಕ ಇಲಾಖೆ, ಆದಾಯ/ಜಾತಿ ಪ್ರಮಾಣ ಪತ್ರ, ವೃದ್ಯಾಪ್ಯ ವೇತನ, ವಿಧವಾ ವೇತನ ಸೇರಿದಂತೆ 50 ಕ್ಕೂ ಹೆಚ್ಚು ಸೇವೆಗಳು ಇರಲಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News