ನವದೆಹಲಿ: ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರವು 'ಭಾರತರತ್ನ' ಪುರಸ್ಕಾರ ಘೋಷಣೆ ಮಾಡಿದ್ದರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದಾರೆ. ಸಂಸತ್ ಅಧಿವೇಶನದ ಬಜೆಟ್ ಕಲಾಪದ ಕೊನೆಯ ದಿನವಾದ ಶನಿವಾರ ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡರು, ʼಇಂತಹ ಅನನ್ಯ ಸಾಧಕರಿಗೆ ಭಾರತ ರತ್ನ ಘೋಷಣೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಭಿನ್ನಾಭಿಪ್ರಾಯಗಳು ಬರಬಾರದು. ದೇಶದ ಅತ್ಯುನ್ನತ ಪುರಸ್ಕಾರಕ್ಕೆ ಈ ಮೂವರು ಮಹನೀಯರನ್ನು ಆಯ್ಕೆ ಮಾಡಿದ್ದಕ್ಕೆ ಇಡೀ ದೇಶವೇ ಸ್ವಾಗತಿಸಿ ಸಂತೋಷ ವ್ಯಕ್ತಪಡಿಸಿದೆ ಅಂತಾ ಹೇಳಿದರು.
ಕೇಂದ್ರ ಸರ್ಕಾರವು ಈ ಗೌರವಕ್ಕೆ ಅರ್ಹರಾದ ಮಹಾನ್ ಸಾಧಕರನ್ನೇ ಆಯ್ಕೆ ಮಾಡಿದೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆ ಮಾಡುವುದು ಅಥವಾ ಟೀಕಿಸುವುದು ಸರಿಯಲ್ಲವೆಂದು ಹೇಳಿದ ದೇವೇಗೌಡರು, ಇದೇ ವೇಳೆ ಚರಣ್ ಸಿಂಗ್, ನರಸಿಂಹರಾವ್ ಹಾಗೂ ಸ್ವಾಮಿನಾಥನ್ ಅವರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಶ್ವೇತಪತ್ರ ಸಮರ!
ಶ್ರೀರಾಮದೇವರ ದೈವಿಕ ಆಶೀರ್ವಾದ
ಇದೇ ವೇಳೆ ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ತಾವು ತಮ್ಮ ಧರ್ಮಪತ್ನಿ ಸಮೇತ ಹಾಜರಾದ ಬಗ್ಗೆ ಮಾತನಾಡಿದ ದೇವೇಗೌಡರು, ʼಈ ದೈವಕಾರ್ಯದಲ್ಲಿ ನಾನು ನನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಭಾಗಿಯಾಗಿದ್ದೆ. ಈ ದೇಶವನ್ನು ಒಗ್ಗೂಡಿಸುವಿಕೆಯಲ್ಲಿ ಶ್ರೀರಾಮದೇವರ ದೈವಿಕ ಆಶೀರ್ವಾದವಿದೆ" ಎಂದರು. ಶ್ರೀರಾಮಮಂದಿರ ನಿರ್ಮಾಣದಿಂದ ಕೋಟ್ಯಂತರ ಭಾರತೀಯರ ಕನಸು ಸಾಕಾರವಾಗಿದೆ. ಅದು ನನ್ನ ಪಾಲಿಗೆ ಭಕ್ತಿ ಪರವಶತೆಯ ಕ್ಷಣವಾಗಿತ್ತು. ಶ್ರೀರಾಮದೇವರು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇರುವವನು ಎನ್ನುವುದಕ್ಕೆ ಅದುವೇ ಸಾಕ್ಷಿ. ಶ್ರೀರಾಮರು ಸದ್ವಿಚಾರಗಳು ಮತ್ತು ದಯೆ, ಪ್ರೀತಿಯ ಪ್ರತೀಕ. ಹೀಗಾಗಿ ಪ್ರತಿಯೊಬ್ಬರಿಗೂ ಆ ರಾಮನು ಆರಾಧ್ಯ ದೈವವಾಗಿದ್ದಾನೆ ಎಂದು ಬಣ್ಣಿಸಿದರು.
ಶ್ರೀರಾಮ ದೇವರ ತತ್ವಾದರ್ಶಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪ್ರಭಾವಿತರಾಗಿದ್ದರು. ಅಲ್ಲದೆ ಶ್ರೀರಾಮರನ್ನು ಬಾಪೂ ಅವರು ನಮ್ಮ ದೇಶದ ಸದ್ಗುಣಗಳ ಪ್ರತೀಕವನ್ನಾಗಿಸಿದರು. ಆ ರಾಮರ ಆಶೀರ್ವಾದ, ಕರುಣೆಯಿಂದಲೇ ಅವರು ಭಾರತವನ್ನು ಒಗ್ಗೂಡಿಸಿದರು ಎಂದು ದೇವೇಗೌಡರು ತಿಳಿಸಿದರು. ಶ್ರೀ ರಾಮಮಂದಿರವು ಜಗತ್ತಿಗೆ ಇಂತಹ ಸದ್ಗುಣ ಮತ್ತು ಮೌಲ್ಯಾದರ್ಶಗಳನ್ನು ಪಸರಿಸುವ ಸಂಕೇತವಾಗಿ ಬೆಳಗಲಿ ಎಂದ ಅವರು, ಪ್ರಾಣಪ್ರತಿಷ್ಠೆ ಕಾರ್ಯವನ್ನು ನೆರೆವೇರಿಸಲು ಪ್ರಧಾನಿ ಮೋದಿಯವರು ಕೈಗೊಂಡ ವ್ರತ, ಉಪವಾಸ, ಮತ್ತಿತರ ಕಠಿಣ ನಿಯಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಪಡಿಸಿದರು.
ಇದನ್ನೂ ಓದಿ: ರಾಜ್ಯ ಹೆದ್ದಾರಿ ಕಾಮಗಾರಿಗೆ ರೈತನ ಜಮೀನು ಭೂ ಸ್ವಾಧೀನ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.