ಬೆಂಗಳೂರು: 14 ವರ್ಷದ ವಿಕಲಚೇತನ ಮಗಳನ್ನ ಹೆತ್ತ ತಾಯಿಯೇ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಾಂಕಾ ತಾಯಿಯಿಂದ ಹತ್ಯೆಯಾದ ಮಗಳಾಗಿದ್ದಾಳೆ. ಮಗಳನ್ನು ಕೊಂದು ತಾಯಿ ಸುಮಾ ಸದ್ಯ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಸುಮಾ ಅನೇಕ ವರ್ಷಗಳಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸನ್ನ ಲೇಔಟ್ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಳು. ಒಂದು ವರ್ಷದ ಹಿಂದೆ ಈಕೆಯ ಪತಿ ಮೃತಪಟ್ಟಿದ್ದ. ಆದಾದ ಕೆಲ ದಿನಗಳಲ್ಲಿ ಮೂರು ವರ್ಷದ ಮಗುವನ್ನು ಸಹ ಸುಮಾ ಕಳೆದುಕೊಂಡಿದ್ದಳು. ಈಗ ಸುಮಾಳಿಂದ ಹತ್ಯೆಯಾಗಿರುವ ಪ್ರಿಯಾಂಕಾ ಸಹ ವಿಶೇಷಚೇತನೆಯಾಗಿದ್ದಳು.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ವಿರುದ್ಧ ಖಂಡನಾ ನಿರ್ಣಯ ಮಂಡನೆ; ಸದನದ ಒಮ್ಮತ ನಿರ್ಧಾರ
ಇದರಿಂದ ಸಾಕಷ್ಟು ನೊಂದಿದ್ದ ಸುಮಾ ಖಿನ್ನತೆಗೆ ಒಳಗಾಗಿದ್ದಳು. ಸುಮಾ ಇದಕ್ಕೂ ಮುನ್ನ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಅದೃಷ್ಟವಾಷತ್ ಪ್ರಾಣಪಾಯದಿಂದ ಪಾರಾಗಿದ್ದಳು. ಮೃತ ಪ್ರಿಯಾಂಕಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಿನ್ನೆ ತಾನೇ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು. ಆದರೆ ಗಂಡ ಹಾಗೂ ಮಗುವನ್ನು ಕಳೆದುಕೊಂಡ ನೋವು ಒಂದು ಕಡೆ. ಇದ್ದೊಬ್ಬ ಮಗಳು ಸಹ ವಿಶೇಷಚೇತನೆಯಾಗಿದ್ದರಿಂದ ಮನನೊಂದ ಸುಮಾ ಇಂದು ಮನೆಯಲ್ಲೇ ಮಗಳನ್ನು ಕೊಂದು ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಗಂಭೀರ ಪರಿಸ್ಥಿತಿಯಲ್ಲಿರುವ ಸುಮಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಡರಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೆನೇ ಇರ್ಲಿ. ಜೀವನದಲ್ಲಿ ಎಲ್ಲರಿಗೂ ನೋವು ನಲಿವು ಸಹಜ. ಆದರೆ ದುಡುಕಿನ ನಿರ್ಧಾರಕ್ಕೆ ಬಿದ್ದ ಸುಮಾ ಇದ್ದೊಬ್ಬ ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿ ಈಗ ಜೈಲು ಪಾಲಾಗುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.