ಮೆಟ್ರೋದಲ್ಲಿ ಕನ್ನಡ ಬೋರ್ಡ್ ಯಾಕಿಲ್ಲ ? ಎಂದ ಸಂಸದ ಜಿ.ಸಿ.ಚಂದ್ರಶೇಖರ್ ಗೆ ಉಪರಾಷ್ಟ್ರಪತಿ ಬೆಂಬಲ..!

ಬೆಂಗಳೂರು ಮೆಟ್ರೋದಲ್ಲಿ ಕನ್ನಡ ನಾಮಫಲಕ ಹಾಕಲು ಸಮಸ್ಯೆ ಏನು? ಎಂದು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

Last Updated : Feb 10, 2021, 06:56 PM IST
  • ಎಲ್ಲಾ ಮೆಟ್ರೋಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು.ಹಾಗಂತ ಉಳಿದ ಭಾಷೆಗಳನ್ನು ವಿರೋಧಿಸುವುದಂತಲ್ಲ, ಸಾಮಾನ್ಯವಾಗಿ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದರಿಂದ ಸ್ಥಳೀಯ ಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು.
ಮೆಟ್ರೋದಲ್ಲಿ ಕನ್ನಡ ಬೋರ್ಡ್ ಯಾಕಿಲ್ಲ ? ಎಂದ ಸಂಸದ ಜಿ.ಸಿ.ಚಂದ್ರಶೇಖರ್ ಗೆ ಉಪರಾಷ್ಟ್ರಪತಿ ಬೆಂಬಲ..!  title=

ನವದೆಹಲಿ: ಬೆಂಗಳೂರು ಮೆಟ್ರೋದಲ್ಲಿ ಕನ್ನಡ ನಾಮಫಲಕ ಹಾಕಲು ಸಮಸ್ಯೆ ಏನು? ಎಂದು ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯಸಭೆಯಲ್ಲಿನ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಂಸದ ಜಿ.ಸಿ.ಚಂದ್ರಶೇಖರ್ "ನಮ್ಮ ಮೆಟ್ರೋದಲ್ಲಿ ಸೂಚನೆಗಳನ್ನು ಕನ್ನಡದಲ್ಲಿ ನೀಡದಿರುವುದರಿಂದಾಗಿ ಜನಸಾಮಾನ್ಯರು ದಿನನಿತ್ಯ ಪರಿಪಾಟಲು ಅನುಭವಿಸಬೇಕಾಗಿದೆ.ಕನ್ನಡ ಅಧಿಕೃತ ಭಾಷೆಯಾಗಿದ್ದರೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ.ಕನ್ನಡದಲ್ಲಿ ನಾಮಫಲಕ ಹಾಕಲು ಕೇಂದ್ರ ಸರ್ಕಾರಕ್ಕಿರುವ ಸಮಸ್ಯೆಯಾದರೂ ಏನು? ಎಂದು ರಾಜ್ಯಸಭೆಯ ಗಮನ ಸೆಳೆದರು.

ಇದೇ ವೇಳೆ ಚಂದ್ರಶೇಖರ್ (G. C. Chandrashekhar) ಅವರ ಪ್ರಶ್ನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು (Venkaiah Naidu) ಎಲ್ಲಾ ಮೆಟ್ರೋಗಳಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು.ಹಾಗಂತ ಉಳಿದ ಭಾಷೆಗಳನ್ನು ವಿರೋಧಿಸುವುದಂತಲ್ಲ, ಸಾಮಾನ್ಯವಾಗಿ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದರಿಂದ ಸ್ಥಳೀಯ ಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕೆಂದರು.ಇದಕ್ಕೆ ಕೇಂದ್ರ ಸಚಿವ ಪುರಿ ಈ ವಿಚಾರವಾಗಿ ಚರ್ಚಿಸಲಾಗುವುದು ಎಂದು ಉತ್ತರಿಸಿದರು.

ಇದನ್ನೂ ಓದಿ: ಕೊರೊನಾ ಗೆದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದೇನು?

ಇದಕ್ಕೂ ಮೊದಲು ಬೆಂಗಳೂರು ಸಬ್ ಅರ್ಬನ್ ಯೋಜನೆ ವಿಚಾರವನ್ನು ಪ್ರಸ್ತಾಪಿಸಿದ ಜಿ.ಸಿ.ಚಂದ್ರಶೇಖರ್ " ಬೆಂಗಳೂರಿನ ಜನದಟ್ಟಣೆಯನ್ನು ನಿರ್ವಹಿಸಲು ಈ ಯೋಜನೆ ಮಹತ್ವದ್ದಾಗಿದೆ.ಆದರೆ ಈ ಯೋಜನೆ ಈ 2018-19 ರಲ್ಲೇ ಘೋಷಣೆಯಾಗಿದೆ, ಆದಾಗ್ಯೂ ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ, ಅಷ್ಟೇ ಅಲ್ಲದೆ ಕೆಲಸವೂ ಕೂಡ ಪ್ರಾರಂಭಗೊಂಡಿಲ್ಲ, ಆದ್ದರಿಂದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಿದೆ? ಎಂದು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ 'ರಾಜ್ಯ ಸರ್ಕಾರವು ಈ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಕೆಲವು ಕಡೆ ಅರಣ್ಯ ಪ್ರದೇಶ ಇರುವುದರಿಂದಾಗಿ ಯೋಜನೆಗೆ ಚಾಲನೆ ನೀಡಲು ವಿಳಂಬವಾಗುತ್ತಿದೆ.ಒಂದು ವೇಳೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು' ಎಂದು ಸಚಿವರು ಉತ್ತರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News