ಲೋಕ ಲೆಕ್ಕಾಚಾರ: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಸ್ಥಿತಿಗತಿ?

Written by - Zee Kannada News Desk | Last Updated : Feb 24, 2024, 04:41 PM IST
  • ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ
  • ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ.
  • ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ.
ಲೋಕ ಲೆಕ್ಕಾಚಾರ: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೇಗಿದೆ ರಾಜಕೀಯ ಸ್ಥಿತಿಗತಿ? title=

ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು,  ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ ಮತ್ತು ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಮತದಾರ ಪ್ರಭುಗಳು ಕೂಡ ಹಲವು ರೀತೀಯಲ್ಲಿ ಕೂಡಿಸಿ ಗುಣಿಸಿ ಭಾಗಾಕಾರ ಮಾಡ್ತಾರೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್ ಕಾರ್ಡ್..!

ಶತಮಾನದ ಸಂತ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡಿದ ಪುಣ್ಯಭೂಮಿ.. ಶೇಂಗಾ, ತೆಂಗು, ಮಠ, ಮಾನ್ಯಗಳ ತವರು. ರಾಜಕೀಯ ಶಕ್ತಿ ಕೇಂದ್ರ ಸಿದ್ಧಗಂಗೆ ಇರುವ ತುಮಕೂರು ಲೋಕಸಭಾ ಕ್ಷೇತ್ರ. ಬೆಂಗಳೂರಿನ ಉಪನಗರ ಅಂತಲೇ ಫೇಮಸ್‌ ಆಗಿದೆ.ಉಳುವವನೆ ಭೂಮಿಯ ಒಡೆಯ ಕಾನೂನು ರೂಪಿಸಿದ ಹುಚ್ಚಮಾಸ್ತಿಗೌಡ, ಡಿಸಿಎಂ ಸ್ಥಾನಕ್ಕೇರಿದ ಡಾ.ಜಿ.ಪರಮೇಶ್ವರ, ಐದು ಸಲ ಸಂಸದರಾಗಿದ್ದ ಜಿ.ಎಸ್.ಬಸವರಾಜು, ದೆಹಲಿಯಲ್ಲಿ ಪ್ರಭಾವಿ ಎನ್ನಿಸಿದ್ದ ಕೆ.ಲಕ್ಕಪ್ಪ ಸೇರಿದಂತೆ ಘಟಾನುಘಟಿ ಮುಖಂಡರನ್ನು ನೀಡಿದ ಹೆಗ್ಗಳಿಕೆ ಜಿಲ್ಲೆಯಲ್ಲಿದೆ.. ಹೋರಾಟಕ್ಕೆ ಹೆಸರಾದ ಜೆ.ಸಿ.ಮಾಧುಸ್ವಾಮಿ, ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ, ವೈ.ಕೆ.ರಾಮಯ್ಯ ಮತ್ತಿತರರ ನಾಯಕರೂ ಇದೇ ಮಣ್ಣಿನವರು. ಮಾಜಿ ಸಂಸದ ಒಕ್ಕಲಿಗ ಸಮುದಾಯದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ಗೆ ಘರ್ ವಾಪ್ಸಿ ತ್ರಿಶಂಕು ಸ್ಥಿತಿಯಾಗಿದೆ. ಹಾಲಿ ಸಂಸದ ಜಿ.ಎಸ್.ಬಸವರಾಜು ವಯಸ್ಸಿನ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದು ಬಿಜೆಪಿ ಹೊಸ ಮುಖ ಹುಡುಕುವುದು ಅನಿವಾರ್ಯವಾಗಿದೆ.. ನೊಳಂಬ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದು ಅನಿವಾರ್ಯವಾದರೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಣಕ್ಕಿಳಿಯುವ ಸಾಧ್ಯತೆಯಿದೆ. ವಿ.ಸೋಮಣ್ಣ  ಕೂಡ ರಾಜಕೀಯ ಅಸ್ತಿತ್ವಕ್ಕಾಗಿ ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿ ತಮ್ಮದೇ ತಂತ್ರಗಾರಿಕೆಯಲ್ಲಿ ತೆರೆಮರೆ ಕಸರತ್ತು ನಡೆಸುತಿದ್ದಾರೆ. 

ಭೌಗೋಳಿಕವಾಗಿ ರಾಜ್ಯದ 2ನೇ ದೊಡ್ಡ ಜಿಲ್ಲೆ ಹೆಗ್ಗಳಿಕೆ 
11 ಅಸೆಂಬ್ಲಿ ಕ್ಷೇತ್ರ, 10 ತಾಲೂಕುಗಳ ಸಂಸತ್‌ ಕ್ಷೇತ್ರ
ಪ್ರಸ್ತುತ  ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ 2 ಶಾಸಕರು
ನೀರು, ರಸ್ತೆ-ಚರಂಡಿ, ಶಾಲೆ ಸುಧಾರಣೆ ಆಗಿವೆಯಾ..?
ಈಗ ಟವೆಲ್ ಹಾಕಿರೋರು ಯಾರು? ಯಾರಿಗೆ ಶ್ರೀರಕ್ಷೆ..?

