ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ಮಂಚ್ ಸೋಮವಾರ ಕನಕಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ 114 ಅಡಿ ಎತ್ತರದ ಜೀಸಸ್ ಕ್ರಿಸ್ಟ್ ಪ್ರತಿಮೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಹಿಂದೂ ಸಂಘಟನೆಗಳ ವಿರೋಧ ಪ್ರದರ್ಶನದ ಹಿನ್ನೆಲೆ ನಗರದಲ್ಲಿ ಬಿಗುವಿನ ವಾತಾವರಣ ಮನೆಮಾಡಿದೆ. ಇದನ್ನು ಮನಗಂಡ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿ ಸುಮಾರು1000 ಪೋಲೀಸರನ್ನು ನಿಯೋಜಿಸಿದೆ.
ಕನಕಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಯೇಸು ಕ್ರಿಸ್ತನ ಪ್ರತಿಮೆಯ ಹಿನ್ನೆಲೆ ಬಿಜೆಪಿ-RSS ವಿರೋಧ ಪ್ರದರ್ಶನ ನಡೆಸುತ್ತಿದ್ದು, ನಗರದಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರು ಯೇಸು ಕ್ರಿಸ್ತನ ಈ ಪ್ರತಿಮೆ ನಿರ್ಮಾಣ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Karnataka: Rashtriya Swayamsevak Sangh, Vishva Hindu Parishad, & Hindu Jagaran Vedike protest against the construction of 114-ft tall Jesus Christ statue in Kanakapura. https://t.co/aND6y8wERt pic.twitter.com/WbTZXa5nKb
— ANI (@ANI) January 13, 2020
ಈ ಪ್ರತಿಭಟನೆಯ ಅಂಗವಾಗಿ BJP-RSS ಜಂಟಿಯಾಗಿ 'ಚಲೋ ಕನಕಪುರ'ಗೆ ಚಳುವಳಿ ಹಮ್ಮಿಕೊಂಡಿವೆ. BJPಯ ಈ ಪ್ರತಿಭಟನೆಯ ಹಿನ್ನೆಲೆ ಕನಕಪುರದಲ್ಲಿ ಸದ್ಯ ಕೂಡ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕನಕಪುರದ ಶಾಸಕ ಡಿ.ಕೆ ಶಿವಕುಮಾರ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 114 ಅಡಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ನಿರ್ಣಯ ತಮ್ಮದಲ್ಲ ಹಾಗೂ ಕ್ರೈಸ್ತ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ಈ ಮೂರ್ತಿಯನ್ನು ನಿರ್ಮಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ಓರ್ವ ಶಾಸಕನಾಗಿ ತಾವು ಅವರಿಗೆ ಸಹಾಯ ಒದಗಿಸುತ್ತಿರುವುದಾಗಿ ಹೇಳಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತದ ವತಿಯಿಂದ ಭೂಮಿ ನೀಡಲಾಗಿದ್ದು, ಎಲ್ಲ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಪೂರ್ಣಗೊಳಿಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.