ಬೆಂಗಳೂರು: ಕನ್ನಡಿಗರೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೊಸಳೆ ಕಣ್ಣೀರಿನ ಗ್ಯಾರಂಟಿಗೆ ಬಲಿಯಾಗಬೇಡಿ! ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ರಾಷ್ಟ್ರ ವಿರೋಧಿ ಕಾಂಗ್ರೆಸ್ಸಿನ ನಿಲುವುಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಮ ಮಂದಿರಕ್ಕೆ ವಿರೋಧ, ಜಿ-20ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಗೆ ಹೊಟ್ಟೆ ಉರಿ, ಸರ್ಜಿಕಲ್ ಸ್ಟ್ರೈಕ್ಗೆ ಅವಮಾನ, ಸ್ವಚ್ಛ ಭಾರತಕ್ಕೆ ಅಪಹಾಸ್ಯ, ಗಂಗಾ ನದಿ ಸ್ವಚ್ಛತೆಗೆ ವ್ಯಂಗ್ಯ, ವಿಶ್ವ ನಾಯಕನ ಪಟ್ಟಕ್ಕೆ ಅಸಮಾಧಾನ, ಮೇಕ್ ಇನ್ ಇಂಡಿಯಾ ಮೇಲೆ ಅಪನಂಬಿಕೆ, ಡಿಜಿಟಲ್ ಇಂಡಿಯಾಕ್ಕೆ ಲೇವಡಿ ಮತ್ತು ಅರ್ಟಿಕಲ್ 370 ರದ್ದತಿಗೆ ಆಕ್ಷೇಪ. ದೇಶದ ಹಿತಾಸಕ್ತಿಗೆ ಪ್ರತಿಭಟನೆ ಹಾಗೂ ರಾಷ್ಟ್ರ ವಿರೋಧಿ ನಿಲುವುಗಳನ್ನೇ ಪ್ರತಿಪಾದಿಸುವ ಕಾಂಗ್ರೆಸ್, ಇಂದು ರಾಮ ಮಂದಿರವನ್ನು ತಿರಸ್ಕಾರ ಮಾಡುವ ಮೂಲಕ ನೈಜ ಮುಖವನ್ನು ಜಗತ್ತಿಗೆ ತೋರಿಸಿದೆ!’ ಎಂದು ಬಿಜೆಪಿ ಟೀಕಿಸಿದೆ.
ರಾಷ್ಟ್ರ ವಿರೋಧಿ ಕಾಂಗ್ರೆಸ್ಸಿನ ನಿಲುವುಗಳಿವು :
▪ ರಾಮ ಮಂದಿರಕ್ಕೆ ವಿರೋಧ
▪ ಜಿ-20 ಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಗೆ ಹೊಟ್ಟೆ ಉರಿ
▪ ಸರ್ಜಿಕಲ್ ಸ್ಟ್ರೈಕ್ಗೆ ಅವಮಾನ
▪ ಸ್ವಚ್ಛ ಭಾರತಕ್ಕೆ ಅಪಹಾಸ್ಯ
▪ ಗಂಗಾ ನದಿ ಸ್ವಚ್ಛತೆಗೆ ವ್ಯಂಗ್ಯ
▪ ವಿಶ್ವ ನಾಯಕನ ಪಟ್ಟಕ್ಕೆ ಅಸಮಾಧಾನ
▪ ಮೇಕ್ ಇನ್ ಇಂಡಿಯಾ ಮೇಲೆ…— BJP Karnataka (@BJP4Karnataka) January 12, 2024
ಇದನ್ನೂ ಓದಿ: ಜನವರಿ 31ರಿಂದ ಸಂಸತ್ ಬಜೆಟ್ ಅಧಿವೇಶನ; ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ
ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ!
ಕರ್ನಾಟಕದ ಅಧಿಕಾರ ಕಾಂಗ್ರೆಸ್ ಪಕ್ಷದ 'ಕೈ'ಗೆ ಸಿಗುತ್ತಿದ್ದಂತೆ ರಾಮ ರಾಜ್ಯ ತುಘಲಕ್ ರಾಜ್ಯವಾಗಿ ಬದಲಾಗಿದೆ! ಇದರ ಪರಿಣಾಮ ಅರಾಜಕತೆ ಸೃಷ್ಟಿಯಾಗಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮಹಿಳೆಯರ ಮಾನಭಂಗ, ಹಲ್ಲೆ, ಅತ್ಯಾಚಾರದಂತಹ ಪ್ರಕರಣಗಳು ಕಾಂಗ್ರೆಸ್ ಪಕ್ಷದದ ದುರಾಡಳಿತಕ್ಕೆ ಸಾಕ್ಷಿಯಾಗಿವೆ! ಎಂದು ಬಿಜೆಪಿ ಟೀಕಿಸಿದೆ.
ಪಿಎಫ್ಐ ಗೂಂಡಾಗಳು ದಲಿತರ ಮನೆ ಸುಟ್ಟು ಹಾಕಿದರೂ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟರೂ, ಯುವತಿ ಮೇಲೆ ಅತ್ಯಾಚಾರ ಮಾಡಿದರೂ, ಹಿಂದೂಗಳ ಕೊಲೆ ಮಾಡಿದರೂ, ಭರತ ಭೂಮಿಯಲ್ಲಿ ಹುಟ್ಟಿ ಬಾಂಬ್ ಸ್ಫೋಟಿಸಿದರೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವೋಟ್ ಬ್ಯಾಂಕ್ಗಾಗಿ ಅವರು ಅಮಾಯಕರು! ಇದೇ ಕರುನಾಡಿನ ದುರಂತ!’ವೆಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಕೇವಲ 20 ನಿಮಿಷಗಳಲ್ಲಿ ಕ್ರಮಿಸಬಹುದು 2 ಗಂಟೆಯ ಪ್ರಯಾಣ ದೂರ : ಇಂದಿನಿಂದಲೇ ತೆರೆದುಕೊಳ್ಳುವುದು Atal Setu
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.