ʻಲೋಕʼ ಲೆಕ್ಕದಲ್ಲಿ GS ಬಸವರಾಜ್‌  REPORT CARD

ಲೋಕಸಭಾ ಕ್ಷೇತ್ರದಲ್ಲಿ ಮೊದಲಿಂದಲೂ ಜಿದ್ದಾಜಿದ್ದಿನ ಪೈಪೋಟಿಯೇ ನಡೆಯುತ್ತದೆ. ಕಳೆದ ಬಾರಿಯೂ ಮೈತ್ರಿ ಪಾಲಿಟಿಕ್ಸ್‌ ಮತ್ತು ಈ ಸಲವೂ ಮೈತ್ರಿ ಪಾಲಿಟಿಕ್ಸ್‌ ಮುಂದುವರಿದಿರುವುದಕ್ಕೆ ಕಾಂಗ್ರೆಸ್‌ ವಲಯದಲ್ಲಿ ಕೊಂಚ ಬೇಸರವಿದೆ ಅಂತ ಮೇಲ್ನೋಟಕ್ಕೆ ಕಂಡು ಬರ್ತಿದೆ..

* ಬಸವರಾಜು, ಹಾಲಿ ಸಂಸದ-BJP
* 2024ರಲ್ಲಿ ಮತ್ತೆ ಸ್ಪರ್ಧೆಗೆ ಹಿಂದೇಟು
* 11 ಕ್ಷೇತ್ರಗಳಲ್ಲಿ 4 ಕಾಂಗ್ರೆಸ್ ಶಾಸಕರು
* ಒಟ್ಟು ಮತದಾರರ ಸಂಖ್ಯೆ 16,17,521
* 2019ರಲ್ಲಿ ಬಸವರಾಜು 596127 ಮತ-ಶೇ.47.89
* ಪ್ರತಿಸ್ಪರ್ಧಿ HD ದೇವೇಗೌಡ 582788 ಮತ-ಶೇ.46.82

ರಿಪೋರ್ಟ್ ಕಾರ್ಡ್:

* 5 ಬಾರಿ ಸಂಸದರಾಗಿ ಕಾರ್ಯ ನಿರ್ವಹಣೆ
* ಸಂಸತ್‌ ಕಲಾಪದಲ್ಲಿ 65%ರಷ್ಟು ಹಾಜರಾತಿ
* 59 ಪ್ರಶ್ನೆಗಳನ್ನ ಕೇಳಿದ್ದು 7 ಚರ್ಚೆಗಳಲ್ಲಿ ಭಾಗಿ
* ಗುಬ್ಬಿಯ ಬಿದರೆಹಳ್ಳಿ ಕಾವಲ್‌ನಲ್ಲಿ HAL ಘಟಕ
* ವಸಂತನರಾಸಪುರದಲ್ಲಿ ಮೆಗಾಫುಡ್‌ ಪಾರ್ಕ್‌
* ತುಮಕೂರು-ಮಧುಗಿರಿ- ರಾಯದುರ್ಗ ರೈಲ್ವೆ ಮಾರ್ಗ
* ತುಮಕೂರು-ಶಿರಾ-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗ
* ತುಮಕೂರು-ಬೆಂಗಳೂರು ರೈಲು ಮಾರ್ಗ ದ್ವಿಪಥ ಮಾರ್ಗ
* 100 ಬೆಡ್‌ ಇಎಸ್‌ಐ ಆಸ್ಪತ್ರೆಗೆ ಕೇಂದ್ರದ ಅನುಮೋದನೆ
* ಕೇಂದ್ರಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸ್ತಾವನೆ

ಈ ಕಡೆ ಸಂಸದರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೂ ಇನ್ನೂ ಹೆಚ್ಚಿನ ಅವಕಾಶವಿತ್ತು. ಬಟ್‌ ಸದುಪಯೋಗ ಆಗಿಲ್ಲ ಅಂತಿದೆ ಗ್ರೌಂಡ್‌ ರಿಪೋರ್ಟ್..
 

