ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿರುವ ನಳೀನ್ ಕುಮಾರ್ ಕಟೀಲ್: ಆರೋಪ

ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಸರ್ವನಾಶ ಆಗಲಿದೆ. ನಳೀನ್ ಕುಮಾರ್ ಕಟೀಲ್, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Oct 13, 2019, 04:10 PM IST
ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿರುವ ನಳೀನ್ ಕುಮಾರ್ ಕಟೀಲ್: ಆರೋಪ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲಿಂಗಾಯತರನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆ ಪಕ್ಷದ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕರಾದ ಮೇಲೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್, ಅರುಣ್ ಸೇರಿದಂತೆ ಐವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಲಿಂಗಾಯತರ ಎಂಬ ಕಾರಣಕ್ಕೆ ಮತ್ತು ಇವರೆಲ್ಲರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡೆಯವರು ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಿದ್ದಾರೆ. ಇದಕ್ಕಿಂತ ಮಿಗಿಲಾಗಿ ಲಿಂಗಾಯತರು ಕಚೇರಿಗೆ ಬರದಂತೆ ನಿರ್ಬಂಧವನ್ನೂ ಹೇರಿದ್ದಾರೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ಸರ್ವನಾಶ ಆಗಲಿದೆ. ನಳೀನ್ ಕುಮಾರ್ ಕಟೀಲ್, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ಅವರನ್ನು ನಿರ್ಲ್ಯಕ್ಷ ಮಾಡಿದ್ದಾಗ ಪ್ರಮುಖ ಬಿಜೆಪಿ ವಿರೋಧ ಪಕ್ಷದವಾಗಿ ಕೂಡ ಹೊರಹೊಮ್ಮಿರಲಿಲ್ಲ. ಹಿಂದಿನ ಚಾಳಿ ಮುಂದುವರೆಸಿದರೆ ಮತ್ತೆ ಬಿಜೆಪಿಗೆ ಕಷ್ಟ ಆಗಲಿದೆ. ಉತ್ತರ ಕರ್ನಾಕದ ಪರಿಹಾರ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಾಜ್ಯದ ಜನರ ನರೇಂದ್ರ ಮೋದಿ‌ ನೋಡಿಕೊಂಡು ಬಿಜೆಪಿಗೆ ಮತ ನೀಡಿಲ್ಲ. ಯಡಿಯೂರಪ್ಪರನ್ನು ನೋಡಿ ಓಟ್ ಹಾಕಿದ್ದಾರೆ. ಲಿಂಗಾಯತರು ಈಗ ಎಚ್ಚರಿಕೆ ವಹಿಸಬೇಕು. ಯಡಿಯೂರಪ್ಪ ಪರ ನಿಲಬೇಕು ಎಂದು  ಬಿಜೆಪಿ ಕಾರ್ಯಕರ್ತ ನಂಜುಂಡ ಸ್ವಾಮಿ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.

More Stories

Trending News