ಕರ್ನಾಟಕ ರಾಜಕೀಯ ಬಿಕ್ಕಟ್ಟು: ಅತೃಪ್ತ ಶಾಸಕರ ಅನರ್ಹತೆಯಿಂದ ಲಾಭ ಯಾರಿಗೆ ?

ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಶ್ವಾಸ ಮತಯಾಚನೆಗೂ ಮೊದಲೇ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 14 ಬಂಡಾಯ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಈ ಅನರ್ಹತೆಯೊಂದಿಗೆ, 224 ಸದಸ್ಯರನ್ನು ಒಳಗೊಂಡಿರುವ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.

Last Updated : Jul 28, 2019, 04:07 PM IST
ಕರ್ನಾಟಕ ರಾಜಕೀಯ ಬಿಕ್ಕಟ್ಟು: ಅತೃಪ್ತ ಶಾಸಕರ ಅನರ್ಹತೆಯಿಂದ ಲಾಭ ಯಾರಿಗೆ ? title=
file photo

ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಶ್ವಾಸ ಮತಯಾಚನೆಗೂ ಮೊದಲೇ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 14 ಬಂಡಾಯ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಈ ಅನರ್ಹತೆಯೊಂದಿಗೆ, 224 ಸದಸ್ಯರನ್ನು ಒಳಗೊಂಡಿರುವ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.

ಇದರಿಂದಾಗಿ ಶುಕ್ರವಾರದಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಪಡಿಸಲು ಸುಲಭವಾಗಲಿದೆ ಎನ್ನಲಾಗಿದೆ. ಜುಲೈ 25 ರಂದು ಮೂವರ ಶಾಸಕರ ಅನರ್ಹತೆ ಹಾಗೂ ಇಂದಿನ 14 ಶಾಸಕರ ಅನರ್ಹತೆಯೊಂದಿಗೆ ಒಟ್ಟು17 ಶಾಸಕರು ಈಗ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಸಧ್ಯದ ಬಲಾಬಲ ಸ್ಪೀಕರ್ ಅವರನ್ನು ಒಳಗೊಂಡು 208 ಆಗಿರುತ್ತದೆ. ಈ ಹಿನ್ನಲೆಯಲ್ಲಿ ಬಹುಮತ ಸಾಬೀತುಪಡಿಸಲು ನೂತನ ಸರ್ಕಾರಕ್ಕೆ 113 ರ ಮ್ಯಾಜಿಕ್ ಸಂಖ್ಯೆ ಬದಲು 104 ಸದಸ್ಯರ ಅವಶ್ಯಕತೆ ಇದೆ. ಈಗಾಗಲೇ ಬಿಜೆಪಿ ಈ ಸಂಖ್ಯೆಯನ್ನು ಹೊಂದಿರುವದರಿಂದ ನಾಳೆ ಸುಲಭವಾಗಿ ವಿಶ್ವಾಸಯಾಚನೆ ಮಾಡಬಹುದಾಗಿದೆ.

ಇನ್ನು ಖಾಲಿ ಇರುವ ಸ್ಥಾನಗಳಿಗೆ ಉಪಚುನಾವಣೆ ನಡೆದಲ್ಲಿ, ಆಗ ಬಿಜೆಪಿ ಕನಿಷ್ಠ ಎಂಟು ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಆಗ ಅದು113 ಬಹುಮತದ ಸಂಖ್ಯೆಯನ್ನು ದಾಟಲಿದೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿಯವರ ವಿಶ್ವಾಸ ಮತ ಪರೀಕ್ಷೆ ವೇಳೆ ಸದನದಲ್ಲಿ ಗೈರು ಹಾಜರಾಗಿದ್ದ ಕಾಂಗ್ರೆಸ್ ನ ಬಂಡಾಯ ಶಾಸಕ ಬಿ,ನಾಗೇಂದ್ರ ಹಾಗೂ ಬಿಎಸ್ಪಿಯ ಎನ್.ಮಹೇಶ್ ಅವರು ಈಗ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಮತ್ತೆ ಗೈರಾಗಿ ಉಳಿದರೆ ಆಗ ಮ್ಯಾಜಿಕ್ ಸಂಖ್ಯೆ ಮತ್ತೆ ಎರಡಕ್ಕೆ ಕೆಳಗಿಳಿಯುತ್ತದೆ. ಸದ್ಯ ಸದನದಲ್ಲಿ ಬಿಜೆಪಿ 105 ಸದಸ್ಯರನ್ನು ಹೊಂದಿದ್ದು, ಓರ್ವ ಸ್ವತಂತ್ರ ಶಾಸಕನ ಬೆಂಬಲವನ್ನು ಹೊಂದಿದೆ. ಇದರಿಂದಾಗಿ ನಾಳೆ ವಿಶ್ವಾಸ ಮತಯಾಚನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸುಲಭವಾಗಿ ಪಾಸಾಗಲಿದ್ದಾರೆ ಎನ್ನಲಾಗಿದೆ.

ಭಾನುವಾರದಂದು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ 14 ಶಾಸಕರಲ್ಲಿ ಕಾಂಗ್ರೆಸ್ ಪರವಾಗಿ ಎಸ್.ಟಿ.ಸೋಮಶೇಖರ್, ಬಿ.ಸಿ ಪಾಟೀಲ್, ಭೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ರೋಶನ್ ಬೇಗ್ ,ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ಡಾ.ಕೆ.ಸುಧಾಕರ್, ಆನಂದ್ ಸಿಂಗ್, ಎಂ ಟಿ ಬಿ ನಾಗರಾಜ್, ಶ್ರೀಮಂತ್ ಪಾಟೀಲ್ ಅನರ್ಹಗೊಂಡಿದ್ದಾರೆ. ಜೆಡಿಎಸ್ ಪರವಾಗಿ ಅನರ್ಹಗೊಂಡ ಶಾಸಕರಲ್ಲಿ ಕೆ.ಸಿ.ನಾರಾಯಣಗೌಡ, ಕೆ ಗೋಪಾಲಯ್ಯ, ಎಚ್.ವಿಶ್ವನಾಥ್ ಸೇರಿದ್ದಾರೆ.

Trending News