ಬಿಜೆಪಿ ಪ್ಲಸ್ 
* ಜೆಡಿಎಸ್ ಜೊತೆಗಿನ ಮೈತ್ರಿ
* ಹಿಂದುತ್ವ ಸಂಘಟನೆಯ ಬಲ
* ಮೋದಿ ಅಲೆ, ರಾಮಮಂದಿರ ನಿರ್ಮಾಣ
* ಲಿಂಗಾಯತ, ಒಕ್ಕಲಿಗರ ಮತ ಬ್ಯಾಂಕ್
* BSY ಮತ್ತು BYV ರಾಜ್ಯಾಧ್ಯಕ್ಷರಾಗಿದ್ದು
* HAL, ISRO, ಕೈಗಾರಿಕಾ ಅಭಿವೃದ್ಧಿ
* ಏರ್‌ಪೋರ್ಟ್, ಸ್ಮಾರ್ಟ್‌ ಸಿಟಿಯೋಜನೆ

ಬಿಜೆಪಿ ಮೈನಸ್ 
* ಸಮರ್ಥ ಅಭ್ಯರ್ಥಿಯ ಕೊರತೆ
* ಜೆಡಿಎಸ್ ಜತೆಗಿನ ಮೈತ್ರಿಯಿಂದ ಸಮನ್ವಯ ಕೊರತೆ
* ಹಾಲಿ ಸಂಸದ ಬಸವರಾಜು ರಾಜಕೀಯ ನಿವೃತ್ತಿ
* ಮುಖಂಡರ ನಡುವೆ ಆಂತರಿಕ ಗುಂಪುಗಾರಿಕೆ
* ಜಿಲ್ಲಾ ಮಟ್ಟದಲ್ಲಿ ಸಮರ್ಥ ನಾಯಕತ್ವ ಕೊರತೆ
* ಅಹಿಂದ ಮತಗಳು ಪಕ್ಷದ ಜತೆಗಿಲ್ಲದಿರುವುದು
* ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದು
* ಹಾಲಿ ಸಂಸದರ ಬಗ್ಗೆ ಆಡಳಿತ ವಿರೋಧಿ ಅಲೆ

ಹಾಗ್‌ ನೋಡಿದ್ರೆ ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡೋದಕ್ಕೆ ಸ್ಥಳೀಯ ಕೇಸರಿ ಕಾರ್ಯಕರ್ತರ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ನಾಯಕ ಚಿದಾನಂದ ಅಥವಾ ಮಾಧುಸ್ವಾಮಿ ಪರ ಬ್ಯಾಟ್‌ ಬೀಸಿದ್ದಾರೆ. 
ಅಲ್ದೆ ಜೆಡಿಎಸ್‌ ಜೊತೆಗಿನ ಮೈತ್ರಿಯಿಂದಲೂ ಲಾಭ ಹೆಚ್ಚು ಅಂತಿದಾರೆ.

ಕಾಂಗ್ರೆಸ್ ಪ್ಲಸ್‌ 
1. ರಾಜ್ಯದಲ್ಲಿ ಆಡಳಿತ ಹಿಡಿದಿರುವುದು
2. ಜಿಲ್ಲೆಯಲ್ಲಿ ಹೆಚ್ಚಾಗಿರುವ ಅಹಿಂದ ಮತ
3. ಪ್ರಭಾವಿ ಸಚಿವರಿದ್ದು ಗೆಲುವಿನ ಪ್ರತಿಷ್ಠೆ
4. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ
5. ಕ್ಷೇತ್ರದ ಜಾತಿ ಸಮೀಕರಣ ಅಭ್ಯರ್ಥಿ ಪೂರಕ
6. ಎಂಟರಲ್ಲಿ ನಾಲ್ಕು ಕ್ಷೇತ್ರದಲ್ಲಿ ಕೈ ಶಾಸಕರು

ಕಾಂಗ್ರೆಸ್ ಮೈನಸ್‌ 

1. ಸಮರ್ಥ ಅಭ್ಯರ್ಥಿಯ ಕೊರತೆ
2. ಮುಖಂಡರಲ್ಲಿಯೇ ಗುಂಪುಗಾರಿಕೆ
3. ಗ್ರಾಮ ಮಟ್ಟದಲ್ಲಿ ಸಂಘಟನೆ ಕೊರತೆ
4. ಅಧಿಕಾರ ಕೆಲವೇ ಸಮುದಾಯಕ್ಕೆ ಸೀಮಿತ ಎಂಬ ದೂರು
5. ನಿಗಮ, ಮಂಡಳಿ ನೇಮಕ ತಡವಾಗಿರುವ ಅಸಮಾಧಾನ

