ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ ಕರ್ನಾಟಕ ಕಾನೂನು ವಿವಿಯ ಅಧಿಸೂಚನೆಗಳು..!

ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಈಗ ತನ್ನ ಇತ್ತೀಚಿಗಿನ ಅಧಿಸೂಚನೆಗಳ ಮೂಲಕ ಕಾನೂನು ಪದವಿಯ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.

Written by - Zee Kannada News Desk | Last Updated : Oct 26, 2021, 10:00 PM IST
  • ಈಗ ಸಮ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ಮಾಡುವ ವಿಚಾರವಾಗಿ ಪ್ರಕರಣವು ಧಾರವಾಡ ಮತ್ತು ಬೆಂಗಳೂರು ಹೈಕೋರ್ಟ್ ಪೀಠದ ಮೆಟ್ಟಿಲಲ್ಲಿ ಇದೆ.
  • ಈ ವಿಚಾರವಾಗಿ ಪ್ರಕರಣವು ಇದೆ ಅಕ್ಟೋಬರ್ 27 ರಂದು ಧಾರವಾಡ ಪೀಠದಲ್ಲಿ ಹಾಗೂ 28 ರಂದು ಬೆಂಗಳೂರು ಪೀಠದಲ್ಲಿ ವಿಚಾರಣೆಗೆ ಬರಲಿದೆ.
ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ ಕರ್ನಾಟಕ ಕಾನೂನು ವಿವಿಯ ಅಧಿಸೂಚನೆಗಳು..! title=
Photo Courtesy: Facebook

ಬೆಂಗಳೂರು: ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಈಗ ತನ್ನ ಇತ್ತೀಚಿಗಿನ ಅಧಿಸೂಚನೆಗಳ ಮೂಲಕ ಕಾನೂನು ಪದವಿಯ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವಂತೆ ಮಾಡಿದೆ.

ಈಗ ಸಮ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ಮಾಡುವ ವಿಚಾರವಾಗಿ ಪ್ರಕರಣವು ಧಾರವಾಡ ಮತ್ತು ಬೆಂಗಳೂರು ಹೈಕೋರ್ಟ್ ಪೀಠದ ಮೆಟ್ಟಿಲಲ್ಲಿ ಇದೆ.ಈ ವಿಚಾರವಾಗಿ ಪ್ರಕರಣವು ಇದೆ ಅಕ್ಟೋಬರ್ 27 ರಂದು ಧಾರವಾಡ ಪೀಠದಲ್ಲಿ ಹಾಗೂ 28 ರಂದು ಬೆಂಗಳೂರು ಪೀಠದಲ್ಲಿ ವಿಚಾರಣೆಗೆ ಬರಲಿದೆ.ಆದರೆ ಹೈಕೋರ್ಟ್ ಇನ್ನೂ ಅಂತಿಮ ತೀರ್ಪು ನೀಡುವ ಮುನ್ನವೇ ಕರ್ನಾಟಕ ಕಾನೂನು ವಿವಿ ಅಕ್ಟೋಬರ್ 13 ರಂದು ಅಧಿಸೂಚನೆ ಹೊರಡಿಸಿ ಅಕ್ಟೋಬರ್/ನವೆಂಬರ್ ತಿಂಗಳಲ್ಲಿ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಮುಂದೂಡಿ ಮರು ಮೌಲ್ಯ ಮಾಪನ ಹಾಗೂ ಸವಾಲು ಮೌಲ್ಯಮಾಪನ ಮುಗಿದ ನಂತರ ನವೆಂಬರ್ ಎರಡನೇ ವಾರದಲ್ಲಿ ಇಂಟರ್ ಮೀಡಿಯಟ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿತ್ತು.

ಇದನ್ನೂ ಓದಿ : ZEEL-Sony ಮೆಗಾ ವಿಲೀನಕ್ಕೆ Invesco ಅಸಮಾಧಾನ ಗೊಂಡಿರುವುದರ ಉದ್ದೇಶವಾದರೂ ಏನು?

