ಬೆಂಗಳೂರು: ರಾಜ್ಯದಲ್ಲಿ ಸೌಹಾರ್ಧತೆ ಧಕ್ಕೆ ತರುವಂತಹ ಕೆಲಸವನ್ನು ಚಕ್ರವರ್ತಿ ಸೂಲಿಬೆಲೆ ಮುಂದುವರೆಸಿದ್ದೆ ಆದಲ್ಲಿ ಅವರನ್ನು ಜೈಲು ಕಂಬಿ ಎನಿಸುವ ಹಾಗೆ ಮಾಡುವುದಾಗಿ ಹೇಳಿದ್ದ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು "ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂ.ಬಿ.ಪಾಟೀಲ್ ಅವರು ಮರೆಯಬಾರದು.Fir ಮಾಡಿಸ್ತೀವಿ, ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ? ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಲ್ಲದು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗು ಅವರ ಮಂತ್ರಿಗಳು intolerant ಆಗಬಾರದು!ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿ ನಡೆಯುವುದು. Article 19 ಬಗ್ಗೆ ತಿಳಿದುಕೊಳ್ಳಬೇಕಾಗಿ ಎಂ.ಬಿ.ಪಾಟೀಲ್ ರಿಗೆ ತಾಕೀತು ಮಾಡುತ್ತೇನೆ ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...
ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...
ಎಂದಿರುವ @BasanagoudaBJP ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್, ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು… https://t.co/pWSm3H9yuK— M B Patil (@MBPatil) June 6, 2023
ಈಗ ಯತ್ನಾಳ್ ಅವರ ಈ ಟ್ವೀಟ್ ಗೆ ತಿರುಗೇಟು ನೀಡಿರುವ ಸಚಿವ ಎಂ.ಬಿ.ಪಾಟೀಲ್ "ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಮರೆಯಬಾರದು...ಜೈಲಿಗೆಕಳಿಸ್ತೀವಿ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರೇ...ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ಸಲ್ಲದು...ಎಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಕಳೆದ 4 ವರ್ಷಗಳ ಕಾಲ ಯೋಗಿ ಮಾಡೆಲ್, ಬುಲ್ಡೋಜರ್ ಮಾಡೆಲ್,ಎನ್ಕೌಂಟರ್ ಮಾಡೆಲ್, ಎಂದೆಲ್ಲಾ ನೀವು ಅಣಿಮುತ್ತು ಉದುರಿಸುವಾಗ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು?
ಸತತವಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮಿಂದ ಪಾಠ ಕಲಿಯಬೇಕಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.