ಏನೇ ಆದ್ರೂ ಸ್ಥಳೀಯರಿಗೆ.. ಕಾರ್ಯಕರ್ತರ ಜೊತೆಗೆ ಇರೋರಿಗೆ ಟಿಕೆಟ್‌ ನೀಡ್ಬೇಕು. ಆ ಮೂಲಕ ಪಕ್ಷದ ಗೆಲುವಿಗೆ ಸಹಕಾರವಾಗಲಿದೆ ಅಂತ ಕಾಂಗ್ರೆಸ್‌ ನಾಯಕರು ನೇರವಾಗಿ ಮುರಳೀಧರ್‌ ಹಾಲಪ್ಪ ಪರ ಬ್ಯಾಟ್‌ ಬೀಸಿದ್ದಾರೆ.  ಮುರಳೀಧರ್‌ ಹಾಲಪ್ಪಗೆ ಏಕೆ ಕಾಂಗ್ರೆಸ್‌ ಟಿಕೆಟ್‌ ಅಂತ ಕೇಳಿದ್ದಾಯ್ತು. ಬಿಜೆಪಿ-ಜೆಡಿಎಸ್‌ ಕೆಲವು ನಾಯಕರು ಕೂಡ ಕಾಂಗ್ರೆಸ್‌ ಪರವಾಗಿದೆ. ಈ ಸಲ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೇ ಗೆಲುವು ಅಂತಿದಾರೆ ಕೂಡ..
 

BJP ಆಕಾಂಕ್ಷಿಗಳು..? 

1. ವಿ.ಸೋಮಣ್ಣ, BJP/JDS - ಲಿಂಗಾಯತ
2. ಜೆ.ಸಿ.ಮಾಧುಸ್ವಾಮಿ, BJP/JDS - ಲಿಂಗಾಯತ
3. ಡಾ.ಪರಮೇಶ್, ರವಿ ಹೆಬ್ಬಾಕ, BJP/JDS - ಲಿಂಗಾಯತ
4. ಮುದ್ದಹನುಮೇಗೌಡ, BJP/JDS - ಒಕ್ಕಲಿಗ
5. ಎಸ್.ಪಿ.ಚಿದಾನಂದ್, BJP/JDS ಅಹಿಂದ

ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಮಣೆಯಾಕುವ ಸಾಧ್ಯತೆಯಿದ್ದು, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ಗೆ ವಾಪಸಾಗಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ರೆ SPS ಘರ್‌ ವಾಪ್ಸಿ ಬಗ್ಗೆ ಇನ್ನೂ ಕಾಂಗ್ರೆಸ್‌ ಸಹಮತ ತೋರಿಸಿಲ್ಲ ಅಂತ ಹೇಳಲಾಗ್ತಿದ್ದರೂ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಈಗಾಗಲೇ ಪ್ರಚಾರವನ್ನೂ ಶುರು ಮಾಡಿದಾರೆ.

ಕಾಂಗ್ರೆಸ್ ಆಕಾಂಕ್ಷಿಗಳು..?  

1. KN ರಾಜಣ್ಣ, ಸಚಿವರು -ಪರಿಶಿಷ್ಟ ಪಂಗಡ
2. ಮುರಳೀಧರ ಹಾಲಪ್ಪ, ಸಂಜಯ್ ಜಯಚಂದ್ರ, ಕುಂಚಿಟಿಗ
3. ನಿಕೇತ್‌ ರಾಜ್‌ ಮೌರ್ಯ, ಕುರುಬ
4. ಎಸ್.ಪಿ.ಮುದ್ದಹನುಮೇಗೌಡ, ಒಕ್ಕಲಿಗ
5. ಭಾರತಿ ಶ್ರೀನಿವಾಸ್, ಒಕ್ಕಲಿಗ
6. ಡಿಸಿ.ಗೌರಿಶಂಕರ್, ಒಕ್ಕಲಿಗ

ಒಟ್ನಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಬೆಂಗಳೂರು ಸಮೀಪವಿದ್ದು ಭಾರೀ ಹೈಪ್‌ ಕ್ರಿಯೇಟ್‌ ಮಾಡಿದೆ. ಅದೇ ರೀತೀ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು ಹೈವೋಲ್ಟೇಜ್‌ ಸೃಷ್ಟಿಸಿಕೊಂಡಿದೆ. ಆದ್ರೆ ಯಾವ ಪಕ್ಷ ಅಥವಾ ಯಾರೇ ಗೆದ್ದರೂ ಬಹುದೊಡ್ಡ ಅಂತರವಿರದು ಅಂತ ಹೇಳಲಾಗ್ತಿದೆ. 

