ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿ ಭಾರೀ ಅಗ್ನಿ ಅವಘಡ, 9 ನೌಕರರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ನಗರದ ಬಿಬಿಎಂಪಿ ಕೇಂದ್ರ ಕಚೇರಿ ಅತೀ ಹೆಚ್ಚು ಚಟುವಟಿಕೆಗಳಿಂದ ಕೂಡಿರೋ ಪ್ರದೇಶ, ಇಂತಹ ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿ ಭಾರೀ ಅಗ್ನಿ ಅವಘಡವೊಂದು ಸಂಭವಿಸಿಬಿಟ್ಟಿದೆ. ಬೆಂಕಿಯ ಕೆನ್ನಾಲಿಗೆಗೆ ೯ ಮಂದಿ ಬಿಬಿಎಂಪಿ ನೌಕರರು ಒಳಗಾಗಿದ್ದು, ೪ ಮಂದಿ ತೀವ್ರ ತರದ ಗಾಯಗಳಾಗಿದೆ.ಇದರ ಕಂಪ್ಲೀಟ್ ಡಿಟೆಲ್ ಇಲ್ಲಿದೆ.

Written by - Bhavya Sunil Bangera | Edited by - Manjunath N | Last Updated : Aug 11, 2023, 09:43 PM IST
  • ಇನ್ನು ಬೆಂಕಿ ಬಿದ್ದ ಕಟ್ಟಡದಲ್ಲಿಯೆ ಬಿಬಿಎಂಪಿ ರೆಕಾರ್ಡ್ ರೂಮ್ ಸಹ ಇದ್ದು, ಅದೃಷ್ಟವಶಾತ್ ಬೆಂಕಿ ತಾಗಿಲ್ಲ
  • ಘಟನೆ ಸ್ಥಳಕ್ಕೆ ಬಿಬಿಎಂಪಿ ಕಮಿಷನರ್, ವಿಶೇಷ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು
  • ಬಳಿಕ ಮಾತನಾಡಿರುವ ಎಸಿಪಿ ಸತೀಶ್ ಕುಮಾರ್, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಲಾಗಿದೆ
ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿ ಭಾರೀ ಅಗ್ನಿ ಅವಘಡ, 9  ನೌಕರರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ title=

ಬೆಂಗಳೂರು: ನಗರದ ಬಿಬಿಎಂಪಿ ಕೇಂದ್ರ ಕಚೇರಿ ಅತೀ ಹೆಚ್ಚು ಚಟುವಟಿಕೆಗಳಿಂದ ಕೂಡಿರೋ ಪ್ರದೇಶ, ಇಂತಹ ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿ ಭಾರೀ ಅಗ್ನಿ ಅವಘಡವೊಂದು ಸಂಭವಿಸಿಬಿಟ್ಟಿದೆ. ಬೆಂಕಿಯ ಕೆನ್ನಾಲಿಗೆಗೆ ೯ ಮಂದಿ ಬಿಬಿಎಂಪಿ ನೌಕರರು ಒಳಗಾಗಿದ್ದು, ೪ ಮಂದಿ ತೀವ್ರ ತರದ ಗಾಯಗಳಾಗಿದೆ.ಇದರ ಕಂಪ್ಲೀಟ್ ಡಿಟೆಲ್ ಇಲ್ಲಿದೆ.

ಇದನ್ನೂ ಓದಿ: ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಲೋಕಸಭಾದಿಂದ ಕಾಂಗ್ರೆಸ್‌ನ ಅಧೀರ್ ಚೌಧರಿ ಅಮಾನತು

ವಿಧಾನ ಸೌಧ ಬಳಿಕ ಬೆಂಗಳೂರಿನಲ್ಲಿ ಪವರ್ ಹೌಸ್ ಅಂತಲೇ ಕರೆಸಿಕೊಳ್ಳುವ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಇಂದು ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿದೆ. ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಕಾಣಿಸಿಕೊಂಡ ಬೆಂಕಿಗೆ ೯ ಮಂದಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಬೆಂಜಮಿನ್ ಎಂಬ ರಾಸಾಯನಿಕ ತುಂಬಿದ್ದ ಓವನ್ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ನಡೆಡ್ಡಿದ್ದು, ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇನ್ನು ೫ ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆದರೆ ಸಕಾಲಕ್ಕೆ ಯಾರು ಬರದ ಹಿನ್ನೆಲೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಬಿಬಿಎಂಪಿ ಸಿಬ್ಬಂದಿ ಗಾಯಾಳುಗಳನ್ನು ಹೊರಗೆ ತಂದು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಿದ್ರು. ಇದಾದ ಬಳಿಕ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿ ಆದರು.

ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಮುಂದುವರೆದ ಗದ್ದಲ ಗಲಾಟೆ

ಇನ್ನು ಬೆಂಕಿ ಬಿದ್ದ ಕಟ್ಟಡದಲ್ಲಿಯೆ ಬಿಬಿಎಂಪಿ ರೆಕಾರ್ಡ್ ರೂಮ್ ಸಹ ಇದ್ದು, ಅದೃಷ್ಟವಶಾತ್ ಬೆಂಕಿ ತಾಗಿಲ್ಲ. ಘಟನೆ ಸ್ಥಳಕ್ಕೆ ಬಿಬಿಎಂಪಿ ಕಮಿಷನರ್, ವಿಶೇಷ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.ಬಳಿಕ ಮಾತನಾಡಿರುವ ಎಸಿಪಿ ಸತೀಶ್ ಕುಮಾರ್, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಲಾಗಿದೆ.ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಅಂತ ತಿಳಿಸಿದ್ದಾರೆ. ಸದ್ಯ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಆದರೆ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿಯೇ ಈ ರೀತಿ ಕನಿಷ್ಠ ಮುಂಜಾಗ್ರತಾ ಕ್ರಮ ಇಲ್ಲದಿರೋದು ದುರಂತವೇ ಅನ್ನಬಹುದು. ಇತ್ತ ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಹೀಗಾಗಿ ಇದಕ್ಕೆ ನಿಜವಾದ ಕಾರಣ ಏನು ಎಂಬುದು ಗೊತ್ತಾಗಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News