ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh)ಅವರು ಇಂದು ಫಲಿತಾಂಶ ಬಿಡುಗಡೆ ಮಾಡಿದರು. ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಪಾಸ್ ಆಗಿದ್ದಾರೆ.
ಶೇ.99.9ರಷ್ಟು ಫಲಿತಾಂಶ
ಜುಲೈ 19 ಮತ್ತು 22ರಂದು ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ(SSLC Exam)ಯಲ್ಲಿ ಈ ಬಾರಿ ಶೇ.99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೊರೊನಾ ಸಾಂಕ್ರಾಮಿಕದ ಆತಂಕದ ಮಧ್ಯೆಯೂ ಈ ವರ್ಷ ಒಟ್ಟು 8,19,694 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದಿದ್ದರು. ಈ ಪೈಕಿ ಒಟ್ಟು 4,70,160 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,01,280 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ 1,28,931 ವಿದ್ಯಾರ್ಥಿಗಳು A+ ಗ್ರೇಡ್ ಪಡೆದರೆ, 2,50,317 ವಿದ್ಯಾರ್ಥಿಗಳು A ಗ್ರೇಡ್ ಗಳಿಸಿದ್ದಾರೆ. 2,87,694 ವಿದ್ಯಾರ್ಥಿಗಳು B ಗ್ರೇಡ್, 1,13,610 ವಿದ್ಯಾರ್ಥಿಗಳು C ಗ್ರೇಡ್ ಅನ್ನು ಪಡೆದುಕೊಂಡಿದ್ದಾರೆ. ಇದಲ್ಲದೆ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗಿದೆ ಅಂತಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಶೇ.9ರಷ್ಟು C ಗ್ರೇಡ್ ಪಡೆದಿರುವ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿದೆ.
625ಕ್ಕೆ 625 ಅಂಕ ಪಡೆದ 157 ವಿದ್ಯಾರ್ಥಿಗಳು
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 157 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ, ಇಬ್ಬರು ವಿದ್ಯಾರ್ಥಿಗಳು 625ಕ್ಕೆ 622 ಅಂಕ ಮತ್ತು449 ವಿದ್ಯಾರ್ಥಿಗಳು 625ಕ್ಕೆ 621 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಔಟ್ ಆಫ್ ಔಟ್ ಅಂಕ ಪಡೆದು ವಿದ್ಯಾರ್ಥಿಗಳ ಸಾಧನೆ
ಈ ಬಾರಿ ಅನೇಕ ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪೈಕಿ ಪ್ರಥಮ ಭಾಷೆಯಲ್ಲಿ 25,702 ವಿದ್ಯಾರ್ಥಿಗಳಿಗೆ 125ಕ್ಕೆ 125 ಅಂಕ, ದ್ವಿತೀಯ ಭಾಷೆಯಲ್ಲಿ 36,628 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ, ತೃತೀಯ ಭಾಷೆಯಲ್ಲಿ 36,776 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ,, ಗಣಿತ ವಿಷಯದಲ್ಲಿ 6321 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ, ವಿಜ್ಞಾನ ವಿಷಯದಲ್ಲಿ 3,649 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ9,367 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ ದೊರೆತಿದೆ.
ಈ ಬಾರಿ ವಿಭಿನ್ನವಾಗಿ ಪರೀಕ್ಷೆ ನಡೆಸಲಾಗಿತ್ತು
ಕೊರೊನಾ ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ವರ್ಷವಿಡೀ ಭೌತಿಕವಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಬಹುತೇಕ ಆನ್ಲೈನ್ ಮೂಲಕವೇ ಪಾಠ-ಪ್ರವಚನಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದು ಬೇಡವೆಂಬ ವಿರೋಧಗಳು ಕೇಳಿಬಂದಿದ್ದವು. ಅದಾಗ್ಯೂ ಜುಲೈ 19 ಮತ್ತು 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ(SSLC Exam) ನಡೆಸಲಾಗಿತ್ತು. ಆದರೆ ಈ ಬಾರಿಯ ಪರೀಕ್ಷೆ ಹಿಂದೆಂದಿಗಿಂತಲೂ ವಿಭಿನ್ನವಾಗಿತ್ತು. ಕೊರೊನಾ ಆತಂಕದ ಮಧ್ಯೆಯೂ ಜರುಗಿದ್ದ ಈ ಪರೀಕ್ಷೆಯಲ್ಲಿ ಶೇ.99.65ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ವರ್ಷ ಒಟ್ಟು 8,19,694 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಬಾರಿಯ ಪರೀಕ್ಷೆ ವಿಭಿನ್ನವಾಗಿತ್ತು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನು ಒಂದು ಪ್ರಶ್ನೆ ಪತ್ರಿಕೆಯಲ್ಲಿ ಹಾಗೂ ಭಾಷಾ ವಿಷಯಗಳನ್ನು ಒಂದು ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿತ್ತು. ಅಲ್ಲದೆ ಕನ್ನಡ(Kannada)ದಲ್ಲಿ ಒಂದು ಕೃಪಾಂಕ ವಿದ್ಯಾರ್ಥಿಗಳಿಗೆ ದೊರೆಯಲಿದೆ.
ಇದನ್ನೂ ಓದಿ: Bengaluru : ಬೆಂಗಳೂರಿನಲ್ಲಿ ಕೊರೋನಾ ತಾಂಡವ : ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 162 ಕ್ಕೆ ಏರಿಕೆ!
ನಿಮ್ಮ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೀಗೆ ವೀಕ್ಷಿಸಿ
1) ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ https://sslc.karnataka.gov.in ಕ್ಲಿಕ್ ಮಾಡಿ
2) ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವ ರಿಸಲ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ
3) ನಿಮ್ಮ ರೋಲ್ ನಂಬರ್ ಅನ್ನು ನಮೂದಿಸಿ ಲಾಗಿನ್ ಆಗಿ
4) ರೋಲ್ ನಂಬರ್ ಜೊತೆಗೆ ಕೇಳುವ ನಿಮ್ಮ ಇತರೆ ಮಾಹಿತಿಗಳನ್ನೂ ಸರಿಯಾಗಿ ಭರ್ತಿ ಮಾಡಿ
5) ಭರ್ತಿ ಮಾಡಲಾದ ಮಾಹಿತಿಯನ್ನು ಸಲ್ಲಿಸಿ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ
6) ತಾತ್ಕಾಲಿಕ ಅಂಕಪಟ್ಟಿ ಆನ್ಲೈನ್ನಲ್ಲೇ ಲಭ್ಯವಾಗಲಿದ್ದು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು
ಮರುಮೌಲ್ಯಮಾಪನಕ್ಕೆ ಏನು ಮಾಡಬೇಕು..?
ನಿಮಗೆ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದಲ್ಲಿ ಮರುಮೌಲ್ಯಮಾಪನ(Revaluation)ಕ್ಕೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಮರುಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ 2ನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಮಾಡಬಹುದು.
ಈ ವೆಬ್ಸೈಟ್ಗಳಲ್ಲಿ ಫಲಿತಾಂಶ ವೀಕ್ಷಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