JC Madhuswamy : ರೈತರಿಗೆ ಸಿಹಿ ಸುದ್ದಿ : ಗೊಬ್ಬರ ಸ್ಟಾಕ್ ಮಾಡಿಕೊಳ್ಳಲು 200 ಕೋಟಿ‌ ಬಿಡುಗಡೆ!

ಗೊಬ್ಬರ ಖರೀದಿಸಿ‌ ಸ್ಟಾಕ್ ಮಾಡಿಕೊಳ್ಳಲು 200 ಕೋಟಿ‌ ರೂ. ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ 

Written by - Channabasava A Kashinakunti | Last Updated : Jul 22, 2022, 02:28 PM IST
  • ಸಚಿವ ಸಂಪುಟ ಸಭೆ ಮುಕ್ತಾಯದ
  • ಗೊಬ್ಬರ ಖರೀದಿಸಿ‌ ಸ್ಟಾಕ್ ಮಾಡಿಕೊಳ್ಳಲು 200 ಕೋಟಿ‌ ರೂ. ಅನುಮೋದನೆ
  • ಮೈಸೂರು ವಿಮಾನ ನಿಲ್ದಾಣ 250 ಕೋಟಿ ರೂ. ಭೂಸ್ವಾಧೀನ
JC Madhuswamy : ರೈತರಿಗೆ ಸಿಹಿ ಸುದ್ದಿ : ಗೊಬ್ಬರ ಸ್ಟಾಕ್ ಮಾಡಿಕೊಳ್ಳಲು 200 ಕೋಟಿ‌ ಬಿಡುಗಡೆ! title=

ಬೆಂಗಳೂರು : ಗೊಬ್ಬರ ಖರೀದಿಸಿ‌ ಸ್ಟಾಕ್ ಮಾಡಿಕೊಳ್ಳಲು 200 ಕೋಟಿ‌ ರೂ. ಅನುಮೋದನೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ 

ಸಚಿವ ಸಂಪುಟ ಸಭೆ ಮುಕ್ತಾಯದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ಬೀಜ ನಿಗಮಕ್ಕೆ 200  ಕೋಟಿ‌ ರೂ. ಗ್ಯಾರಂಟಿ ನೀಡಲು ತೀರ್ಮಾನ ಮಾಡಲಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಉದ್ಯೋಗ ನೀತಿಗೆ ಸಚಿವ ಸಂಪುಟ ಅನುಮೋದನೆ, ಸ್ಥಳೀಯರಿಗೆ ಉದ್ಯೋಗ ನೀಡಲು ತೀರ್ಮಾನ ಮಾಡಲಾಗಿದೆ. ಸ್ಲಾಬ್ ಮಧ್ಯಮ ಕೈಗಾರಿಕೆಯಲ್ಲಿ ಬಂಡವಾಳ ಹೂಡಿಕೆ ಮೇರೆಗೆ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ. 1 , 2 , 3 , 4 , ಹಂತದಲ್ಲಿ  ಎವಿಸಿಡಿ ಯಿಂದ ಎಲ್ಲಾ ಹಂತದಲ್ಲು ಕನ್ನಡಿಗರಿಗೆ ಉದ್ಯೋಗ ನೀಡಲು ಸಂಪುಟ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : BS Yediyurappa : ವಿಜಯೇಂದ್ರಗೆ ಶಿಕಾರಿಪುರ ಬಿಟ್ಟುಕೊಟ್ಟ ಯಡಿಯೂರಪ್ಪ!

ವಿದ್ಯಾ ವಿಕಾಸ ಯೋಜನೆ ಅಡಿ ಶೂ ಮತ್ತು ಸಾಕ್ಯ್ ಕೊಡಲು 131 ಕೋಟಿ ರೂ. ಕೊಡಲು ತೀರ್ಮಾನ ಮಾಡಲಾಗಿದೆ. ವಿವಿಧ ಕಾರಾಗೃಹ ಜೀವಾವಧಿ ಶಿಕ್ಷೆ ಇರುವವರಿಗೆ ಮಾರ್ಗಸೂಚಿ ಬದಲಾವಣೆ ಬಿಡುಗಡೆ ಮಾಡಲಾಗಿದೆ ಎಂದರು.

ಬಾಲಾಪರಾಧ, ಹೆಚ್ಚಿನ ಅಪರಾಧ ಮಾಡಿದವರಿಗೆ ಬಿಡುಗಡೆ ಮಾಡಬಾರದು. ಪೋಕ್ಸೋ ಕೇಸ್, ಮಹಿಳೆಯರ ಮೇಲೆ ಅಪರಾಧ ಎಸಗಿದ್ದರೆ ಅವರನ್ನು ಇದರಿಂದ ಹೊರಗಿಡಲು ತೀರ್ಮಾನ ಮಾಡಲಾಗಿದೆ ಎಂದರು.

ರೇಷ್ಮೆ ಇಲಾಖೆಗೆ ಬಲ ತುಂಬಲು ಗಣಕೀರಣಕ್ಕೆ ಮಾಡಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ 2 ಬೆಡ್ ರೂಂ 14 ಲಕ್ಷ ರೂ. ನೀಡಲಾಗಿದೆ. ವಸತಿ ಯೋಜನೆ ಹುಡ್ಕೋ ಸಾಲ‌ ಪಡೆದು ಮನೆ ನಿರ್ಮಾಣ ಬ್ಯಾಂಕ್ ಗ್ಯಾರಂಟಿಗೆ ,ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಗ್ಯಾರಂಟಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಮೈಸೂರು ವಿಮಾನ ನಿಲ್ದಾಣ 250 ಕೋಟಿ ರೂ. ಭೂಸ್ವಾಧೀನ ಮಾಡಿ ,ಮೈಸೂರು ನಿಲ್ದಾಣಕ್ಕೆ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಲಾಗುವುದು. 

ಜಲ ಜೀವನ್ ಮಿಷನ್ ಯೋಜನೆ ಅಡಿ ನೂರಾರು ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರದ ಜಿಲ್ಲೆ ಕುಂಬಳಗೋಡು72 ಗ್ರಾಮಗಳಿಗೆ 97.42 ಕೋಟಿ ರೂ. ಅನುಮೋದನೆ ಸಿಕ್ಕಿದೆ. 

ನಗರಾಭಿವೃದ್ಧಿ ಇಲಾಖೆ ನಿವೇಶನ ರಾಷ್ಟ್ರೋತ್ತಾನ ಪರಿಷತ್ ನಿವೇಶನ ಹಂಚಿಕೆ ಮಾಡಲಾಗಿದೆ. ಹಾಸನ ನಗರಾಭಿವೃದ್ಧಿ ಇಲಾಖೆ 1070 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಕರ್ನಾಟಕ ನೀರು ಸರಬರಾಜು ಮತ್ತು ಒಲಚರಂಡಿಗೆ 69.26 ಕೋಟಿ ನೀಡಿ ಹಂಚಿಕೆ ಮಾಡಲಾಗಿದೆ. ಚಿತ್ರದುರ್ಗ ಹಿರಿಯೂರಿಗೆ ಚರಂಡಿ, 12.17 ಕೋಟಿ ಅನುಮೋದನೆ ನೀಡಲಾಗಿದೆ. 

ಇದನ್ನೂ ಓದಿ : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News