ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಯಾಕ್ ಬರಬೇಕು...?

ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನಡೆಯಾಗಲಿದೆ, ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಜನರು ಅವರನ್ನು ಬೈದು ಕಳುಹಿಸುತ್ತಾರೆ, ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲಾ ಎಂದರು. 

Written by - Yashaswini V | Last Updated : Feb 27, 2023, 01:06 PM IST
  • ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರ ವಿರುದ್ಧ ಕಿಡಿಕಾರಿದ ಶಾಸಕ ಸಿ.ಪುಟ್ಟರಂಗಶೆಟ್ಟಿ.
  • ಬಿಜೆಪಿಯವರಿಗೆ ಸೋಲಿನ ಭಯ ಬಂದಿದೆ, ಅದಕ್ಕೆ ಬಿಜೆಪಿ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ.
  • ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅದಕ್ಕಾಗಿಯೇ ರಾಜ್ಯ ಕ್ಕೆ ಪದೇ ಪದೇ ಬರುತ್ತಿದ್ದಾರೆ- ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ
ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಯಾಕ್ ಬರಬೇಕು...?  title=
Congress MLA C. Puttarangshetty

ಚಾಮರಾಜನಗರ: ಬಿಜೆಪಿಗೆ ನಿಜಕ್ಕೂ ಗೆಲ್ಲುವ ಧೈರ್ಯ ಇದ್ದಿದ್ದರೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಯಾಕೆ ಇಷ್ಟು ಬಾರಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರಶ್ನೆ ಮಾಡಿದರು.

ಚಾಮರಾಜನಗರದಲ್ಲಿ ಮಾಧ್ಯಮದದವರೊಟ್ಟಿಗೆ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಇಷ್ಟು ಬಾರಿ ಬರ್ತಾ ಇದಾರಲ್ಲ ರಾಜ್ಯವೇ ಮಳೆಯಿಂದ ಮುಳುಗಿದಾಗ ಏಕೆ ಬರಲಿಲ್ಲ, ಕೊರೊನಾ ಅವಾಂತರದಲ್ಲಿ ಏಕೆ ಬರಲಿಲ್ಲ, ವಿಶೇಷ ಅನುದಾನ ಏಕೆ ಕೊಡಲಿಲ್ಲ..? ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಡೆಲ್ಲಿಯಲ್ಲೇ ಕುಳಿತು ಕೈ ಅಲ್ಲಾಡಿಸಬೇಕಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ- ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಪೊರಕೆಯೇ ಪರಿಹಾರ: ಎಎಪಿ ಅಭ್ಯರ್ಥಿ ಬಿ‌ಕೆ ಶಿವಪ್ಪ

ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನಡೆಯಾಗಲಿದೆ, ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಜನರು ಅವರನ್ನು ಬೈದು ಕಳುಹಿಸುತ್ತಾರೆ, ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲಾ ಎಂದರು. 

ಬಿಜೆಪಿಯೇ ಭರವಸೆ ಎಂದು ಗೋಡೆಗಳಲ್ಲಿ ಬರೆದುಕೊಂಡಿದ್ದಾರಷ್ಟೆ, 100 ಕ್ಕೆ 100 ರಷ್ಟು ಸುಳ್ಳು ಹೇಳುವ ಸರ್ಕಾರ ಇದ್ದರೇ ಅದು ಬಿಜೆಪಿ ಮಾತ್ರ. ಒಂದಾದರು ಸತ್ಯ ಹೇಳಲಿ ನೋಡೋಣ, ಸಿದ್ದರಾಮಯ್ಯ ಅವಧಿಯಲ್ಲಷ್ಟೇ ಚಾಮರಾಜನಗರ ಅಭಿವೃದ್ಧಿಯಾಗಿದ್ದು ಬಿಜೆಪಿ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಕಿಡಿಕಾರಿದ್ದಾರೆ. 

ಇದನ್ನೂ ಓದಿ- R Ashok : ಬೆಂಗಳೂರಲ್ಲೇ ಮನೆ ಮಾಡಲಿದ್ದಾರೆ ಕೇಂದ್ರ ಸಚಿವ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್!

ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಆರಂಭಿಸಿದ್ದ ಯೋಜನೆಗಳಿಗೆ ಮುಂದುವರಿಕೆ ಭಾಗವಾಗಿ ಹಣ ಕೊಟ್ಟಿದ್ದಾರೆಯೇ ಹೊರತು ಹೊಸ ಅನುದಾನ ಯಾವುದು ಬಂದಿಲ್ಲ. ಅನುದಾನ ಕೊಡುವುದಾಗಿ ಚಾಮರಾಜನಗರದಲ್ಲಿ ಹೇಳಿದ ಸಿಎಂ ಬೆಂಗಳೂರಿಗೆ ಹೋಗಿ ರಿಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News