ಅಭ್ಯರ್ಥಿಗಳ ಬಲಾಬಲ:

ಬಿಜೆಪಿ
ವಿ.ಸೋಮಣ್ಣ
*ಲಿಂಗಾಯತ ಸಮುದಾಯದ ನಾಯಕ
*ಮಠಾಧೀಶರ ಆಶಿರ್ವಾದ 
*ಹಾಲಿ ಸಂಸದ ಜಿ.ಎಸ್.ಬಸವರಾಜು ಬೆಂಬಲ
*ಸೋಲಿನ ಅನುಕಂಪ
ಮೈನಸ್
*ಜಿಲ್ಲೆಯವರಲ್ಲ ಎಂಬ ಕೂಗು
*ತುಮಕೂರು ಕ್ಷೇತ್ರದ ಪರಿಚಯವಿಲ್ಲ
*ಲಿಂಗಾಯತರನ್ನು ಬಿಟ್ಟರೆ ಉಳಿದ ಸಮುದಾಯದ ಬೆಂಬಲ ಇಲ್ಲ
*ಸ್ಥಳೀಯ ನಾಯಕರ ವಿರೋಧ
*ಹೊರಗಿನವರು ಗೆದ್ದ ಉದಾಹರಣೆ ಇಲ್ಲ

ಜೆ.ಸಿ.ಮಾಧುಸ್ವಾಮಿ

ಪ್ಲಸ್:

*ಉತ್ತಮ ಸಂಸದೀಯ ಪಟು
*ನೇರ ನಡೆ, ನುಡಿಯ ನಾಯಕ
*ನೊಳಂಬ ಲಿಂಗಾಯತ ಸಮುದಾಯದ ಬಲ
*ಸೋಲಿನ ಅನುಕಂಪ, ಸ್ಥಳೀಯರು

ಮೈನಸ್:

*ಭಲವಂತದ ಸ್ಫರ್ಧೆ ಸಾಧ್ಯತೆ
*ಸಚಿವರಾಗಿದ್ದಾಗ ಸ್ವಪಕ್ಷದಲ್ಲಿಯೇ ವಿರೋಧಿಗಳು ಜಾಸ್ತಿ
*ಉತ್ತಮ ಆಡಳಿತಗಾರ ಎನ್ನಿಸಿದರೂ ಜನನಾಯಕ ಅಲ್ಲ
*ದೇವೇಗೌಡ, ಕುಮಾರಸ್ವಾಮಿ ಜತೆ ವೈರತ್ವ
*ಡಾ.ಪರಮೇಶ್: ಸಿದ್ಧಗಂಗಾ ಮಠದ ಜತೆಗಿನ ಒಡನಾಟ, ಸಂಘ, ಪರಿವಾರದ ಬೆಂಬಲ.
*ವಿನಯ್ಬಿದರೆ: ಸಂಘಟನೆಯ ಬಲ, ಯುವ ಮುಖವಾದರೆ ಮೊದಲ ಆದ್ಯತೆ
*ರವಿ ಹೆಬ್ಬಾಕ: ಜಿಲ್ಲಾಧ್ಯಕ್ಷರಾಗಿ ಸೇವೆ, ಜೆ.ಸಿ.ಮಾಧುಸ್ವಾಮಿ ಬೆಂಬಲ ಸಾಧ್ಯತೆ.
*ಎಸ್.ಪಿ.ಚಿದಾನಂದ್: ಅಹಿಂದ ಮತ ಕ್ರೂಡೀಕರಣ ಸಾಧ್ಯತೆ, ಚುನಾವಣೆಗೆ ಅಗತ್ಯವಾದ ಸಂಪನ್ಮೂಲ.

ಕಾಂಗ್ರೆಸ್:

ಎಸ್.ಪಿ.ಮುದ್ದಹನುಮೇಗೌಡ:

ಪ್ಲಸ್

*ಸಂಸದರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ ಹೆಗ್ಗಳಿಕೆ
*2019ರಲ್ಲಿ ಸ್ಫರ್ಧೆಗೆ ಅವಕಾಶವೇ ಸಿಗಲಿಲ್ಲ ಎಂಬ ಅನುಕಂಪ
*ಕ್ಷೇತ್ರದ ಸಂಪೂರ್ಣ ಪರಿಚಯ, ಎಲ್ಲಾ ಪಕ್ಷದ ಮುಖಂಡರ ಜತೆ ಒಡನಾಟ
*ಒಕ್ಕಲಿಗ ಸಮುದಾಯದವಾಗಿದ್ದು ಅಹಿಂದ ಕೈಹಿಡಿದರೆ ಗೆಲುವು ಸುಲಭ

ಮೈನಸ್:

*ಬಿಜೆಪಿಗೆ ಹೋಗಿ ವಾಪಸಾಗುತ್ತಿರುವುದು ಕಾಂಗ್ರೆಸ್ನಲ್ಲಿ ಅಸಮದಾನಕ್ಕೆ ಕಾರಣ
*ಕಾಂಗ್ರೆಸ್ನಲ್ಲಿರುವ ಗುಂಪುಗಾರಿಕೆ
*ಬಿಜೆಪಿ-ಜೆಡಿಎಸ್ ಮೈತ್ರಿಯ ಎಫೆಕ್ಟ್

ಕೆ.ಎನ್.ರಾಜಣ್ಣ:

ಪ್ಲಸ್:

