N.Mahesh: ಒಂದು ವೇಳೆ ವಿದ್ಯಾರ್ಥಿಗಳು ಕಾಪಿ ಹೊಡೆದರೆ ಏನು ತಪ್ಪು, ಅದು ಮಹಾ ಅಪರಾಧವೇ?-ಎನ್.ಮಹೇಶ್

N.Mahesh: ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ,  ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ, ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ. ಅದಕ್ಕೆ ಸಿಸಿ ಕ್ಯಾಮರಾ ಬೇಕೆ ಎಂದು ಹೇಳಿದರು.

Written by - Manjunath N | Last Updated : Mar 25, 2024, 05:41 PM IST
  • ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ,
  • ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ, ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ.
  • ಅದಕ್ಕೆ ಸಿಸಿ ಕ್ಯಾಮರಾ ಬೇಕೆ ಎಂದು ಹೇಳಿದರು.
N.Mahesh: ಒಂದು ವೇಳೆ ವಿದ್ಯಾರ್ಥಿಗಳು ಕಾಪಿ ಹೊಡೆದರೆ ಏನು ತಪ್ಪು, ಅದು ಮಹಾ ಅಪರಾಧವೇ?-ಎನ್.ಮಹೇಶ್  title=
file photo

ಚಾಮರಾಜನಗರ: ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ ಎಲ್ಸಿ ಪರೀಕ್ಷೆ ಆರಂಭಗೊಂಡಿದ್ದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದಕ್ಕೆ ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok sabha Election 2024: ಲೋಕಸಭಾ ಚುನಾವಣೆಯ ನಂತರ ಬದಲಾಗ್ತಾರಾ ಸಿಎಂ? 

ಗುಂಡ್ಲುಪೇಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ..?, ವಿದ್ಯಾರ್ಥಿಗಳು ಏನು ಕಳ್ಳರೇ, ಪರೀಕ್ಷೆ ಬರೆಯುವುದಕ್ಕೆ ಭಯ ಪಡಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Chitradurga: ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು!

15-16 ವರ್ಷದ ಮಕ್ಕಳು ಕಷ್ಟಪಟ್ಟು ಓದಿಕೊಂಡು ಬಂದಿರುತ್ತಾರೆ ಆದರೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ, ಒಂದು ವೇಳೆ ಕಾಪಿ ಹೊಡೆದರೆ ಏನು ತಪ್ಪು, ಅದು ಮಹಾ ಅಪರಾಧವೇ ಎಂದು ಪ್ರಶ್ನೆ ಮಾಡಿದರು.

ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ,  ಅವರು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ, ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ. ಅದಕ್ಕೆ ಸಿಸಿ ಕ್ಯಾಮರಾ ಬೇಕೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News