ಇನ್ನೊಂದೆಡೆಗೆ ಅಕ್ಟೋಬರ್ 25 ರಂದು ಬಿಡುಗಡೆ ಮಾಡಿರುವ ಅಧಿಸೂಚನೆಯಲ್ಲಿಯೂ ಕೂಡ ದಿನಾಂಕ 21-09-2021 ಹಾಗೂ  21-10-2021 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಐದು ಮತ್ತು ಮೂರು ವರ್ಷದ ಕಾನೂನು ಪದವಿಗಳಿಗೆ ಪ್ರವೇಶ ಪಡೆಯಬೇಕೆಂದು ಸೂಚಿಸಿದೆ.

ಇದನ್ನೂ ಓದಿ :ಸೋನಿಯಾ ಗಾಂಧಿ ಭೇಟಿ ಅಂತ್ಯ: ರಾಷ್ಟ್ರ ರಾಜಕೀಯಕ್ಕೆ ಹೋಗಲ್ಲವೆಂದ ಸಿದ್ದರಾಮಯ್ಯ

ಈಗ ಸಮ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ಮಾಡುವ ವಿಚಾರವಾಗಿ ಪ್ರಕರಣವು ಕೋರ್ಟ್ ಮೆಟ್ಟಿನಲ್ಲಿ ಇರುವ ಸಂದರ್ಭದಲ್ಲಿ ಕಾನೂನು ವಿಶ್ವವಿದ್ಯಾನಿಲಯವು ಬೆಸ ಸೆಮಿಸ್ಟರ್ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಆರಂಭಿಸಿರುವುದು ವಿದ್ಯಾರ್ಥಿಗಳಲ್ಲಿ ನಿಜಕ್ಕೂ ಗೊಂದಲವನ್ನು ಸೃಷ್ಟಿಸಿದೆ.ಈಗ ಬಹುತೇಕ ವಿದ್ಯಾರ್ಥಿಗಳು ವಿವಿಯ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಕಾನೂನು ವಿವಿ ತನ್ನ ಅಧಿಸೂಚನೆ ಮೂಲಕ ಸೃಷ್ಟಿಸಿರುವ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿರುವ ಬೆಂಗಳೂರಿನ ಕಾನೂನು ಕಾಲೇಜವೊಂದರಲ್ಲಿ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಭಿಲಾಶ್.ಬಿ (ಹೆಸರು ಬದಲಾಯಿಸಲಾಗಿದೆ) "ಈಗ ನಮಗೆ ಅತ್ತ ಕಡೆ ಮುಂದಿನ ಸೆಮಿಸ್ಟರ್ ಗೆ ಬಡ್ತಿ ಮಾಡದೆ, ಇತ್ತ ಪರೀಕ್ಷೆಯನ್ನೂ ನಡೆಸದೆ ಮೇಲಿಂದ ಮೇಲೆ ವಿವಿ ಹೀಗೆ ಅಧಿಸೂಚನೆ ಬದಲಿಸುತ್ತಿರುವುದು ನಮಗೆ ಗೊಂದಲವನ್ನುಂಟು ಮಾಡಿದೆ.ವಿವಿ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಪರೀಕ್ಷೆ ಮುಗಿದು ಮುಂದಿನ ಸೆಮಿಸ್ಟರ್ ನ ತರಗತಿಗಳು ನಡೆಯಬೇಕಾಗಿತ್ತು, ಆದರೆ ಈಗ ವಿಶ್ವವಿದ್ಯಾನಿಲಯ ಮಾಡುತ್ತಿರುವ ವಿಳಂಬದ ಧೋರಣೆಯು ನಮ್ಮ ಕೋರ್ಸ್ ನ ಅವಧಿ ಮೇಲೆ ಇದು ಪರಿಣಾಮ ಬೀರುತ್ತದೆ"ಎನ್ನುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News