*ಸಹಕಾರ ಕ್ಷೇತ್ರದಿಂದ ಜಿಲ್ಲೆಯಲ್ಲಿ ಪ್ರಭಾವಿ
*ದೇವೇಗೌಡರನ್ನು ಸೋಲಿಸಿದ್ದ ಕೀರ್ತಿ
*ಸಚಿವರಾಗಿ ಎಲ್ಲಾ ಸಮುದಾಯಗಳ ಜನರೊಂದಿಗೆ ಒಡನಾಟ

ಮೈನಸ್:
*ಸಾಮಾನ್ಯ ಕ್ಷೇತ್ರದಲ್ಲಿ ಎಸ್ಟಿ ಸ್ಫರ್ಧೆಗೆ ವಿರೋಧ ಸಾಧ್ಯತೆ
*ಕುಟುಂಬ ರಾಜಕೀಯದ ಆರೋಪ
*ಒಕ್ಕಲಿಗ, ಲಿಂಗಾಯತ ಸಮುದಾಯಗಳ ವಿರೋಧ
*ಮಂತ್ರಿಯಾಗಿದ್ದರೂ ಸಂಸದ ಸ್ಥಾನವೇಕೆ ಎಂಬ ಪ್ರಶ್ನೆ

ಮುರಳೀಧರ ಹಾಲಪ್ಪ:

*ಡಾ.ಜಿ.ಪರಮೇಶ್ವರ ಬೆಂಬಲ, ಕುಂಚಿಟಿಗ ಸಮುದಾಯದ ಬಲ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು
*ಯಾವ ಚುನಾವಣೆಯಲ್ಲಿ ಎದುರಿಲ್ಲ, ಅನನುಭವಿ

ನಿಕೇತ್ರಾಜ್ಮೌರ್ಯ

*ಅಹಿಂದ ಸಮುದಾಯದ ಬಲ, ಯುವಕರಿಗೆ ಆಧ್ಯತೆ, ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂಚೂಣಿ
*ರಾಜಕೀಯ ಅನುಭವ ಇಲ್ಲ, ಯಾವ ಚುನಾವಣೆಯನ್ನೂ ಎದುರಿಸಿಲ್ಲ

ಭಾರತಿಶ್ರೀನಿವಾಸ್

ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಪತ್ನಿ. ರಾಜಕೀಯದಲ್ಲಿ ಪತಿಯ ಗೆಲುವಿಗೆ ಉಸ್ತುವಾರಿ ಇವರ ಮೇಲೆ ಹೆಚ್ಚು ಅನುಭವ ಇದೆ. ಸ್ಥಳೀಯವಾಗಿ ಒಂದಿಷ್ಟು ಗುರುತಿಸಿಕೊಂಡಿದ್ದಾರೆ. ಮಹಿಳೆ ಅನ್ನೋ ಕಾರಣಕ್ಕೆ ಹೆಚ್ಚು ಗಮನ ಸೆಳೆಯಬಹುದು. ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ ಇದೆ. 

ಡಿ.ಸಿ.ಗೌರಿಶಂಕರ್ 
ಮಧುಗಿರಿ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಕಂಡ ಅನುಭವ. ಮಾಜಿ ಸಚಿವ ಜೆಡಿಎಸ್ ನ ಕಟ್ಟಾಳು ಚೆನ್ನಿಗಪ್ಪ ಪುತ್ರ ಅನ್ನೋ ಹೆಗ್ಗಳಿಕೆ. ಜಿಲ್ಲೆ ಪ್ರತಿಯೊಂದು ತಾಲೂಕಿನಲ್ಲಿ ತಮ್ಮದೇ ರೀತಿಯಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಪಕ್ಷಗಳ ಲೆಕ್ಕಾಚಾರ:

ಬಿಜೆಪಿ:
*ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಕಸರತ್ತು
*ಮೋದಿ ಅಲೆ, ಹಿಂದುತ್ವಕ್ಕೆ ಆಧ್ಯತೆ
*ಜೆಡಿಎಸ್ ಜತೆ ಹೊಂದಾಣಿಕೆಯ ಲಾಭ
*ಅಭಿವೃದ್ಧಿ, ರಾಷ್ಟಿಯತೆಯ ವಿಷಯವೇ ಚುನಾವಣೆ ಅಸ್ತ್ರ
*ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಬೂತ್ಮಟ್ಟದ ಸಂಘಟನೆ

