Milk Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಂದಿನ ಹಾಲಿನ ದರ ₹3 ಏರಿಕೆಗೆ KMF ಚಿಂತನೆ

ಪ್ರಸಕ್ತ 37 ರೂಪಾಯಿ ಇರುವ ಹಾಲಿನ ದರವನ್ನು 40ರೂಗೆ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಹೆಚ್ಚಳ ಮಾಡಲಾಗುವ 3 ರೂಪಾಯಿಯಲ್ಲಿ 2 ರೂಪಾಯಿ ರೈತರಿಗೆ ನೀಡಲು ಚಿಂತನೆ ನಡೆದಿದೆ.

Written by - Channabasava A Kashinakunti | Last Updated : Jan 16, 2022, 11:26 AM IST
Milk Price : ಸಾಮಾನ್ಯ ಜನರಿಗೆ ಬಿಗ್ ಶಾಕ್ : ನಂದಿನ ಹಾಲಿನ ದರ ₹3 ಏರಿಕೆಗೆ KMF ಚಿಂತನೆ title=

ಬೆಂಗಳೂರು : ನಂದಿನ ಹಾಲಿನ ದರ 3 ರೂ. ಏರಿಕೆಗೆ ಕೆಎಂಎಫ್ ಚಿಂತನೆ ನಡೆಸುತ್ತಿದೆ ಎಂದು ಕೆಎಂಎಫ್ ಅಧಿಕೃತ ಮೂಲಗಳಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಲಿನ ದರ ಏರಿಕೆಗೆ ಜಿಲ್ಲಾ ಹಾಲು ಒಕ್ಕೂಟಗಳು ಮನವಿ ಮಾಡಿವೆ. 

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ(Balachandra Jarkiholi) ನೇತೃತ್ವದಲ್ಲಿ ಸಿಎಂ ಭೇಟಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೂ 1 ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ಅವರು ಒಪ್ಪಿದರೆ ಮಾತ್ರ ಹಾಲಿನ ದರ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ : COVID-19 in Karnataka : ಕೊರೋನಾ ವಿಚಾರದಲ್ಲಿ ರಾಜ್ಯದ ಪಾಲಿಗೆ ಗುಡ್ ನ್ಯೂಸ್..! 

ಪ್ರಸಕ್ತ 37 ರೂಪಾಯಿ ಇರುವ ಹಾಲಿನ ದರವನ್ನು 40ರೂಗೆ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಹೆಚ್ಚಳ(Milk Price Hike) ಮಾಡಲಾಗುವ 3 ರೂಪಾಯಿಯಲ್ಲಿ 2 ರೂಪಾಯಿ ರೈತರಿಗೆ ನೀಡಲು ಚಿಂತನೆ ನಡೆದಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ. ಇದೇ ಕಾರಣಕ್ಕಾಗಿ ಹಾಲಿನ ದರ ಏರಿಕೆಗೆ ಒಕ್ಕೂಟಗಳ ಪಟ್ಟು ಹಿಡಿದಿವೆ ಎಂದು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News