ದಾಖಲೆಯ ದೂರ ಕ್ರಮಿಸಿದ ಬ್ಯಾಹಟ್ಟಿ ಗ್ರಾಮದ ಚಕ್ಕಡಿ: ಯಲ್ಲಮ್ಮನ ದರ್ಶನ ಪಡೆದ ಜೋಡೆತ್ತು!

ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಅಂದರೆ ನಿಜಕ್ಕೂ ಅದೊಂದು ಬಹುದೊಡ್ಡ ಉತ್ಸಾಹ ಅದರಲ್ಲೂ ಚಕ್ಕಡಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಸಂಭ್ರಮವೇ ಸಂಭ್ರಮ.ಇಂತಹ ಜಾತ್ರೆಯ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ರೈತ ಸಮುದಾಯ ಸೈ ಎಣಿಸಿಕೊಂಡಿದೆ.

Written by - Zee Kannada News Desk | Last Updated : Feb 12, 2023, 10:42 PM IST
  • ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಅಂದರೆ ನಿಜಕ್ಕೂ ಅದೊಂದು ಬಹುದೊಡ್ಡ ಉತ್ಸಾಹ
  • ಅದರಲ್ಲೂ ಚಕ್ಕಡಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಸಂಭ್ರಮವೇ ಸಂಭ್ರಮ.
  • ಇಂತಹ ಜಾತ್ರೆಯ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ರೈತ ಸಮುದಾಯ ಸೈ ಎಣಿಸಿಕೊಂಡಿದೆ.
ದಾಖಲೆಯ ದೂರ ಕ್ರಮಿಸಿದ ಬ್ಯಾಹಟ್ಟಿ ಗ್ರಾಮದ ಚಕ್ಕಡಿ: ಯಲ್ಲಮ್ಮನ ದರ್ಶನ ಪಡೆದ ಜೋಡೆತ್ತು! title=
screengrab

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆ ಅಂದರೆ ನಿಜಕ್ಕೂ ಅದೊಂದು ಬಹುದೊಡ್ಡ ಉತ್ಸಾಹ ಅದರಲ್ಲೂ ಚಕ್ಕಡಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಸಂಭ್ರಮವೇ ಸಂಭ್ರಮ.ಇಂತಹ ಜಾತ್ರೆಯ ಜೊತೆಗೆ ಶಕ್ತಿ ಪ್ರದರ್ಶನಕ್ಕೆ ರೈತ ಸಮುದಾಯ ಸೈ ಎಣಿಸಿಕೊಂಡಿದೆ.

ಇದನ್ನೂ ಓದಿ: “ಬೊಮ್ಮಾಯಿ, ಯಡಿಯೂರಪ್ಪ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ತಪ್ಪಿದ್ದಾರೆ”

ಈಗ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೈತರು ಸವದತ್ತಿ ಯಲ್ಲಮ್ಮ ಗುಡಕ್ಕೆ ಹೋಗಿ ಬರುವ ಮೂಲಕ ಸಾಹಸ ಪ್ರದರ್ಶನ ಮಾಡಿದ್ದಾರೆ.ಸಾಮಾನ್ಯವಾಗಿ ಒಂದೇದಿನದಲ್ಲಿ ವಾಹನಗಳನ್ನು ತೆಗೆದುಕೊಂಡು ಒಂದೇ ದಿನದಲ್ಲಿ ಹೋಗಿ ವಾಪಸ್ಸು ಬರುವುದು ಕಷ್ಟ ಹೀಗಿದ್ದರೂ ಕೂಡ ಎತ್ತಿನ ಚಕ್ಕಡಿಯ ಮೂಲಕ ಒಂದೇ ದಿನದಲ್ಲಿ ಹೋಗಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ವಾಪಸ್ ಬರುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಏರೋಸ್ಪೇಸ್ ಅಭಿವೃದ್ಧಿಯ ಶ್ರೇಯಸ್ಸು ಕರ್ನಾಟಕಕ್ಕೆ ಸಲ್ಲಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಎತ್ತಿನ ಒಡೆಯ ಸೋಮಶೇಖರ ಅಡಿವೆಪ್ಪ ಬೆಂಗೇರಿ ನೇತೃತ್ವದಲ್ಲಿ ಇಂತಹದೊಂದು ಸಾಹಸವನ್ನು ಮಾಡಿದ್ದಾರೆ.ಅವರು ಎತ್ತಿನ ಚಕ್ಕಡಿಯಲ್ಲಿಯೇ ಸುಮಾರು 120 ಕಿಲೋಮೀಟರ್ ಪ್ರಯಾಣಿಸಿದ್ದಾರೆ.ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳು ಕಡಿಮೆಯಾದ ಬೆನ್ನಲ್ಲೇ ರೈತರು ಎತ್ತುಗಳಿಗೆ ಮನರಂಜನೆಗೆ ಇಂತಹ ಷರತ್ತುಗಳನ್ನು ಏರ್ಪಡಿಸುವ ಮೂಲಕ ಸಂಭ್ರಮಿಸುವುದು ವಿಶೇಷವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News