ಕಾಂಗ್ರೆಸ್:
*ಬಿಜೆಪಿಯಿಂದ ಕ್ಷೇತ್ರ ಕಿತ್ತುಕೊಳ್ಳಲು ತಂತ್ರಗಾರಿಕೆ
*ಎಸ್ಪಿಮುದ್ದ ಹನುಮುಮೇಗೌಡರನ್ನು ವಾಪಸ್ ಕರೆತಂದು ಬಿಜೆಪಿಗೆ ಶಾಕ್ ನೀಡಲು ಪ್ಲಾನ್
*ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್ ಜತೆಗಿನ ಬಿಜೆಪಿ ಮೈತ್ರಿ ವಿಫಲವಾಗಿಸುವುದು.
*ಗ್ಯಾರಂಟಿ ಕಾರ್ಯಕ್ರಮಗಳ ಲಾಭ ಪಡೆಯುವುದು.
*ಅಧಿಕಾರದ ಆಸೆ ತೋರಿಸಿ ಎರಡನೇ ಹಂತದ ನಾಯಕರನ್ನು ಚುರುಕಾಗಿಸುವುದು.
*ಜಿಲ್ಲೆಯಲ್ಲಿರುವ ಪ್ರಭನ ನಾಯಕರನ್ನು ಚುನಾವಣೆಯಲ್ಲಿ ಬಳಸಿಕೊಳ್ಳುವುದು.
*ಹೊಂದಾಣಿಕೆ ರಾಜಕಾರಣಕ್ಕೆ ಹೆಸರಾದ ಸಚಿವರುಗಳು...
 
ತುಮಕೂರು ಲೋಕ ಸಭಾ ಕ್ಷೇತ್ರ ಹಾಲಿ ಮತದಾರರ ವಿವರ

ಪುರುಷ ಮತದಾರರು 8,13,103
ಮಹಿಳಾ ಮತದಾರರು 8,04,118
ಇತರೆ ಮತದಾರರು 300
ಜಾತಿವಾರು ಲೆಕ್ಕಾಚಾರ ಮತದಾರರ ಸಂಖ್ಯೆ
ಲಿಂಗಾಯತ 3,89,000
ಒಕ್ಕಲಿಗರು 3,14,000
ಎಸ್ಸಿ 2,75,000
ಎಸ್ಟಿ 1,40,000
ಕುರುಬ 1,35,000
ಮುಸ್ಲಿಂ 1,98,000
ಇತರೆ 1,66,521
===
ಚುನಾವಣೆ ಇತಿಹಾಸ
1952 ರಿಂದ 18 ಸಾರ್ವತ್ರಿಕ ಚುನಾವಣೆ ಕಂಡಿರುವ ಲೋಕಸಭಾ ಕ್ಷೇತ್ರದಲ್ಲಿ ಒಮ್ಮೆ 1962ರಲ್ಲಿ ಉಪಚುನಾವಣೆ ಕೂಡ ನಡೆದಿದೆ. ಕಾಂಗ್ರೆಸ್ 11 ಬಾರಿ, ಬಿಜೆಪಿ 5 ಬಾರಿ, ಪ್ರಜಾಸೋಷಲಿಸ್ಟ್ ಹಾಗೂ ಜನತಾದಳ ತಲಾ ಒಂದು ಬಾರಿ ಗೆಲುವು ಸಾಧಿಸಿದ ಇತಿಹಾಸ ಕ್ಷೇತ್ರದ್ದು.

==
ವರ್ಷ, ಗೆದ್ದವರು, ಪಕ್ಷ
1952 ಸಿ.ಆರ್ ಬಸಪ್ಪ ಕಾಂಗ್ರೆಸ್
1957 ಎಂವಿ ಕೃಷ್ಣಪ್ಪ ಕಾಂಗ್ರೆಸ್
1962 ಎಂ.ವಿ ಕೃಷ್ಣಪ್ಪ ಕಾಂಗ್ರೆಸ್.
1962 ಅಜಿತ್ ಪ್ರಸಾದ್ ಜೈನ್ (ಉತ್ತರ ಪ್ರದೇಶ ಲಕ್ನೊಮೂಲದವನು.)
1965 ಮಾಲಿಮರಿಯಪ್ಪ ಕಾಂಗ್ರೆಸ್
1967ಕೆ.ಲಕ್ಕಪ್ಪ ಪ್ರಜಾಸೋಷಿಯಲ್ ಪಾರ್ಟಿ.
1971 ಕೆ.ಲಕ್ಕಪ್ಪ ಕಾಂಗ್ರೆಸ್
1977 ಕೆ.ಲಕ್ಕಪ್ಪ ಕಾಂಗ್ರೆಸ್
1980 ಕೆ.ಲಕ್ಕಪ್ಪ ಕಾಂಗ್ರೆಸ್ 
1984 ಜಿ.ಎಸ್.ಬಸವರಾಜು ಕಾಂಗ್ರೆಸ್
1989 ಜಿ.ಎಸ್.ಬಸವರಾಜು ಕಾಂಗ್ರೆಸ್
1991 ಎಸ್.ಮಲ್ಲಿಕಾರ್ಜುನಯ್ಯ ಬಿಜೆಪಿ
1996 ಸಿ.ಎನ್.ಭಾಸ್ಕರಪ್ಪ ಜನತಾದಳ
1998 ಎಸ್.ಮಲ್ಲಿಕಾರ್ಜುನಯ್ಯ ಬಿಜೆಪಿ
1999 ಜಿ.ಎಸ್.ಬಸವರಾಜು ಕಾಂಗ್ರೆಸ್
2004 ಎಸ್.ಮಲ್ಲಿಕಾರ್ಜುನಯ್ಯ ಬಿಜೆಪಿ
2009 ಜಿ.ಎಸ್.ಬಸವರಾಜು ಬಿಜೆಪಿ
2014 ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್
2019 ಜಿ.ಎಸ್.ಬಸವರಾಜು ಬಿಜೆಪಿ

