ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಪೇ ಪಾರ್ಕಿಂಗ್; ಮೆಜೆಸ್ಟಿಕ್ ಸುತ್ತ 12 ಸ್ಥಳಗಳಲ್ಲಿ ಪಾರ್ಕಿಂಗ್ ಪ್ರಯೋಗ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಇದೀಗ ಮತ್ತೊಂದು ಬಿಸಿ ಶುರುವಾಗಲಿದೆ. ಪಾಲಿಕೆಯಿಂದ  ಪಾರ್ಕಿಂಗ್ ಶುಲ್ಕದ ಬರೆ ಎಳೆಯಲು ಮಂದಾಗಿದ್ದು, ನಗರದೆಲ್ಲೆಡೆ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.

Written by - Manjunath Hosahalli | Edited by - Manjunath N | Last Updated : Jul 6, 2022, 08:02 PM IST
  • ಪಾಲಿಕೆ ನಿಗಧಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನ ಪಾರ್ಕ್ ಮಾಡಬೇಕು. ಎಲ್ಲೆಂದರಲ್ಲಿ ಪಾರ್ಕ್ ಮಾಡಿದರೆ ದಂಡ ಬೀಳುತ್ತದೆ.
  • ಡಿಜಿಟಲ್ ವ್ಯವಸ್ಥೆಯ ಮೂಲಕ ಕೂಡ ಹಣ ಪಾವತಿಸಿ ವಾಹನವನ್ನು ಪಾರ್ಕಿಂಗ್ ಮಾಡಬಹುದು ಎಂದು ಹೇಳಿದ್ದಾರೆ.
ರಾಜಧಾನಿಯಲ್ಲಿ ಮತ್ತೆ ಶುರುವಾಯ್ತು ಪೇ ಪಾರ್ಕಿಂಗ್; ಮೆಜೆಸ್ಟಿಕ್ ಸುತ್ತ 12 ಸ್ಥಳಗಳಲ್ಲಿ ಪಾರ್ಕಿಂಗ್ ಪ್ರಯೋಗ title=

ಬೆಂಗಳೂರು: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಇದೀಗ ಮತ್ತೊಂದು ಬಿಸಿ ಶುರುವಾಗಲಿದೆ. ಪಾಲಿಕೆಯಿಂದ  ಪಾರ್ಕಿಂಗ್ ಶುಲ್ಕದ ಬರೆ ಎಳೆಯಲು ಮಂದಾಗಿದ್ದು, ನಗರದೆಲ್ಲೆಡೆ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.

ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಇನ್ನೂ, ಈ ಸ್ಥಳದಲ್ಲಿ ನಿಲ್ಲುವ ಎಲ್ಲಾ ಬಗೆಯ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ. ಸದ್ಯ ಸಮಯದ ಅನ್ವಯ ಶುಲ್ಕ ನಿಗಧಿ ಆಗಲಿದ್ದು, ಪ್ರತಿ ಗಂಟೆಗೆ 20ರೂ, ವಿಧಿಸುವ ಸಾಧ್ಯತೆ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ​Job Alert: ಕೃಷಿ ವಿವಿ ತಾತ್ಕಾಲಿಕ ಹುದ್ದೆಗಳಿಗೆ ಜು.21 ರಂದು ನೇರ ಸಂದರ್ಶನ

ಮೊದಲ ಹಂತದಲ್ಲಿ ಮೆಜೆಸ್ಟಿಕ್, ಗಾಂಧಿನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಪಾಲಿಕೆಯಿಂದ ಯೋಜನೆ ರೂಪಿಸಿದ್ದು, ಅದರಂತೆ ಪ್ರಾಯೋಗಿಕವಾಗಿ ನಗರದ ಗಾಂಧಿನಗರದಲ್ಲಿ ಚಾಲನೆ ಸಿಗಲಿದೆ ಎಂದಿದ್ದಾರೆ.

12 ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಪ್ರಯೋಗ;

ಗಾಂಧಿನಗರದ ಪ್ರಮುಖ 12 ರಸ್ತೆಗಳನ್ನು ಪಾರ್ಕಿಂಗ್ ವ್ಯವಸ್ಥೆ ಗೆ ಅಳವಡಿಕೆ ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ. ಇಲ್ಲಿನ ಗಾಂಧಿನಗರದ 2,3,4,5,6 ನೇ ಕ್ರಾಸ್‌ ರಸ್ತೆಗಳು, 
ಯಾದವ್ ಹಾಸ್ಟೆಲ್ ರಸ್ತೆ, 
ಸ್ವಪ್ನ ಬುಕ್ ಹೌಸ್ ರಸ್ತೆ, 
ಶೇಷಾದ್ರಿ ರಸ್ತೆ, 
ರಾಮಚಂದ್ರ ರಸ್ತೆ, 
ಫ್ರೀಡಂ ಪಾರ್ಕ್ ರಸ್ತೆಗಳಲ್ಲಿ ಯಾವುದೇ ವಾಹನ ನಿಲ್ಲಿಸಿದ್ರೆ ವಾಹನಕ್ಕೆ ತಕ್ಕಂತೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಿಜಿಟಲ್ ಪೇ ಆಂಡ್ ಪಾರ್ಕ್ ವ್ಯವಸ್ಥೆ;

ಪಾಲಿಕೆ ನಿಗಧಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನ ಪಾರ್ಕ್ ಮಾಡಬೇಕು. ಎಲ್ಲೆಂದರಲ್ಲಿ ಪಾರ್ಕ್ ಮಾಡಿದರೆ ದಂಡ ಬೀಳುತ್ತದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಕೂಡ ಹಣ ಪಾವತಿಸಿ ವಾಹನವನ್ನು ಪಾರ್ಕಿಂಗ್ ಮಾಡಬಹುದು ಎಂದು ಹೇಳಿದ್ದಾರೆ.

ಗಾಂಧಿನಗರದಲ್ಲಿ ಮೊದಲ ಪ್ರಯೋಗ; 

ಸದ್ಯಕ್ಕೆ ಗಾಂಧಿನಗರದಲ್ಲಿ ಈ ವ್ಯವಸ್ಥೆಗೆ ಚಾಲನೆ ಸಿಗಲಿದ್ದು, ಹಂತ ಹಂತವಾಗಿ ಎಂಜಿ ರಸ್ತೆ, ಕಮರ್ಶಿಯಲ್ ಸ್ಟ್ರೀಟ್ ಸೇರಿದಂತೆ ಅನೇಕ ಕಡೆ ಪಾರ್ಕಿಂಗ್ ಶುಲ್ಕ ಕಡ್ಡಾಯವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News