ಸಂಸದರ ರಿಪೋರ್ಟ್ ಕಾರ್ಡ್ :

ಪ್ರಸ್ತುತ ರಾಜಕೀಯ ಸ್ಥಿತಿ-ಗತಿ?
ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್ ಹೆಚ್ಚು ಬಾರಿ ಗೆಲುವು ಸಾಧಿಸಿ ಭದ್ರಕೋಟೆ ಎನ್ನಿಸಿಕೊಂಡಿದೆಯಾದರೂ ಇತ್ತೀಚೆಗೆ ಸಾಕಷ್ಟು ಬಾರಿ ಕ್ಷೇತ್ರ ಪುನರ್ವಿಂಗಡನೆಯಾಗಿದ್ದು ಭೌಗೌಳಿಕ ಚಿತ್ರಣ ಬದಲಾವಣೆಯಾಗಿದೆ. ಜಿ.ಎಸ್.ಬಸವರಾಜು ಮೂರು ಬಾರಿ ಕಾಂಗ್ರೆಸ್ನಿಂದ ಹಾಗೂ ಎರಡು ಬಾರಿ ಬಿಜೆಪಿಯಿಂದ ಒಟ್ಟು ಐದು ಭಾರಿ ತುಮಕೂರು ಕ್ಷೇತ್ರದ ಸಂಸದರಾಗಿ ಆಯ್ಕೆಗೊಂಡು ಹಿರಿಯ ನಾಯಕ ಎನ್ನಿಸಿದ್ದಾರೆ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ಸೋಲಿಸಿ ಧೈತ್ಯ ಸಂಹಾರಿ ಎನ್ನಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಅಹಿಂದ ಸಮುದಾಯದ ಬೆಂಬಲ ಪಡೆಯುವ ಅಭ್ಯರ್ಥಿಗೆ ಗೆಲುವು ಫಿಕ್ಸ್. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದ ಅಪಕೀರ್ತಿಯೂ ಜಿಲ್ಲೆಯಲ್ಲಿದೆ. ಒಕ್ಕಲಿಗ, ಲಿಂಗಾಯತ ಸಮುದಾಯ ಮತಗಳು ಸಂಖ್ಯೆಯಲ್ಲಿ ಹೆಚ್ಚಿಚೆಯಾದರೂ ಗೆಲುವಿಗೆ ಅಹಿಂದ ವರ್ಗದ ಮತಗಳನ್ನು ಅವಲಂಭಿಸಲೇಬೇಕಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು ಈ ಮೈತ್ರಿಯ ರಿಯಲ್ ಎಫೆಕ್ಟ್ ಫಲಿತಾಂಶದ ನಂತರವಷ್ಟೇ ತಿಳಿಯಲಿದೆ. ಹಾಲಿ ಸಂಸದ ಜಿ.ಎಸ್.ಬಸವರಾಜು ಸ್ಫರ್ಧೆಯಿಂದ ನಿವೃತ್ತರಾಗಿದ್ದರೂ ಚುನಾವಣಾ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ತುಮಕೂರು ಲೋಕಸಭೆ ಕ್ಷೇತ್ರದ ಆಳ-ಅಗಲ ಬಲ್ಲ ಖ್ಯಾತಿ ಜಿಎಸ್ಬಿ ಅವರಿಗಿದೆ. ನರೇಂದ್ರಮೋದಿ ಅವರ ಅಲೆಯ ನಡುವೆಯೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆಲುವು ಸಾಧಿಸಿರುವ ಎಸ್.ಪಿ.ಮುದ್ದಹನುಮೇಗೌಡ ಕೂಡ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದು ಅವರ ಸ್ಫರ್ಧೆಯೂ ಚುನಾವಣಾ ಕಣವನ್ನು ರಂಗೇರಿಸಲಿದೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಶಕ್ತಿ ಕಾಣಿಸುತ್ತಿದ್ದು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News